ಬ್ರೇಕಿಂಗ್ ನ್ಯೂಸ್
28-10-24 08:38 pm HK News Desk ದೇಶ - ವಿದೇಶ
ಎರ್ನಾಕುಲಂ, ಅ.28: ಕೇರಳದಲ್ಲಿ ಅಡುಗೆ ಸಂಬಂಧಿತ ಯೂಟ್ಯೂಬರ್ ಆಗಿ ಹೆಸರು ಮಾಡಿದ್ದ ದಂಪತಿ ದಿಢೀರ್ ಸಾವಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಎರ್ನಾಕುಲಂ ಜಿಲ್ಲೆಯ ಪರಶ್ಶಲಾ ಗ್ರಾಮದಲ್ಲಿ ನಡೆದಿದೆ. ಸೆಲ್ಲು ಫ್ಯಾಮಿಲಿ ಹೆಸರಿನ ಯೂಟ್ಯೂಬ್ ನಡೆಸುತ್ತಿದ್ದ ಪ್ರಿಯಾ (38) ಮತ್ತು ಆಕೆಯ ಪತಿ ಸೆಲ್ವರಾಜ್ (45) ಮೃತರು.
ದಂಪತಿಯ ಮಗ ಎರ್ನಾಕುಲಂನಲ್ಲಿ ನರ್ಸಿಂಗ್ ಓದುತ್ತಿದ್ದು, ಶುಕ್ರವಾರ ರಾತ್ರಿ ಫೋನಲ್ಲಿ ಮಾತನಾಡಿದ್ದ. ಮರುದಿನ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಹೀಗಾಗಿ ಶನಿವಾರ ಸಂಜೆಯ ವೇಳೆಗೆ ಮಗ ಮನೆಗೆ ಆಗಮಿಸಿದ್ದು, ತಾಯಿ ಪ್ರಿಯಾ ಬೆಡ್ ನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿದ್ದರೆ, ತಂದೆ ನೇಣಿಗೆ ಶರಣಾಗಿರುವ ರೀತಿ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೆಲ್ಲು ಫ್ಯಾಮಿಲಿ ಹೆಸರಿನ ಯೂಟ್ಯೂಬ್ ನಲ್ಲಿ ದಿನವೂ ಇವರು ವಿಡಿಯೋ ಅಪ್ಲೋಡ್ ಮಾಡುತ್ತಿದ್ದರು. ಶುಕ್ರವಾರ ರಾತ್ರಿ 9 ಗಂಟೆಗೆ 55 ಸೆಕೆಂಡಿನ ವಿಡಿಯೋ ಹಾಕಿದ್ದು, ಅದರಲ್ಲಿ ಸಾವಿನ ಕಡೆಗೆ ಅಂತಿಮ ಯಾತ್ರೆ ಎನ್ನುವ ಅರ್ಥವುಳ್ಳ ಸಾಲುಗಳ ಸಾಂಗ್ ಬಳಸಿದ್ದರು. ಹೀಗಾಗಿ ಇವರು ಮೊದಲೇ ಸಾವಿಗೆ ಶರಣಾಗುವ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದರೇ ಅನ್ನುವ ಅನುಮಾನ ಬಂದಿದೆ. ಪರಿಸರದ ನಿವಾಸಿಗಳು ಇವರ ದಿಢೀರ್ ಸಾವಿನ ಬಗ್ಗೆ ಅಚ್ಚರಿಗೊಂಡಿದ್ದಾರೆ. ಮನೆಗೆ ಮಕ್ಕಳು ಬಿಟ್ಟರೆ, ಪ್ರಿಯಾ ತಾಯಿ ಮಾತ್ರ ಬರುತ್ತಿದ್ದರು. ವರ್ಷದ ಹಿಂದೆ ಮಗಳಿಗೆ ಮದುವೆಯಾಗಿತ್ತು. ಮನೆಯಲ್ಲಿ ಇಬ್ಬರೇ ಹೆಚ್ಚಾಗಿ ಇರುತ್ತಿದ್ದರು. ಮನೆ ಕಟ್ಟುವುದಕ್ಕಾಗಿ ಜಾಗ ಖರೀದಿಯನ್ನೂ ಮಾಡಿದ್ದರು ಎಂದು ಸ್ಥಳೀಯರು ಮನೋರಮಾ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಪ್ರಿಯಾ ಹಿಂದೆ ಕುಟುಂಬಶ್ರೀಯಲ್ಲಿ ಸಕ್ರಿಯವಾಗಿದ್ದರು. ಆನಂತರ, ಅದನ್ನು ಬಿಟ್ಟು ಯೂಟ್ಯೂಬಲ್ಲಿ ಮಾತ್ರ ಸಕ್ರಿಯವಾಗಿದ್ದರು. ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಿರಲಿಲ್ಲ. ಈಕೆಯ ಪತಿ ಸೆಲ್ವರಾಜ್ ಮೇಸ್ತ್ರಿಯಾಗಿದ್ದು, ಸ್ಥಳೀಯರ ಜೊತೆಗೆ ಮಾತ್ರ ಬೆರೆಯುತ್ತಿದ್ದರು. ಸಂಬಂಧಿಕರ ಜೊತೆಗೆ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
A couple, who ran a YouTube channel, was found dead at their residence in Kerala's Parassala town on Sunday, with the police suspecting it as a case of death by suicide. The incident came to light after their neighbours, who noticed an unusual absence, alerted the police.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 12:19 pm
HK News Staffer
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm