ಬ್ರೇಕಿಂಗ್ ನ್ಯೂಸ್
02-09-24 10:47 pm HK News Desk ದೇಶ - ವಿದೇಶ
ನವದೆಹಲಿ, ಸೆ.2: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಸಿಕ್ಕಿದೆ. ಪುರುಷರ ಸಿಂಗಲ್ಸ್ ಎಸ್.ಎಲ್-3 ಕೆಟಗರಿಯ ಬ್ಯಾಡ್ಮಿಂಟನ್ನಲ್ಲಿ ಭಾರತದ ನಿತೇಶ್ ಕುಮಾರ್ ಚಿನ್ನದ ಪದಕ ಗೆದ್ದಿದ್ದಾರೆ.
ಫೈನಲ್ ಸ್ಪರ್ಧೆಯಲ್ಲಿ ನಿತೇಶ್ ಕುಮಾರ್ ತನ್ನ ಪ್ರತಿಸ್ಪರ್ಧಿ ಡೇನಿಯಲ್ ಬೆಥೆಲ್ ಅವರನ್ನು 21-14, 18-21, 23-21 ಅಂಕಗಳಿಂದ ಸೋಲಿಸಿದರು. ಅವನಿ ಲೇಖಾರ ಪ್ಯಾರಾಲಿಂಪಿಕ್ಸ್ ನಲ್ಲಿ ಈ ಬಾರಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಎರಡನೇ ಚಿನ್ನದೊಂದಿಗೆ ಭಾರತಕ್ಕೆ ಈವರೆಗೆ 9 ಪದಕ ಸಿಕ್ಕಂತಾಗಿದೆ. ಎರಡು ಚಿನ್ನ, ಮೂರು ಬೆಳ್ಳಿ, ನಾಲ್ಕು ಕಂಚು ಸಿಕ್ಕಿದೆ.
ನಿತೇಶ್ ಕುಮಾರ್ ಈ ಹಿಂದೆ ಆಡಿದ್ದ ಹತ್ತು ಪಂದ್ಯಗಳಲ್ಲಿ ಬ್ರಿಟನ್ನಿನ ಡೇನಿಯಲ್ ವಿರುದ್ಧ ಗೆಲ್ಲುವುದಕ್ಕೆ ಆಗಿರಲಿಲ್ಲ. ಹಾಗಾಗಿ, ಈ ಬಾರಿ ಡೇನಿಯಲ್ ಬೆಥೆಲ್ ಚಿನ್ನ ಗೆಲ್ಲುವ ಕುದುರೆಯೆಂದೇ ಪರಿಗಣಿಸಲ್ಪಟ್ಟಿದ್ದರು. ವಿಶೇಷ ಅಂದ್ರೆ, ಡೇನಿಯಲ್ ಬೆಥೆಲ್ ಕಳೆದ ಬಾರಿ 2020ರಲ್ಲಿ ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿಯೂ ಫೈನಲಿಗೆ ಬಂದು ಭಾರತದ ಸ್ಪರ್ಧಿ ಪ್ರಮೋದ್ ಭಗತ್ ವಿರುದ್ಧ ಮುಗ್ಗರಿಸಿದ್ದರು. ಈ ಬಾರಿಯೂ ಫೈನಲಿನಲ್ಲಿ ಭಾರತ ಆಟಗಾರನ ವಿರುದ್ಧ ಸೆಣಸಾಡಿ ಡೇನಿಯಲ್ ಬೆಳ್ಳಿ ಪದಕಕ್ಕೆ ತೃಪ್ತಿ ಪಡುವಂತಾಗಿದೆ.
ನಿತೇಶ್ ಕುಮಾರ್ ಐಐಟಿ ಪದವೀಧರನಾಗಿದ್ದು, 2009ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ರೈಲು ಅಪಘಾತದಲ್ಲಿ ಕಾಲು ಕಳಕೊಂಡ ನಂತರ ಐಐಟಿ ಓದುತ್ತಿದ್ದಾಗಲೇ ಪ್ಯಾರಾ ಬ್ಯಾಡ್ಮಿಂಟನ್ ಆಡಲು ಶುರು ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಉತ್ತಮ ನಿರ್ವಹಣೆ ತೋರಿದ್ದರು. ಇತ್ತೀಚೆಗೆ ನಡೆದ ಪ್ಯಾರಾ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪ್ಯನ್ ಶಿಪ್ ನಲ್ಲಿ ಚಿನ್ನದ ಪದಕ ಬೇಟೆಯಾಡಿದ್ದರು.
Nitesh Kumar, a para badminton player from Charkhi Dadri, Haryana, claimed India’s second gold medal at the Paris Paralympics on Monday in Para badminton, after beating Great Britain’s Daniel Bethell in the final of men’s singles SL3 category. SL3 class players, like Nitesh, compete with more severe lower limb disabilities, requiring play on a half-width court.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm