ಬ್ರೇಕಿಂಗ್ ನ್ಯೂಸ್
06-09-24 01:17 pm HK News Desk ದೇಶ - ವಿದೇಶ
ಢಾಕಾ, ಸೆ.6: ಶೇಖ್ ಹಸೀನಾ ದೇಶ ಬಿಟ್ಟ ಬಳಿಕದ ದಾಳಿ ಎನ್ನುವುದು ಕಮ್ಯುನಲ್ ಅನ್ನುವುದಕ್ಕಿಂತ ರಾಜಕೀಯ ದುರುದ್ದೇಶದಿಂದಷ್ಟೇ ಆಗಿತ್ತು. ಆದರೆ ಇದನ್ನು ಭಾರತದಲ್ಲಿ ಹಿಂದುಗಳ ಮೇಲೆ ದಾಳಿಯೆಂದು ಅತಿಯಾಗಿ ಪ್ರಚಾರ ಮಾಡಲಾಯಿತು. ಬಾಂಗ್ಲಾದೇಶ ಎಂದೂ ಮತ್ತೊಂದು ಅಫ್ಘಾನಿಸ್ತಾನ ಆಗುವುದಿಲ್ಲ. ಈ ರೀತಿ ಬಿಂಬಿಸುವುದನ್ನು ನಾವು ಒಪ್ಪುವುದಿಲ್ಲ. ನಾವು ಭಾರತದ ಜೊತೆಗೆ ಸಂಬಂಧ ಉತ್ತಮ ಪಡಿಸಲು ಬಯಸುತ್ತೇವೆ ಎಂದು ಬಾಂಗ್ಲಾದೇಶದ ಹಂಗಾಮಿ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಹೇಳಿದ್ದಾರೆ.
ದೇಶದಲ್ಲಿ ರಾಜಕೀಯ ದುರುದ್ದೇಶದಿಂದ ದಾಳಿಯಾಗಿತ್ತೇ ವಿನಾ ಕೋಮು ದ್ವೇಷದ್ದಾಗಿರಲಿಲ್ಲ. ಭಾರತದಲ್ಲಿ ಇದನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಪಡಿಸಲಾಯಿತು. ದಾಳಿ ವಿಚಾರದಲ್ಲಿ ನಾವೇನೂ ಮಾಡುತ್ತಿಲ್ಲ ಎಂದು ಹೇಳುತ್ತಿಲ್ಲ. ಬದಲಿಗೆ, ನಾವು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಬಯಸುತ್ತೇನೆ ಎಂದು ಯೂನುಸ್ ಟಿವಿ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ಆಗಸ್ಟ್ 5ರಂದು ವಿದ್ಯಾರ್ಥಿ ಪ್ರತಿಭಟನಕಾರರು ಪ್ರಧಾನಿ ಶೇಖ್ ಹಸೀನಾ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದ ಬಳಿಕ ಬಾಂಗ್ಲಾದಲ್ಲಿ ಹಿಂದುಗಳನ್ನು ಗುರಿಯಾಗಿಸಿ ದಾಳಿ ನಡೆದಿತ್ತು. ಹಿಂದುಗಳ ದೇವಸ್ಥಾನ, ಉದ್ಯಮಗಳ ಮೇಲೆಯೂ ದಾಳಿಯಾಗಿತ್ತು. ಹಲವಾರು ಮಂದಿ ದಾಳಿಯಿಂದಾಗಿ ಸಾವನ್ನಪ್ಪಿದ್ದರು. ಅಲ್ಲದೆ, ಹಸೀನಾ ಅವರ ಪಕ್ಷದ ಅವಾಮಿ ಲೀಗ್ ಪಕ್ಷದ ನಾಯಕರ ಮೇಲೂ ದಾಳಿ ನಡೆಸಿ ಕೊಲ್ಲಲಾಗಿತ್ತು.
ಎಲ್ಲವೂ ಇಸ್ಲಾಮಿಸ್ಟ್, ಬಿಎನ್ ಪಿಯೂ ಇಸ್ಲಾಮಿಸ್ಟ್, ಇಸ್ಲಾಮಿಗಳಿಂದ ಬಾಂಗ್ಲಾ ಹಾಳಾಗಿ ಹೋಯ್ತು. ಹಸೀನಾ ಕೈಯಲ್ಲಿ ಬಾಂಗ್ಲಾ ಸುಭದ್ರವಾಗಿತ್ತು. ಬಾಂಗ್ಲಾವನ್ನು ಇಸ್ಲಾಮಿಗಳು ಸೇರಿ ಮತ್ತೊಂದು ಅಫ್ಘಾನಿಸ್ತಾನ ಮಾಡಲಿದ್ದಾರೆ ಎಂಬ ರೀತಿಯಲ್ಲಿ ಭಾರತ ಬಿಂಬಿಸುತ್ತಿದೆ. ಆದರೆ ಇದೊಂದು ತಪ್ಪು ಭಾವನೆ, ತಪ್ಪಾಗಿ ಬಿಂಬಿಸಲಾಗುತ್ತಿದೆ. ಭಾರತ ಈ ರೀತಿಯ ಭಾವನೆಯಿಂದ ಹೊರ ಬರಬೇಕು. ಇತರೇ ನೆರೆ ರಾಷ್ಟ್ರಗಳ ರೀತಿಯಲ್ಲೇ ಬಾಂಗ್ಲಾವನ್ನೂ ನೋಡಬೇಕು ಎಂದು ಮೊಹಮ್ಮದ್ ಯೂನುಸ್ ಹೇಳಿದ್ದಾರೆ.
ಶೇಖ್ ಹಸೀನಾ ದೇಶ ಬಿಟ್ಟು ಹೋದ ಬಳಿಕ ಉಭಯ ರಾಷ್ಟ್ರಗಳ ನಡುವೆ ಹದಗೆಟ್ಟ ಸಂಬಂಧವನ್ನು ಮತ್ತೆ ಉತ್ತಮ ಪಡಿಸಲು ನಾವು ಬಯಸುತ್ತೇವೆ. ನಮ್ಮ ನಡುವಿನ ಬಾಂಧವ್ಯ ಗಟ್ಟಿಗೊಳಿಸುವತ್ತ ಪ್ರಯತ್ನ ಪಡುತ್ತೇವೆ ಎಂದು ಮೊಹಮ್ಮದ್ ಯೂನುಸ್ ಹೇಳಿದ್ದಾರೆ. ಅಲ್ಲದೆ, ಶೇಖ್ ಹಸೀನಾ ಅವರನ್ನು ಬಿಟ್ಟು ಕೊಡಬೇಕು ಎಂದು ಬಾಂಗ್ಲಾ ಹೇಳುವಷ್ಟರ ವರೆಗೂ ಭಾರತ ಇಟ್ಟುಕೊಳ್ಳಲಿ. ಆದರೆ ಹಸೀನಾ ಅವರು ಈ ವಿಚಾರದಲ್ಲಿ ಮೌನವಾಗಿಯೇ ಇರಲಿ ಎಂದು ನೋಬೆಲ್ ಪುರಸ್ಕೃತ ಯೂನುಸ್ ಹೇಳಿದ್ದಾರೆ. ಸದ್ಯ ಶೇಖ್ ಹಸೀನಾ ಭಾರತದಲ್ಲೇ ಉಳಿದುಕೊಂಡಿದ್ದು, ಬ್ರಿಟನ್ ಸೇರಿದಂತೆ ಯುರೋಪ್ ರಾಷ್ಟ್ರಗಳಿಗೆ ತೆರಳಲು ಸಾಧ್ಯವಾಗಿಲ್ಲ.
Muhammad Yunus, the head of Bangladesh's interim government, strongly rejected the notion that Bangladesh will turn into another Afghanistan without Sheikh Hasina at the helm, urging India to abandon this narrative and work towards improving bilateral ties.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm