ಬ್ರೇಕಿಂಗ್ ನ್ಯೂಸ್
15-09-24 06:55 pm HK News Desk ದೇಶ - ವಿದೇಶ
ನವದೆಹಲಿ, ಸೆ.15: ಆರು ತಿಂಗಳ ಜೈಲು ವಾಸದ ಬಳಿಕ ಎರಡು ದಿನಗಳ ಹಿಂದೆ ತಿಹಾರ್ ಜೈಲಿನಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೊರಬಂದಿದ್ದರು. ಅಬಕಾರಿ ಹಗರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ, ಸಿಎಂ ಕಚೇರಿಗೆ ಹೋಗಬಾರದು ಎಂದು ಕೋರ್ಟ್ ಷರತ್ತು ವಿಧಿಸಿದ್ದರಿಂದ ಕೇಜ್ರಿವಾಲ್ ಕಡೆಗೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.
ಇನ್ನೆರಡು ದಿನದಲ್ಲಿ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದೇನೆ. ಇದರ ಜೊತೆಗೆ, ನಾನು ಜನತಾ ನ್ಯಾಯಾಲಯದಿಂದ ಮತ್ತೆ ಜನಾದೇಶ ಪಡೆಯಲು ಮುಂದಾಗಿದ್ದೇನೆ. ನ್ಯಾಯಾಲಯ ಮತ್ತು ಜನರ ತೀರ್ಪನ್ನು ಪಡೆದು ಆರೋಪ ಮುಕ್ತನಾಗುತ್ತೇನೆ. ನನ್ನ ವಿರುದ್ಧ ಕೇಂದ್ರ ಸರಕಾರ ಪಿತೂರಿ ಮಾಡಿದ್ದು ಅದನ್ನು ಜನರ ಮುಂದಿಡುತ್ತೇನೆ ಎಂದು ಹೇಳಿದ್ದಾರೆ. ಇದಲ್ಲದೆ, ಮಹಾರಾಷ್ಟ್ರದ ಜೊತೆಗೆ ಅಕ್ಟೋಬರ್ ನಲ್ಲಿ ದೆಹಲಿಗೂ ಚುನಾವಣೆ ನಡೆಯಲಿ. ಮುಂದಿನ ಫೆಬ್ರವರಿ ವರೆಗೆ ಅವಧಿ ಇದ್ದರೂ, ನಾವು ಜನರ ಬಳಿ ಹೋಗಲು ನಿರ್ಧರಿಸಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ. ಆಮೂಲಕ ದೆಹಲಿ ಸರ್ಕಾರವನ್ನು ವಿಸರ್ಜಿಸುವ ಸುಳಿವನ್ನು ನೀಡಿದ್ದಾರೆ.
ಮಾರ್ಚ್ ತಿಂಗಳಲ್ಲಿ ಮೊದಲು ಬಂಧಿಸಲ್ಪಟ್ಟಿದ್ದ ಕೇಜ್ರಿವಾಲ್ ಗೆ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಪೆರೋಲ್ ಮೇಲೆ ಹೊರಬರಲು ಅವಕಾಶ ನೀಡಲಾಗಿತ್ತು. ಆನಂತರ, ಜೂನ್ 2ರಂದು ಮತ್ತೆ ತಿಹಾರ್ ಜೈಲಿಗೆ ಹೋಗಿದ್ದ ಕೇಜ್ರಿವಾಲ್ ಬರೋಬ್ಬರಿ ಆರು ತಿಂಗಳ ಬಳಿಕ ಜಾಮೀನು ಪಡೆದು ಹೊರಬಂದಿದ್ದಾರೆ. ಆದರೆ ಸಿಎಂ ಕಚೇರಿಗೆ ಹೋಗಬಾರದು, ಯಾವುದೇ ಕಡತಕ್ಕೆ ಸಹಿ ಹಾಕುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಷರತ್ತು ಹಾಕಿದ್ದು ಕೇಜ್ರಿವಾಲ್ ಅವರನ್ನು ಅಧೀರರನ್ನಾಗಿಸಿದೆ. ಹೀಗಾಗಿ ಜೈಲಿನಲ್ಲಿದ್ದರೂ, ಸೀಟು ಬಿಟ್ಟುಕೊಟ್ಟಿರದ ಕೇಜ್ರಿವಾಲ್ ಈಗ ದಿಢೀರ್ ಆಗಿ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಲ್ಲದೆ, ಜನರ ಬಳಿ ಹೋಗುತ್ತೇನೆಂದು ಹೇಳಿ ಹೊಸ ಡ್ರಾಮಾ ಶುರು ಮಾಡಿದ್ದಾರೆ.
Arvind Kejriwal's decision to resign is seen as a strategic move, and he aims to position the Aam Aadmi Party (AAP) in a fresh light ahead of the upcoming Assembly elections. By deciding to step down, he could seek to paint himself as a martyr and fight against a corrupt system.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm