ಬ್ರೇಕಿಂಗ್ ನ್ಯೂಸ್
25-10-24 10:51 pm HK News Desk ದೇಶ - ವಿದೇಶ
ಅಹ್ಮದಾಬಾದ್, ಅ.25: ನ್ಯಾಯಾಲಯ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿ ನಕಲಿ ಕೋರ್ಟ್ ಸ್ಥಾಪಿಸಿ ಭೂವ್ಯಾಜ್ಯಗಳ ಕುರಿತಾಗಿ ತೀರ್ಪು ನೀಡಿ ಸರಕಾರಕ್ಕೆ ವಂಚಿಸುತ್ತಿದ್ದ ವ್ಯಕ್ತಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. 2019ರಿಂದ ತನ್ನ ಕಚೇರಿಯನ್ನೇ ನಕಲಿ ಕೋರ್ಟ್ ಮಾಡಿಕೊಂಡು ಅನೇಕ ತೀರ್ಪುಗಳನ್ನು ನೀಡಿ ಅಹ್ಮದಾಬಾದ್ ಜಿಲ್ಲಾಡಳಿತಕ್ಕೆ ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೋರಿಸ್ ಸ್ಯಾಮ್ಯುಯೆಲ್ ಕ್ರಿಸ್ತಿಯನ್ ಎಂಬಾತ ತನ್ನನ್ನು ತಾನು ಸರಕಾರ ನೇಮಿಸಿದ ವಿಶೇಷ ನ್ಯಾಯಮಂಡಳಿ ಅಧ್ಯಕ್ಷ ಎಂದು ಹೇಳಿಕೊಂಡು ಸಿಕ್ಕಿಬಿದ್ದಿರುವ ವಕೀಲ. ಸರಕಾರದಿಂದ ನೇಮಿಸಲ್ಪಟ್ಟ ಮಧ್ಯಸ್ಥಿಕೆ ನ್ಯಾಯ ಮಂಡಳಿಯ ಅಧ್ಯಕ್ಷನೆಂದು ಹೇಳಿಕೊಂಡು ಅನೇಕ ಭೂ ವಿವಾದಗಳ ಕುರಿತಾಗಿ ಈತ ತೀರ್ಪು ನೀಡಿರುವುದು ತನಿಖೆಯಲ್ಲಿ ಬಯಲಾಗಿದ್ದು, ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಗಾಂಧಿನಗರ ನಿವಾಸಿ ಮೋರಿಸ್ ಸ್ಯಾಮ್ಯುಯೆಲ್ ಕಾನೂನು ಪದವೀಧರನಾಗಿದ್ದು, ತನ್ನ ವಕೀಲಿ ಕಚೇರಿಯನ್ನೇ ನ್ಯಾಯಾಲಯ ಮಾಡಿಕೊಂಡಿದ್ದ. ತನ್ನನ್ನೇ ಜಡ್ಜ್ ಎಂದು ಬಿಂಬಿಸುತ್ತ ಕಳೆದ ಐದು ವರ್ಷಗಳಲ್ಲಿ ಹಲವಾರು ವ್ಯಾಜ್ಯಗಳಿಗೆ ಆದೇಶ ನೀಡಿದ್ದ. 2019ರಲ್ಲಿ ತನ್ನ ಕಕ್ಷಿದಾರನ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿ ಸ್ಯಾಮುಯೆಲ್ ನಕಲಿ ಆದೇಶದ ಪ್ರತಿ ಜಾರಿಗೊಳಿಸಿದ್ದು, ಕಂದಾಯ ದಾಖಲೆಗಳಲ್ಲಿ ಕಕ್ಷಿದಾರನ ಹೆಸರು ಸೇರಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದ್ದ. ಮಧ್ಯಸ್ಥಿಕೆ ನ್ಯಾಯಮಂಡಳಿ ಮೂಲಕ ಜಾರಿಯಾದ ಪ್ರಕರಣವೆಂದು ಆದೇಶ ಜಾರಿಗೊಳಿಸಲು ಅಹ್ಮದಾಬಾದ್ ಸಿಟಿ ಸಿವಿಲ್ ಕೋರ್ಟಿಗೆ ಇನ್ನೊಬ್ಬ ವಕೀಲರ ಮೂಲಕ ಅರ್ಜಿ ಸಲ್ಲಿಸುವಂತೆ ಮಾಡಿದ್ದ. ಇದರ ಬಗ್ಗೆ ಪರಿಶೀಲನೆ ನಡೆಸಿದ ಸಿವಿಲ್ ಕೋರ್ಟ್ ರಿಜಿಸ್ಟ್ರ್ರಾರ್ ಹಾರ್ದಿಕ್ ದೇಸಾಯಿ, ಈ ರೀತಿಯ ಆದೇಶವೇ ನಕಲಿ ಎಂಬುದನ್ನು ತಿಳಿದು ಕಾರಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಪಾಸಣೆ ಸಂದರ್ಭದಲ್ಲಿ ಸ್ಯಾಮುವೆಲ್ ನದ್ದು ನಕಲಿ ಕೋರ್ಟ್ ಮತ್ತು ನಕಲಿ ಜಡ್ಜ್ ಎನ್ನುವುದು ಪತ್ತೆಯಾಗಿದೆ.
ಆರೋಪಿ ಸ್ಯಾಮ್ಯುಯೆಲ್ ತನ್ನನ್ನು ಸರಕಾರದಿಂದ ನೇಮಿಸಲ್ಪಟ್ಟ ನ್ಯಾಯಮಂಡಳಿ ಅಧ್ಯಕ್ಷ ಎಂದು ಬಿಂಬಿಸಿಕೊಂಡು ಅನೇಕ ವಿವಾದಿತ ಜಮೀನುಗಳಿಗೆ ಆದೇಶ ನೀಡಿದ್ದಾನೆ ಎಂದು ರಿಜಿಸ್ಟ್ರಾರ್ ಹಾರ್ದಿಕ್ ದೇಸಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಸ್ಯಾಮ್ಯುಯೆಲ್ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆರೋಪಿ ಸ್ಯಾಮ್ಯುಯೆಲ್ ಗಾಂಧಿನಗರದಲ್ಲಿರುವ ತನ್ನ ಕಚೇರಿಯಲ್ಲಿ ನಿಜವಾದ ನ್ಯಾಯಾಲಯವನ್ನೇ ಸೃಷ್ಟಿಸಿರುವುದು ಪತ್ತೆಯಾಗಿದೆ. ತನ್ನ ಸಣ್ಣ ಕೊಠಡಿಯಲ್ಲೇ ಜಡ್ಜ್ ಕುಳಿತುಕೊಳ್ಳುವ ಪೀಠ, ವಾದಿ- ಪ್ರತಿವಾದಿಗಳ ಕಟಕಟೆ ಸ್ಥಳವನ್ನು ರೂಪಿಸಿಕೊಂಡಿದ್ದ. ಇದನ್ನು ಕಂಡು ಸ್ಥಳೀಯ ವಕೀಲರು, ಸಾರ್ವಜನಿಕರು ಸ್ಯಾಮುವೆಲ್ ನ್ಯಾಯಮಂಡಳಿಯ ನ್ಯಾಯಾಧೀಶ ಎಂದೇ ಭಾವಿಸಿದ್ದರು. ತನ್ನದೇ ವಕೀಲರ ತಂಡವನ್ನೂ ರೂಪಿಸಿಕೊಂಡು ಕೋಟ್ಯಂತರ ಮೌಲ್ಯದ ಜಮೀನು ವಿವಾದಗಳ ಬಗ್ಗೆ ತೀರ್ಪು ಕೊಟ್ಟು ಹಣ ಪಡೆಯುತ್ತಿದ್ದುದು ಪತ್ತೆಯಾಗಿದೆ.
ಅಹ್ಮದಾಬಾದ್ ನಗರದಲ್ಲಿ ಬಾಕಿ ಇರುವ ಭೂವಿವಾದ ಪ್ರಕರಣಗಳೇ ಈತನ ಟಾರ್ಗೆಟ್ ಆಗಿತ್ತು. ಸಿಟಿ ಸಿವಿಲ್ ಕೋರ್ಟಿನಲ್ಲಿ ದಾಖಲಾದ ಪ್ರಕರಣಗಳಲ್ಲಿ ಸುದೀರ್ಘ ಅವಧಿಯಿಂದ ವಿವಾದದಿಂದ ಬೇಸತ್ತಿದ್ದವರನ್ನು ಸಂಪರ್ಕಿಸಿ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗುತ್ತಿದ್ದರು. ಮಧ್ಯಸ್ಥಿಕೆ ನ್ಯಾಯಮಂಡಳಿ ಮೂಲಕ ವಿವಾದ ಬಗೆಹರಿಸುತ್ತೇವೆ ಎಂದು ಸ್ಯಾಮುವೆಲ್ ಜೊತೆಗಿದ್ದ ವಕೀಲರು ನಂಬಿಸಿ, ಕಕ್ಷಿದಾರರನ್ನು ಕರೆತರುತ್ತಿದ್ದರು. ತನ್ನ ಕಚೇರಿಯಲ್ಲೇ ನಕಲಿ ಸೀಲ್, ಆದೇಶ ಪತ್ರಗಳನ್ನು ಮಾಡಿಕೊಂಡಿದ್ದ. ಬಾಬೂಜಿ ಠಾಕೂರ್ ಎಂಬವರು ಸಲ್ಲಿಸಿದ್ದ ಸರಕಾರಿ ಜಮೀನು ಕುರಿತ ದಾವೆಯ ಬಗ್ಗೆ ಆದೇಶ ಪಾಸು ಮಾಡಿ ಸ್ಯಾಮುವೆಲ್ ಸಿಕ್ಕಿಬಿದ್ದಿದ್ದಾನೆ.
ಎರಡು ತಿಂಗಳ ಹಿಂದೆ ಛತ್ತೀಸ್ಗಢದಲ್ಲಿ ಎಸ್ ಬಿಐ ಬ್ಯಾಂಕ್ ಶಾಖೆಯೆಂದು ಪೋಸು ಕೊಟ್ಟು ನಕಲಿ ಬ್ರಾಂಚ್ ಒಂದನ್ನು ತೆರೆಯುವ ಯತ್ನ ನಡೆದಿತ್ತು. ನಕಲಿ ಸೀಲ್ ನಿಂದ ಹಿಡಿದು ಬ್ಯಾಂಕ್ ಮಾದರಿಯಲ್ಲೇ ಕಚೇರಿ ತೆರೆದು ವಹಿವಾಟು ಆರಂಭಿಸುವ ನಾಟಕ ಮಾಡಿದ್ದರು. ಸಾರ್ವಜನಿಕರು ಈ ಶಾಖೆಯಲ್ಲಿ ಹಣವನ್ನು ಡಿಪಾಸಿಟ್ ಇಡುವುದು ಸೇರಿದಂತೆ ಖಾತೆ ಬದಲಾವಣೆಗೂ ಮುಂದಾಗಿದ್ದರು. ಛತ್ತೀಸ್ಗಢ ರಾಜಧಾನಿ ರಾಯಪುರದಿಂದ 250 ಕಿಮೀ ದೂರದ ಶಕ್ತಿ ಜಿಲ್ಲೆಯ ಛಾಪೋರಾ ಗ್ರಾಮದಲ್ಲಿ ಈ ಬ್ಯಾಂಕ್ ಮಾದರಿ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು.
A man was detained on Tuesday for allegedly running a fake court and delivering an order in connection with a land dispute in Gujarat. The matter came to light after the case was brought for hearing at Ahmedabad City Civil Court after a police complaint was filed.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
17-03-25 11:29 am
Mangalore Correspondent
UT Khader, Mangalore, Tulu Academy: ತುಳು ಕಲಿತ...
16-03-25 10:55 pm
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm