ಬ್ರೇಕಿಂಗ್ ನ್ಯೂಸ್
04-11-24 03:28 pm HK News Desk ದೇಶ - ವಿದೇಶ
ಲಕ್ನೋ, ನ.4: ಹೊಟ್ಟೆ ನೋವೆಂದು ವೈದ್ಯರಲ್ಲಿಗೆ ಬಂದಿದ್ದ 15 ವರ್ಷದ ಬಾಲಕನ ಹೊಟ್ಟೆಯಲ್ಲಿ ಬ್ಯಾಟರಿ, ಬ್ಲೇಡ್, ಉಗುರು, ವಾಚ್, ಲೋಹದ ಮಾದರಿ ಸೇರಿದಂತೆ 56 ವಸ್ತುಗಳು ಪತ್ತೆಯಾದ ಘಟನೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ. 9ನೇ ತರಗತಿ ಓದುತ್ತಿದ್ದ ಆದಿತ್ಯ ಹೆಸರಿನ ವಿದ್ಯಾರ್ಥಿ ವೈದ್ಯರು ಸರ್ಜರಿ ನಡೆಸಿದ ಬಳಿಕ ಮೃತಪಟ್ಟಿದ್ದಾನೆ.
ತೀವ್ರ ಹೊಟ್ಟೆನೋವು ಮತ್ತು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಆತನನ್ನು ಹತ್ರಾಸ್ ಮತ್ತು ಆಬಳಿಕ ಜೈಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದ ಬಳಿಕವೂ ಬಾಲಕನ ಸ್ಥಿತಿ ಸುಧಾರಿಸಿರಲಿಲ್ಲ. ಆನಂತರ, ಬಾಲಕನ್ನು ಆಲೀಗಢದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಉಸಿರಾಟದ ತೊಂದರೆ ಇದ್ದುದರಿಂದ ಮೂಗಿನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಉಸಿರಾಟದ ಸಮಸ್ಯೆ ಸರಿಯಾದರೂ, ಹೊಟ್ಟೆ ನೋವು ಕಡಿಮೆಯಾಗಿರಲಿಲ್ಲ.
ಬಳಿಕ ಆಲ್ಟ್ರಾಸೌಂಡ್ ನಡೆಸಿದಾಗ, ಹೊಟ್ಟೆಯಲ್ಲಿ 19 ಲೋಹದ ವಸ್ತುಗಳು ಪತ್ತೆಯಾಗಿದ್ದವು. ಹೀಗಾಗಿ ನೋಯ್ಡಾದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಶಿಫಾರಸು ಮಾಡಲಾಗಿತ್ತು. ನೋಯ್ಡಾದಲ್ಲಿ ಸ್ಕ್ಯಾನ್ ಮಾಡಿದಾಗ, ಸುಮಾರು 56 ಮಾದರಿಯ ವಸ್ತುಗಳು ಹೊಟ್ಟೆಯಲ್ಲಿ ತುಂಬಿಕೊಂಡಿರುವುದು ಕಂಡುಬಂದಿತ್ತು. ಅಲ್ಲಿನ ವೈದ್ಯರ ಸೂಚನೆಯಂತೆ, ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ದಾಖಲಿಸಿ ಅ.27ರಂದು ಸರ್ಜರಿ ನಡೆಸಲಾಗಿತ್ತು. ಒಂದು ದಿನದ ಬಳಿಕ ಬಾಲಕನ ಎದೆ ಬಡಿತ ಹೆಚ್ಚು ಕಮ್ಮಿ ಆಗಿ ಮೃತಪಟ್ಟಿದ್ದ.
ಇಷ್ಟೊಂದು ಲೋಹದ ವಸ್ತುಗಳು ಬಾಲಕನ ಹೊಟ್ಟೆ ಸೇರಿದ್ದು ಹೇಗೆ ಎನ್ನುವುದು ವೈದ್ಯರು ಮತ್ತು ಹುಡುಗನ ಹೆತ್ತವರಿಗೆ ಅಚ್ಚರಿಯಾಗಿದೆ. ಹುಡುಗ ಬಾಯಿ ಮೂಲಕ ನುಂಗಿದ್ದರೂ, ಶ್ವಾಸಕೋಶಕ್ಕೆ ಪೆಟ್ಟಾಗಬೇಕಿತ್ತು. ಆದರೆ ಕುತ್ತಿಗೆ ಅಥವಾ ಶ್ವಾಸಕೋಶದಲ್ಲಿ ಯಾವುದೇ ಗಾಯದ ಗುರುತು ಕಂಡುಬಂದಿಲ್ಲ ಎಂದು ವೈದ್ಯರು ಹೇಳುತ್ತಾರೆ.
As many as 56 objects, including watch batteries, blades, nails, and other metal particles, were removed from the stomach of a 15-year-old boy in Uttar Pradesh’s Hathras after he complained of stomach pain and difficulty in breathing. However, the boy, a Class 9 student, died during treatment after the surgery.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 12:35 pm
Mangalore Correspondent
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm