ಬ್ರೇಕಿಂಗ್ ನ್ಯೂಸ್
11-09-24 03:14 pm HK News Desk ದೇಶ - ವಿದೇಶ
ಮುಂಬೈ, ಸೆ 11: ಬಾಲಿವುಡ್ ಖ್ಯಾತ ನಟಿಯ ತಂದೆಯೊಬ್ಬರು ಬುಧವಾರ ಮುಂಬೈನ ಬಿಲ್ಡಿಂಗ್ವೊಂದರಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ. ಮುಂಬೈ ಬಾದ್ರಾದಲ್ಲಿರುವ ಬೃಹತ್ ಕಟ್ಟಡದ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಬಾಲಿವುಡ್ ಖ್ಯಾತ ನಟಿ ಮಲೈಕಾ ಆರೋರಾ ಅವರ ತಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಮಲೈಕಾ ಆರೋರಾ ತಂದೆ ಅನೀಲ್ ಆರೋರಾ ಅವರು ಇಂದು ಬೆಳಗ್ಗೆ ಮುಂಬೈ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ನಟಿ ಮಲೈಕಾ ಅರೋರಾ ಪತಿ ಅರ್ಬಾಜ್ ಖಾನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ನಟಿ ನಿವಾಸಕ್ಕೆ ಬೇಟಿ ನೀಡಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲೈಕಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಬಾಂದ್ರಾ ನಿವಾಸಕ್ಕೆ ಆಗಮಿಸಿದ ಮೊದಲಿಗರಾಗಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಕುಟುಂಬಕ್ಕೆ ತಮ್ಮ ಬೆಂಬಲ ನೀಡಿದ್ದಾರೆ. ನಟಿಗೂ ಮುನ್ನ ಅರ್ಬಾಜ್ ಆಗಮಿಸಿ ಪೊಲೀಸ್ ಅಧಿಕಾರಿಗಳ ಬಳಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಮಲೈಕಾ ಮತ್ತು ತಂದೆ ಅನಿಲ್ ಆರೋರಾ ಪರಿಚಯ ;
ನಟಿ ಮಲೈಕಾ ಅರೋರಾ ಅವರು ಮಹಾರಾಷ್ಟ್ರ ರಾಜ್ಯದ ಥಾಣೆಯಲ್ಲಿ ಜನಿಸಿದ್ದಾರೆ. ನಟಿ 11 ವರ್ಷದಲ್ಲಿದ್ದಾಗಲೇ ಅವರ ಪೋಷಕರು ವಿಚ್ಛೇದನ ಪಡೆದು ದೂರವಾಗಿದ್ದು. ಬಾಲ್ಯದಲ್ಲಿ ಇಂತಹ ಕಹಿ ಘಟನೆಗಳನ್ನು ಎದುರಿಸಿದ್ದ ನಟಿ ಪೋಷಕರ ವಿಚ್ಛೇದನ ನಂತರ ತಾಯಿ ಮತ್ತು ಸಹೋದರಿ ಅಮೃತಾ ಅರೋರಾ ಜೊತೆ ಚೆಂಬೂರ್ನಲ್ಲಿ ವಾಸಿಸಿದರು.
ಮಲೈಕಾ ತಾಯಿ ಜಾಯ್ಸ್ ಪಾಲಿಕಾರ್ಪ್ ಮೂಲತಃ ಮಲಯಾಳಿ ಕ್ರಿಶ್ಚಿಯನ್ ಆಗಿದ್ದು ಅವರ ತಂದೆ ಅನಿಲ್ ಅರೋರಾ, ಪಂಜಾಬ್ದವರಾಗಿದ್ದು, ಅವರು ಭಾರತೀಯ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸಿದ್ದರು.
ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ನಟಿ ಮಲೈಕಾ ಅವರು 11 ವರ್ಷ ಇದ್ದಾಗ ತಮ್ಮ ಬದುಕಿನಲ್ಲಿ ಆದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ತಂದೆ ತಾಯಿ ವಿಚ್ಛೇದನ ವಿಚಾರ ಪ್ರಸ್ಥಾಪಿಸಿ ಭಾವುಕರಾಗಿದ್ದರು. ನನ್ನ ಬಾಲ್ಯ ಅದ್ಭುತ ಅನ್ನಿಸಿದರೂ ಸಹ ಸುಲಭವ ಜೀವನ ಅದಾಗಿರಲಿಲ್ಲ ಎಂದು ಸವಾಲುಗಳ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದರು.
ತಂದೆ ವಿಚ್ಛೇದನ ಕೊಟ್ಟ ದೂರವಾದಾಗ ನನ್ನ ತಾಯಿಯನ್ನು ಹೊಸ ಬದುಕು ಕಟ್ಟಿಕೊಂಡ ರೀತಿ, ಅವರ ಧೈರ್ಯ ಏನೆಂಬುದು ನನಗೆ ತಿಳಿಯಿತು ಎಂದು ನಟಿ ಮಲೈಕಾ ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಸದ್ಯ ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬುದು ಗೊತ್ತಾಗಬೇಕಿದೆ. ಸದ್ಯ ಪ್ರಕರಣ ತನಿಖೆ ಹಂತದಲ್ಲಿದೆ.
1998ರಲ್ಲಿ ಮಲೈಕಾ ಅರೋರಾ ಮತ್ತು ನಟ ಅರ್ಬಾಜ್ ಖಾನ್ ದಾಂಪತ್ಯ ಜೀವನ ಆರಂಭಿಸಿದ್ದರು. 2017 ರಲ್ಲಿ ದಂಪತಿ ವಿಚ್ಛೇದನ ಪಡೆದಿದ್ದು, ಇವರಿಗೆ ಆರ್ಹಾನ್ ಖಾನ್ ಎಂಬ ಮಗನಿದ್ದಾನೆ. ಅರ್ಬಾಜ್ ಖಾನ್ ಎರಡನೇ ಮದುವೆ ಆಗಿದ್ದಾರೆ. ನಟಿಯ ಹೆಸರು ಅರ್ಜುನ್ ಕಪೂರ್ ಅವರೊಂದಿಗೆ ಆಗಾಗ್ಗೆ ಸದ್ದು ಮಾಡುತ್ತಿರುತ್ತದೆ. ಸದ್ಯ ದುರ್ಘಟನೆ ಸಂಭವಿಸಿದ ಮನೆಗೆ ಮಲೈಕಾ, ಅರ್ಬಾಜ್, ಅರ್ಜುನ್ ತಲುಪಿದ್ದಾರೆ.
In a shocking incident, Anil Arora, father of Bollywood actress Malaika Arora, has reportedly committed suicide by jumping from the sixth floor of a building. The tragic event took place in Bandra, Mumbai, and has left the Arora family and the Bollywood fraternity in deep shock.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm