ಬ್ರೇಕಿಂಗ್ ನ್ಯೂಸ್
11-10-24 06:23 pm HK News Desk ದೇಶ - ವಿದೇಶ
ನವದೆಹಲಿ, ಅ.11: ಅಖಂಡ ಭಾರತದ 51 ಶಕ್ತಿಪೀಠಗಳಲ್ಲಿ ಒಂದೆನಿಸಿರುವ ಬಾಂಗ್ಲಾದೇಶದ ಜೆಹೋರೇಶ್ವರಿ ದೇವಿ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ದಾನ ನೀಡಿದ್ದ ಸ್ವರ್ಣ ಕಿರೀಟವನ್ನು ಕಳ್ಳರು ಕದ್ದೊಯ್ದಿದ್ದಾರೆ. 2021ರಲ್ಲಿ ಬಾಂಗ್ಲಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಸಕ್ತಿರಾ ಪ್ರದೇಶದ ಕಾಳಿ ದೇವಿಗೆ ಸ್ವರ್ಣ ಕಿರೀಟ ಅರ್ಪಿಸಿ ಪೂಜೆಗೈದಿದ್ದರು.
ಗುರುವಾರ ಮಧ್ಯಾಹ್ನ ಕಾಳಿ ದೇವಿಯ ಮುಕುಟದಲ್ಲಿದ್ದ ಕಿರೀಟವನ್ನು ಕಿಡಿಗೇಡಿಗಳು ಕಳವು ಮಾಡಿದ್ದಾರೆ. ಅರ್ಚಕ ದಿಲೀಪ್ ಮುಖರ್ಜಿ ಮಧ್ಯಾಹ್ನ ಪೂಜೆ ಮಾಡಿ ಹಿಂತಿರುಗಿದ್ದರು. ಸಂಜೆಯ ವೇಳೆಗೆ ಸ್ವಚ್ಛ ಮಾಡುವುದಕ್ಕಾಗಿ ಸಿಬಂದಿ ಆಗಮಿಸಿದ್ದಾಗ ವಿಗ್ರಹದಲ್ಲಿದ್ದ ಕಿರೀಟ ನಾಪತ್ತೆಯಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ, ಸಿಸಿಟಿವಿಯಲ್ಲಿ ಕಳ್ಳನೊಬ್ಬ ಕಿರೀಟ ಕಳವು ಮಾಡಿರುವುದು ಪತ್ತೆಯಾಗಿದೆ. ಭಾರತೀಯ ಹೈಕಮಿಶನ್, ಘಟನೆ ಬಗ್ಗೆ ತನಿಖೆ ನಡೆಸಲು ಒತ್ತಾಯ ಮಾಡಿದೆ.
)
ಭಾರತ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ದೇವಿಯರ 51 ಶಕ್ತಿಪೀಠಗಳು ಹರಡಿಕೊಂಡಿದ್ದು, ಅದರಲ್ಲಿ ಒಂದೆನಿಸಿರುವ ಜೆಹೋರೇಶ್ವರಿ ದೇವಿ ದೇವಸ್ಥಾನಕ್ಕೆ ಭಾರೀ ಮಹತ್ವ ಇದೆ. ದೇವಿ ಕಾಳಿಯಾಗಿ ಇಲ್ಲಿ ಪೂಜಿಸಲ್ಪಡುತ್ತಾಳೆ. ನವರಾತ್ರಿ ಸಂದರ್ಭದಲ್ಲಿ ದುರ್ಗೆಯಾಗಿ ಪೂಜಿಸಲ್ಪಡುತ್ತಿದ್ದು, ಹಬ್ಬದ ಹೊತ್ತಲ್ಲಿಯೇ ದೇವಿಯ ಕಿರೀಟವನ್ನು ಕಳವು ಮಾಡಲಾಗಿದೆ. 12ನೇ ಶತಮಾನದಲ್ಲಿ ಸ್ಥಾಪನೆಗೊಂಡಿರುವ ಈ ದೇಗುಲದಲ್ಲಿ ನೂರು ಬಾಗಿಲುಗಳಿದ್ದವು. ಆನಂತರ ರಾಜಾ ಲಕ್ಷ್ಮಣ್ ಸೇನ್ 13ನೇ ಶತಮಾನದಲ್ಲಿ ದೇಗುಲವನ್ನು ನವೀಕರಣ ಮಾಡಿದ್ದ. 16ನೇ ಶತಮಾನದಲ್ಲಿ ರಾಜಾ ಪ್ರತಾಪಾದಿತ್ಯ ಅದೇ ದೇಗುಲವನ್ನು ಮತ್ತೆ ಮರು ನಿರ್ಮಾಣ ಮಾಡಿದ್ದ. 2021ರಲ್ಲಿ ಮೋದಿ ಈ ಶಕ್ತಿಪೀಠಕ್ಕೆ ಭೇಟಿ ನೀಡಿದ್ದಾಗ, ಭಾರತ ಸರಕಾರದ ವತಿಯಿಂದ ದೇಗುಲ ಪರಿಸರದಲ್ಲಿ ಬೃಹತ್ ಸಮುದಾಯ ಭವನ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದರು.
ಬಾಂಗ್ಲಾದಲ್ಲಿ ಹಿಂದು ಮಂದಿರ, ಹಿಂದುಗಳನ್ನು ಗುರಿಯಾಗಿಸಿ ದಾಳಿ ಘಟನೆಗಳು ನಡೆಯುತ್ತಿರುವ ಹೊತ್ತಲ್ಲಿಯೇ ದೇವಿಯ ಕಿರೀಟವನ್ನು ಕಳವು ಮಾಡಲಾಗಿದೆ.
A crown of Goddess Kali at the Jeshoreshwari Temple in Bangladesh’s Satkhira, gifted by Prime Minister Narendra Modi, has been stolen, according to reportsThe silver, gold-plated crown was reportedly stolen on Thursday between 2.00 pm and 2.30 pm when Temple Priest Dilip Mukherjee left following the day’s worship. The cleaning staff later found that the crown was missing from the deity’s head, Bangladeshi newspaper The Daily Star claimed.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 12:19 pm
HK News Staffer
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm