ಬ್ರೇಕಿಂಗ್ ನ್ಯೂಸ್
14-10-24 10:12 pm HK News Desk ದೇಶ - ವಿದೇಶ
ನವದೆಹಲಿ, ಅ.14: 90ರ ದಶಕದಲ್ಲಿ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಮುಂಬೈಯನ್ನು ಕೇಂದ್ರವಾಗಿಟ್ಟು ಹಫ್ತಾ ವಸೂಲಿ, ಬೆದರಿಕೆ, ಸರಣಿ ಕೊಲೆಯಿಂದ ಹಣ ಗಳಿಸಿದ್ದಲ್ಲದೆ, ಶಾರ್ಪ್ ಶೂಟರ್ ಗಳನ್ನೊಳಗೊಂಡ ಡಿ ಕಂಪನಿಯನ್ನು ಕಟ್ಟಿ ಇಡೀ ಭೂಗತ ಜಗತ್ತನ್ನೇ ನಿಯಂತ್ರಣದಲ್ಲಿಟ್ಟು ಪೊಲೀಸರಿಗೇ ಸವಾಲಾಗಿ ಪರಿಣಮಿಸಿದ್ದರು. ಅದೇ ರೀತಿಯಲ್ಲಿ ಪಂಜಾಬ್ ಮೂಲದ ಲಾರೆನ್ಸ್ ಬಿಷ್ಣೋಯಿ ಮತ್ತು ಗೋಲ್ಡಿ ಬ್ರಾರ್ ತಮ್ಮದೇ ತಂಡವನ್ನು ಕಟ್ಟಿಕೊಂಡಿದ್ದು, ದೇಶಾದ್ಯಂತ 700ಕ್ಕೂ ಹೆಚ್ಚು ಶಾರ್ಪ್ ಶೂಟರ್ ಗಳನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.
ಬಿಷ್ಣೋಯಿ ಮತ್ತು 16 ಗ್ಯಾಂಗ್ ಸ್ಟರ್ ಗಳ ಬಗ್ಗೆ ತನಿಖೆ ನಡೆಸಿದ ಎನ್ಐಎ ಅಧಿಕಾರಿಗಳು ದೆಹಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು ಇದರಲ್ಲಿ ಬಿಷ್ಣೋಯಿ ಗ್ಯಾಂಗ್ ಕೂಡ ದಾವೂದ್ ರೀತಿಯಲ್ಲೇ ಡಿ ಕಂಪನಿ ಹಾದಿಯಲ್ಲಿದೆ ಎಂದು ಹೇಳಿದೆ. ಬಿಷ್ಣೋಯಿ ಪರವಾಗಿ 700ಕ್ಕೂ ಹೆಚ್ಚು ಶಾರ್ಪ್ ಶೂಟರ್ ಗಳಿದ್ದು ಉತ್ತರ ಭಾರತದಾದ್ಯಂತ ನೆಟ್ವರ್ಕ್ ಹೊಂದಿದ್ದಾರೆ. ಅದರಲ್ಲಿ 300ರಷ್ಟು ಶಾರ್ಪ್ ಶೂಟರ್ ಗಳು ಪಂಜಾಬಿನವರೇ ಆಗಿದ್ದಾರೆ.
ಸಣ್ಣ ಪುಟ್ಟ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಿಷ್ಣೋಯಿ ಮತ್ತು ಆತನ ಪ್ರಮುಖ ಸಹಚರ ಸತ್ವಿಂದರ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಆನಂತರ ಕೆನಡಾಕ್ಕೆ ಹಾರಿದ್ದರು. ಒಂದು ವರ್ಷದ ಹಿಂದೆ ಪಂಜಾಬಿ ಗಾಯಕ ಸಿಧು ಪೂನಾವಾಲ ಕೊಲೆ ಪ್ರಕರಣದಲ್ಲಿ ಬಿಷ್ಣೋಯಿಯನ್ನು ಕೆನಡಾದಿಂದಲೇ ಬಂಧಿಸಲಾಗಿತ್ತು. ಗೋಲ್ಡ್ ಬ್ರಾರ್ ಇನ್ನೂ ಪತ್ತೆಯಾಗಿಲ್ಲ. ಇವರು ಕಳೆದ 10-15 ವರ್ಷಗಳಲ್ಲಿ ಅತಿ ವೇಗವಾಗಿ ಭೂಗತ ಜಗತ್ತಿನಲ್ಲಿ ತಂಡ ಕಟ್ಟಿಕೊಂಡಿದ್ದು, ಉತ್ತರದ ರಾಜ್ಯಗಳಲ್ಲಿ ನೆಟ್ವರ್ಕ್ ವಿಸ್ತರಿಸಿದ್ದಾರೆ. 2020-21ರಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಹಫ್ತಾ ಮೂಲಕ ವಸೂಲಿ ಮಾಡಿದ್ದು, ಹವಾಲಾ ರೂಪದಲ್ಲಿ ವಿದೇಶಕ್ಕೆ ಸಾಗಿಸಿರುವ ಶಂಕೆಯಿದೆ.
ಆರಂಭದಲ್ಲಿ ಹರ್ಯಾಣ, ಪಂಜಾಬ್, ದೆಹಲಿಯಲ್ಲಿ ಮಾತ್ರ ಇವರ ನೆಟ್ವರ್ಕ್ ಇತ್ತು. ಈಗ ಉತ್ತರ ಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್, ರಾಜಸ್ಥಾನಕ್ಕೂ ಹರಡಿದ್ದು, ಬಹುತೇಕ ಉತ್ತರ ಭಾರತದ 11 ರಾಜ್ಯಗಳಲ್ಲಿ ಭೂಗತ ಜಗತ್ತಿನ ಸಂಪರ್ಕ ಸಾಧಿಸಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಹರೆಯದ ಯುವಕರನ್ನು ಸೆಳೆದುಕೊಂಡು ಇವರ ತಂಡಕ್ಕೆ ಸೇರಿಸುವ ಕೆಲಸ ಆಗುತ್ತಿರುವುದನ್ನೂ ಕೇಂದ್ರ ಗುಪ್ತಚರ ಏಜನ್ಸಿ ಪತ್ತೆ ಮಾಡಿದೆ. ಕೆನಡಾ ಅಥವಾ ಇನ್ನಾವುದೇ ದೇಶಗಳಲ್ಲಿ ತೆರಳಲು ಬಯಸುವ ಯುವಕರನ್ನು ಸೆಳೆದು ಬಿಷ್ಣೋಯಿ ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಆಗುತ್ತಿದೆ.
ಸದ್ಯಕ್ಕೆ ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎನ್ನಲಾಗುವ ಖಲೀಸ್ತಾನಿ ಉಗ್ರ ಹರ್ವಿಂದರ್ ಸಿಂಗ್ ರಾಣಾ ಕೂಡ ಹರ್ಯಾಣದಲ್ಲಿ ತನಗೆ ಆಗದವರನ್ನು ಮುಗಿಸಲು ಇದೇ ಬಿಷ್ಣೋಯಿ ತಂಡದ ಶೂಟರ್ ಗಳನ್ನು ಬಳಸಿಕೊಳ್ಳುತ್ತಿದ್ದಾನೆ ಎನ್ನುವುದನ್ನು ಎನ್ಐಎ ಪತ್ತೆ ಮಾಡಿದೆ.
The intent of the Lawrence Bishnoi gang has shifted from taking revenge from actor Salman Khan to ruling Bollywood, once Dawood Ibrahim's fiefdom, a senior Delhi police officer said on Monday.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm