ಬ್ರೇಕಿಂಗ್ ನ್ಯೂಸ್
21-09-24 06:36 pm Giridhar Shetty, HK News Desk ದೇಶ - ವಿದೇಶ
ಹೈದರಾಬಾದ್, ಸೆ.21: ತಿರುಪತಿ ಲಡ್ಡಿನಲ್ಲಿ ದನ ಮತ್ತು ಹಂದಿಯ ಕೊಬ್ಬು ಇದೆಯೆಂಬ ಪ್ರಯೋಗಾಲಯ ವರದಿ ಆಂಧ್ರ ಪ್ರದೇಶದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಗುಜರಾತಿನ ಪ್ರಯೋಗಾಲಯವೊಂದು ಈ ವರದಿ ನೀಡಿದ್ದು, ಕಳೆದ ಜುಲೈನಲ್ಲಿ ಲಡ್ಡಿಗೆ ಬಳಸಲಾಗುತ್ತಿದ್ದ ತುಪ್ಪವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಚಂದ್ರಬಾಬು ನಾಯ್ಡು ಅವರೇ ಮುಖ್ಯಮಂತ್ರಿಯಾಗಿದ್ದರು. ಒಟ್ಟು ವಿಚಾರದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕೆಂದು ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಒತ್ತಾಯಿಸಿದ್ದಾರೆ.
ಈ ಹಿಂದೆ ಕರ್ನಾಟಕದ ಕೆಎಂಎಫ್ ನಿಂದ ನಂದಿನಿ ತುಪ್ಪವನ್ನೇ ಬಳಸಿ ತಿರುಪತಿ ಲಡ್ಡು, ನೈವೇದ್ಯ ತಯಾರಿಸಲಾಗುತ್ತಿತ್ತು. ಕಳೆದ ನಾಲ್ಕು ವರ್ಷಗಳಿಂದ ಕೆಎಂಎಫ್ ನಂದಿನಿ ತುಪ್ಪಕ್ಕೆ ದರ ಹೆಚ್ಚು ಎಂದು ತಮಿಳುನಾಡು ಮೂಲದ ಎ.ಆರ್. ಡೈರಿಯಿಂದ ನೀಡಲಾಗುತ್ತಿದ್ದ ಕಡಿಮೆ ಬೆಲೆಯ ತುಪ್ಪವನ್ನು ಬಳಕೆ ಮಾಡಲಾಗಿತ್ತು. ಪ್ರತಿ ತಿಂಗಳು ನಾಲ್ಕು ಟ್ಯಾಂಕರಿನಷ್ಟು ತುಪ್ಪ ತಮಿಳುನಾಡು ಡೈರಿಯಿಂದ ಪೂರೈಕೆ ಆಗುತ್ತಿತ್ತು. ಆರು ತಿಂಗಳ ಹಿಂದೆ ಲೋಕಸಭೆ ಜೊತೆಯಲ್ಲೇ ಆಂಧ್ರ ವಿಧಾನಸಭೆಗೆ ಚುನಾವಣೆ ನಡೆದು ಅಧಿಕಾರಕ್ಕೇರಿದ್ದ ಚಂದ್ರಬಾಬು ನಾಯ್ಡು ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯನ್ನೂ ಬದಲಿಸಿದ್ದರು.
ತಮಿಳುನಾಡು ಡೇರಿಯಿಂದ ಪೂರೈಕೆಯಾಗುವ ಕಡಿಮೆ ದರದ ತುಪ್ಪವನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಬಂದಿದ್ದು, ತುಪ್ಪದಲ್ಲಿ ಪ್ರಾಣಿಜನ್ಯ ಕೊಬ್ಬಿನ ಅಂಶಗಳಿರುವುದನ್ನು ಪತ್ತೆ ಮಾಡಿದೆ. ಹಂದಿ, ದನದ ಚರ್ಬಿಯನ್ನು ತುಪ್ಪದಲ್ಲಿ ಬೆರಸಿರುವ ಬಗ್ಗೆಯೂ ಆರೋಪ ಕೇಳಿಬಂದಿದೆ. ಇದಲ್ಲದೆ, ಮೀನಿನೆಣ್ಣೆಯ ಅಂಶಗಳಿರುವುದಾಗಿಯೂ ವರದಿ ಹೇಳಿದೆ. ನಂದಿನಿ ತುಪ್ಪಕ್ಕೆ ಲೀಟರಿಗೆ 900 ರೂ. ಇದ್ದರೆ, ತಮಿಳುನಾಡಿನಿಂದ ಪೂರೈಕೆಯಾಗುತ್ತಿದ್ದ ತುಪ್ಪವನ್ನು ಲೀಟರಿಗೆ 320 ರೂ.ನಂತೆ ನೀಡಲಾಗಿತ್ತು. ಕಡಿಮೆ ದರವೆಂದು ದೇಶದ ಅತಿ ಶ್ರೀಮಂತ ದೇಗುಲ, ಸಾವಿರಾರು ಕೋಟಿ ಆದಾಯದ ದೇವಸ್ಥಾನದ ಪ್ರಸಾದಕ್ಕೆ ಅತಿ ಕಳಪೆ ಗುಣಮಟ್ಟದ ತುಪ್ಪವನ್ನು ಬಳಸುವುದಕ್ಕೆ ಜಗನ್ ರೆಡ್ಡಿ ಸಿಎಂ ಆಗಿದ್ದಾಗಲೇ ಅನುಮತಿ ನೀಡಲಾಗಿತ್ತು. ಹೀಗಾಗಿ ತಿರುಪತಿ ಲಡ್ಡಿನ ವಿವಾದ ರಾಜಕೀಯವಾಗಿ ಜಗನ್ ರೆಡ್ಡಿ ಕೇಂದ್ರೀಕರಿಸುವಂತೆ ಮಾಡಿದೆ.
ಚಂದ್ರಬಾಬು ನಾಯ್ಡು ಅವರು ದೇವರ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದರ ಬಗ್ಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದು ನಾಯ್ಡು ರಾಜಕೀಯ ದಾಳವನ್ನು ತಿಳಿಸುತ್ತೇನೆ. ತನ್ನ ಅವಧಿಯಲ್ಲಿ ಪೂರೈಕೆ ಆಗಿದ್ದ ತುಪ್ಪದಲ್ಲಿ ಕಳಪೆ ಪತ್ತೆಯಾಗಿದ್ದಲ್ಲ ಮತ್ತು ಈ ಬಗ್ಗೆ ಹೈಕೋರ್ಟಿಗೆ ದೂರು ಸಲ್ಲಿಸುತ್ತೇನೆ. ಪ್ರಯೋಗಾಲಯ ವರದಿಯನ್ನು ತಿರುಚಿರುವ ಸಾಧ್ಯತೆಯೂ ಇದೆ. ಹೀಗಾಗಿ ಸಮಗ್ರ ತನಿಖೆ ಆಗಬೇಕು ಎಂದು ಜಗನ್ ರೆಡ್ಡಿ ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಜಗನ್ ರೆಡ್ಡಿ ಆಂಧ್ರ ಸರಕಾರದಿಂದ ವರದಿ ಕೇಳಿದ್ದಲ್ಲದೆ, ಒಟ್ಟು ವಿಚಾರದ ಬಗ್ಗೆ ಕೇಂದ್ರ ಆಹಾರ ಇಲಾಖೆಯಿಂದ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.
ಪರಿಶೀಲನೆಗೆ ನಾಲ್ವರು ತಜ್ಞರ ಕಮಿಟಿ ನೇಮಕ
ಇದೇ ವೇಳೆ, ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ತಜ್ಞರನ್ನು ಒಳಗೊಂಡ ನಾಲ್ಕು ಸದಸ್ಯರ ಕಮಿಟಿ ಮಾಡಿದ್ದು, ತುಪ್ಪದ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು ಅಲ್ಲದೇ, ಮುಂದೆ ತುಪ್ಪದ ಪರಿಶೀಲನೆ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಮಾಹಿತಿ ಕೇಳಿದ್ದಾರೆ. ಒಂದು ವಾರದೊಳಗೆ ಸಮಿತಿ ತಿರುಪತಿ ಟ್ರಸ್ಟ್ ಗೆ ವರದಿ ನೀಡಲಿದೆ. ಜಗನ್ ರೆಡ್ಡಿ ದೂರಿನ ವಿಚಾರಣೆ ಸೆ.25ರಂದು ಆಂಧ್ರ ಹೈಕೋರ್ಟಿನಲ್ಲಿ ನಡೆಯಲಿದ್ದರೆ, ಇದೇ ವೇಳೆ ಹಿಂದುಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಸುಪ್ರೀಂ ಕೋರ್ಟಿಗೂ ದೂರು ಸಲ್ಲಿಕೆಯಾಗಿದೆ.
ವರ್ಷಕ್ಕೆ 5 ಲಕ್ಷ ಕಿಲೋ ಲೀಟರ್ ತುಪ್ಪ
ತಿರುಪತಿ ದೇವಸ್ಥಾನಕ್ಕೆ ಪ್ರತಿ ವರ್ಷ 5 ಲಕ್ಷ ಕಿಲೋ ಲೀಟರ್ ತುಪ್ಪವನ್ನು ಖರೀದಿಸಲಾಗುತ್ತದೆ. ಪ್ರತಿ ವರ್ಷ ಟೆಂಡರ್ ಕರೆದು ತುಪ್ಪದ ಖರೀದಿ ಪ್ರಕ್ರಿಯೆ ನಡೆಯುತ್ತದೆ. ತಿಂಗಳಿಗೆ ಸುಮಾರು 42 ಸಾವಿರ ಕಿಲೋ ಲೀಟರ್ ತುಪ್ಪ ಪೂರೈಕೆ ಆಗುತ್ತದೆ. ಕರ್ನಾಟಕದ ನಂದಿನಿ ತುಪ್ಪದ ದರ ಕಡಿಮೆಗೊಳಿಸಿಲ್ಲ ಎಂಬ ಕಾರಣಕ್ಕೆ ನಾಲ್ಕು ವರ್ಷಗಳ ಹಿಂದೆಯೇ ಬಿಡ್ಡಿಂಗ್ ನಿಂದ ಹೊರಬಂದಿತ್ತು. ಈ ನಡುವೆ, ಗುಜರಾತಿನ ಅಮುಲ್ ಕಂಪನಿಯಿಂದಲೂ ತುಪ್ಪ ಪೂರೈಕೆಯಾಗಿತ್ತು ಎನ್ನಲಾಗುತ್ತಿದೆ. ಆದರೆ ಅಮುಲ್ ಕಂಪನಿಯವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನಾವು ಯಾವತ್ತೂ ತಿರುಪತಿಗೆ ತುಪ್ಪ ಪೂರೈಕೆ ಮಾಡಿಯೇ ಇಲ್ಲ. ನಮ್ಮ ಹೆಸರನ್ನು ವಿನಾಕಾರಣ ಎಳೆದು ತರಬೇಡಿ ಎಂದು ಹೇಳಿದೆ.
ಕಪ್ಪು ಪಟ್ಟಿಗೆ ಎ.ಆರ್ ಡೈರಿ ಕಂಪನಿ
ಇದೇ ವೇಳೆ, ತಿರುಪತಿ ದೇವಸ್ಥಾನದ ಆಡಳಿತಾಧಿಕಾರಿ ಶ್ಯಾಮಲಾ ರಾವ್ ಪ್ರತಿಕ್ರಿಯೆ ನೀಡಿದ್ದು, ನಾವು ಐದು ಕಂಪನಿಗಳಿಂದ ತುಪ್ಪ ಪಡೆಯಲು ಟೆಂಡರ್ ನೀಡಿದ್ದೇವೆ. ಈ ಪೈಕಿ ತಮಿಳುನಾಡಿನ ಎ.ಆರ್ ಡೈರಿ ಫುಡ್ ಕಂಪನಿಯಿಂದ ನೀಡಿರುವ ತುಪ್ಪದಲ್ಲಿ ವಿದೇಶಿ ಪ್ರಾಣಿಜನ್ಯ ಕೊಬ್ಬು ಪತ್ತೆಯಾಗಿದೆ. ಇದು ಆಘಾತಕಾರಿಯಾಗಿದ್ದು, ತನಿಖೆಯಲ್ಲಿ ಸಾಬೀತಾದರೆ ಕಂಪನಿಯನ್ನು ಬ್ಲಾಕ್ ಲಿಸ್ಟ್ ಮಾಡುತ್ತೇವೆ ಎಂದಿದ್ದಾರೆ.
The row over animal fat allegedly being used to make the famed Tirupati laddoos reached the Supreme Court on Friday with a lawyer filing a petition alleging that the act violates fundamental Hindu religious customs and deeply hurts the sentiments of countless devotees who consider the 'prasad' a sacred blessing.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm