ಬ್ರೇಕಿಂಗ್ ನ್ಯೂಸ್
08-11-24 10:49 pm HK News Desk ದೇಶ - ವಿದೇಶ
ಮುಂಬೈ, ನ.8: ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ, ದಾವೂದ್ ಇಬ್ರಾಹಿಂ ಅವರ ಭಾವಚಿತ್ರವುಳ್ಳ ಟೀ ಶರ್ಟ್ ಮಾರಾಟಕ್ಕಿಟ್ಟಿರುವ ಆನ್ಲೈನ್ ಕಂಪನಿಗಳ ವಿರುದ್ಧ ಮುಂಬೈನಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳ ಟೀ ಶರ್ಟ್ ಸೇಲ್ ಮಾಡುವ ಮೂಲಕ ಸಮಾಜಕ್ಕೆ ನೆಗೆಟಿವ್ ಸಂದೇಶ ನೀಡಲಾಗುತ್ತಿದೆ ಎಂದು ಆರೋಪಿಸಿ ಪ್ರಕರಣ ದಾಖಲು ಮಾಡಲಾಗಿದೆ.
ಇ-ಕಾಮರ್ಸ್ ಪ್ಲಾಟ್ ಫಾರಂಗಳಾದ ಫ್ಲಿಪ್ ಕಾರ್ಟ್, ಆಲಿ ಎಕ್ಸ್ ಪ್ರೆಸ್, ಟೀ ಶಾಪರ್, ಇಟ್ಸಿ ಎನ್ನುವ ಆನ್ಲೈನ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಪೆಷಲ್ ಐಜಿಪಿ ಕಚೇರಿಯ ಅಧಿಕಾರಿಗಳು ಮಹಾರಾಷ್ಟ್ರ ಸ್ಟೇಟ್ ಸೈಬರ್ ವಿಭಾಗದಲ್ಲಿ ಕೇಸು ದಾಖಲಿಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯ ಜಾಲತಾಣ ಪೋಸ್ಟ್, ಆನ್ಲೈನ್ ಕಂಟೆಂಟ್ ಬಗ್ಗೆ ಸೈಬರ್ ಅಪರಾಧ ವಿಭಾಗದವರು ನಿಗಾ ಇಡುತ್ತಾರೆ. ಎರಡು ದಿನಗಳ ಹಿಂದೆ ಲಾರೆನ್ಸ್ ಬಿಷ್ಣೋಯಿ ಟೀ ಶರ್ಟ್ ಮಾರುಕಟ್ಟೆಗೆ ಬಂದ ಬೆನ್ನಲ್ಲೇ ದಾವೂದ್ ಇಬ್ರಾಹಿಂ ಚಿತ್ರವುಳ್ಳ ಟೀಶರ್ಟ್ ಕೂಡ ಮಾರುಕಟ್ಟೆಗೆ ಬಂದಿದ್ದವು.
ಜನಪ್ರಿಯ ಆನ್ಲೈನ್ ಮಾರುಕಟ್ಟೆಯಲ್ಲಿ ಇಂತಹ ಟೀಶರ್ಟ್ ಗಳನ್ನು ಮಾರಾಟಕ್ಕಿಡುವ ಮೂಲಕ ಯುವಕರ ಮನಸ್ಸು ಕೆಡಿಸಿ, ಅಪರಾಧ ಲೋಕದತ್ತ ಸೆಳೆಯುತ್ತದೆ. ಅಪರಾಧ ಲೋಕದವರನ್ನು ತಮ್ಮ ಐಕಾನ್ ಆಗುವಂತೆ ಪ್ರೇರೇಪಣೆ ನೀಡುತ್ತದೆ. ಅಲ್ಲದೆ, ದಾವೂದ್ ಇಬ್ರಾಹಿಂ ಮತ್ತು ಲಾರೆನ್ಸ್ ಬಿಷ್ಣೋಯಿ ಅವರಂಥ ಕ್ರಿಮಿನಲ್ ಗಳು ಮಾಡಿರುವ ಅಪರಾಧಗಳನ್ನು ಸಮಾಜಕಂಟಕ ಅಲ್ಲ ಎನ್ನುವ ಭಾವನೆ ಜನರಲ್ಲಿ ಮೂಡಿಸುತ್ತದೆ. ಈ ರೀತಿಯ ನಡೆಗಳು ಯುವಕರಲ್ಲಿ ಅಪಾಯಕಾರಿ ಸಂದೇಶವನ್ನು ನೀಡುತ್ತದೆ ಎಂದು ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ಪ್ರಕರಣ ದಾಖಲು ಮಾಡಿದ್ದಾರೆ.
ಟೀ ಶರ್ಟ್ ಉತ್ಪಾದಕರು ಮತ್ತು ಅದನ್ನು ಮಾರಾಟಕ್ಕಿಟ್ಟವರು ಇದರ ಹೊಣೆ ಹೊರಬೇಕಾಗುತ್ತದೆ ಎಂದು ಅವರಿಬ್ಬರ ಮೇಲೂ ಐಟಿ ಏಕ್ಟ್ 67 ಸೇರಿದಂತೆ ಸೈಬರ್ ಅಪರಾಧ ಸೆಕ್ಷನ್ ಗಳಾದ 192, 196, 353 ಅಡಿ ಕೇಸು ದಾಖಲಿಸಲಾಗಿದೆ.
The Maharashtra cyber police Wednesday registered a First Information Report (FIR) against several e-commerce platforms and sellers for selling t-shirts that glorify gangsters, including Lawrence Bishnoi and Dawood Ibrahim.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm