ಬ್ರೇಕಿಂಗ್ ನ್ಯೂಸ್
12-09-24 07:40 pm HK News Desk ದೇಶ - ವಿದೇಶ
ನವದೆಹಲಿ, ಸೆ.12: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮನೆಯಲ್ಲಿ ನಡೆದ ಗಣೇಶನ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷ ನಾಯಕರು ಇದು ದೇಶಕ್ಕೆ ಬೇರೆ ರೀತಿಯ ಸಂದೇಶ ಕೊಟ್ಟಂತಾಗಿದೆ ಎಂದು ಟೀಕಿಸಿದ್ದಾರೆ.
ಬುಧವಾರ ಡಿವೈ ಚಂದ್ರಚೂಡ್ ಅವರ ಮನೆಯಲ್ಲಿ ಗಣೇಶನ ಪೂಜೆಯಲ್ಲಿ ಪಾಲ್ಗೊಂಡ ಬಗ್ಗೆ ಪ್ರಧಾನಿ ಮೋದಿ ಅವರೇ ತಮ್ಮ ಟ್ವಿಟರ್ ಪೇಜ್ ನಲ್ಲಿ ಫೋಟೋ ಷೇರ್ ಮಾಡಿಕೊಂಡಿದ್ದರು. ಮೋದಿಯವರನ್ನು ಮುಖ್ಯ ನ್ಯಾಯಾಧೀಶರು ಮತ್ತು ಅವರ ಪತ್ನಿ ಕಲ್ಪನಾದಾಸ್ ತಮ್ಮ ಮನೆಗೆ ಸ್ವಾಗತಿಸಿದ್ದ ಫೋಟೋಗಳಿದ್ದವು. ಗಣೇಶನ ವಿಗ್ರಹಕ್ಕೆ ಮೋದಿ ಕೈಮುಗಿಯುವ ಫೋಟೋಗಳೂ ಇದ್ದವು. ಈ ಫೋಟೋ ಬಗ್ಗೆ ವಿರೋಧ ಕೇಳಿಬರುತ್ತಿದ್ದಂತೆ ವಿಪಕ್ಷ ನಾಯಕರು ಟೀಕಿಸಿದ್ದಾರೆ.
ರಾಜ್ಯಸಭೆ ಸದಸ್ಯ, ಉದ್ಧವ್ ಠಾಕ್ರೆ ಬಣದ ಶಿವಸೇನೆ ಮುಖಂಡ ಸಂಜಯ ರಾವುತ್ ಟೀಕಿಸಿದ್ದು, ಈ ರೀತಿಯ ಮೀಟಿಂಗ್ಸ್ ನಮಗೆ ಶಂಕೆಗೆ ಆಸ್ಪದ ನೀಡುತ್ತಿದೆ. ಮುಖ್ಯ ನ್ಯಾಯಾಧೀಶರು ತಮ್ಮನ್ನು ತಾವು ಈ ರೀತಿಯ ನಡೆಗಳಿಂದ ಒಳಸಂಚು ಮಾಡಿಕೊಂಡಿದ್ದಾರೆಯೇ ಎನ್ನುವ ಆರೋಪ ಬರುವಂತೆ ಮಾಡಿದ್ದಾರೆ. ಗಣಪತಿ ಹಬ್ಬವೇ ಆಗಿದ್ದರೂ, ಪ್ರಧಾನಿ ಮೋದಿಯವರು ಈವರೆಗೆ ಎಷ್ಟು ಮಂದಿಯ ಮನೆಗಳಿಗೆ ಹೋಗಿದ್ದಾರೆ. ಈ ಕುರಿತು ನನಗೇನೂ ಮಾಹಿತಿಯಿಲ್ಲ. ದೆಹಲಿಯಲ್ಲಿ ಗಣೇಶನ ಹಬ್ಬ ಹಲವು ಕಡೆಗಳಲ್ಲಿ ನಡೆಯುತ್ತದಾದರೂ, ಪ್ರಧಾನಿ ಮುಖ್ಯ ನ್ಯಾಯಾಧೀಶರ ಮನೆಗೆ ಮಾತ್ರ ತೆರಳಿದ್ದಾರೆ. ದೇವರ ಪೂಜೆ ನೆಪದಲ್ಲಿ ನ್ಯಾಯಾಂಗದ ಮುಖ್ಯಸ್ಥರು ರಾಜಕಾರಣಿಗಳನ್ನು ಭೇಟಿ ಮಾಡುವುದು ಜನರಲ್ಲಿ ಶಂಕೆ ಮೂಡಿಸುತ್ತದೆ ಎಂದು ಹೇಳಿದ್ದಾರೆ.
ಇದೇ ರೀತಿ ಆರ್ ಜೆಡಿ ಸಂಸದ ಮನೋಜ್ ಝಾ, ಶಿವಸೇನೆ ನಾಯಕಿ ಪ್ರಿಯಾಂಕ ಚತುರ್ವೇದಿ ಕೂಡ ಪ್ರಶ್ನೆ ಮಾಡಿದ್ದಾರೆ. ಶಿವಸೇನೆಯ ಸಂಸದರನ್ನು ಮಹಾರಾಷ್ಟ್ರ ಸ್ಪೀಕರ್ ಅನರ್ಹಗೊಳಿಸಿದ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಮತ್ತೆ ಮತ್ತೆ ದಿನಾಂಕ ಮುಂದೂಡುತ್ತಾರೆ. ಅರವಿಂದ ಕೇಜ್ರಿವಾಲ್ ಪ್ರಕರಣದಲ್ಲಿಯೂ ಮತ್ತೆ ಮತ್ತೆ ದಿನಾಂಕ ನೀಡುತ್ತಾರೆ. ವಿಪಕ್ಷಗಳ ಪ್ರಕರಣಗಳಲ್ಲಿ ಈ ರೀತಿಯ ವರ್ತನೆ ತೋರುವುದು ಮತ್ತು ಸಿಜೆಐ ಈಗ ಪ್ರಧಾನಿ ಜೊತೆಗೆ ಗುರುತಿಸುವುದು ಏನನ್ನು ಸೂಚಿಸುತ್ತದೆ ಎಂದು ಸಂಜಯ ರಾವುತ್ ಟ್ವಿಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.
A massive political row has erupted over a video of Prime Minister Narendra Modi's visit to Chief Justice of India DY Chandrachud's home for Ganesh Puja.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm