ಬ್ರೇಕಿಂಗ್ ನ್ಯೂಸ್
27-08-24 10:52 am HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 27: ಬಿಜೆಪಿ ಸಂಸದೆ, ಬಾಲಿವುಡ್ ನಟಿ ಕಂಗನಾ ರನೌತ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರ ಮಾಡಿರುವ ಎಮರ್ಜೆನ್ಸಿ ಎಂಬ ಚಲನಚಿತ್ರ ಸೆಪ್ಟಂಬರ್ 6ರಂದು ಬಿಡುಗಡೆಯಾಗಲಿದೆ. ಇಂದಿರಾ ಗಾಂಧಿ ವೇಷದಲ್ಲಿರುವ ಕಂಗನಾ ಪೋಸ್ಟರ್ ಹೊರಬಂದಿದ್ದು, ರಾಜಕೀಯದಲ್ಲಿ ಸಂಚಲನ ಎಬ್ಬಿಸುವ ಸಾಧ್ಯತೆಯಿದೆ. ಇದರ ನಡುವಲ್ಲೇ ಕಂಗನಾಗೆ ಜೀವ ಬೆದರಿಕೆ ಒಡ್ಡಲಾಗಿದೆ.
ಸಿಖ್ ವ್ಯಕ್ತಿಗಳಿಬ್ಬರು ಚಿತ್ರದಲ್ಲಿ ಸಿಕ್ಖರನ್ನು ವಿಲನ್ ಆಗಿಸಿ ತೋರಿಸಿದಲ್ಲಿ ಪರಿಣಾಮ ನೆಟ್ಟಗಿರಲ್ಲ ಎಂದು ಓಪನ್ ಆವಾಜ್ ಹಾಕಿದ್ದಾರೆ. ಇಬ್ಬರು ವ್ಯಕ್ತಿಗಳು ಕುಳಿತು ಮಾತನಾಡುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಕ್ಖರನ್ನು ವಿಲನ್ ಆಗಿ ತೋರಿಸಿದರೆ, ಶಿರಚ್ಛದಕ್ಕೂ ಹೇಸಲ್ಲ. ಇಡೀ ದೇಶದಲ್ಲಿ ಹಿಂದು, ಸಿಖ್, ಕ್ರಿಸ್ತಿಯನ್, ಮುಸ್ಲಿಮರು ಎನ್ನುವ ಭೇದ ಇಲ್ಲದೆ ಚಪ್ಪಲಿಯಲ್ಲಿ ಕಪಾಳ ಮೋಕ್ಷ ಮಾಡಲಿದ್ದಾರೆ ಎಂದು ಬೆದರಿಕೆ ಹಾಕಿದ್ದಾರೆ.


ಇಬ್ಬರು ವ್ಯಕ್ತಿಗಳ ಬೆದರಿಕೆ ವಿಡಿಯೋವನ್ನು ಕಂಗನಾ ಅವರು ಹಿಮಾಚಲ ಪ್ರದೇಶದ ಡಿಜಿಪಿಗೆ ಟ್ಯಾಗ್ ಮಾಡಿದ್ದಾರೆ. 1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಚಿತ್ರಣದ ಕತೆಯನ್ನಾಧರಿಸಿ ಎಮರ್ಜೆನ್ಸಿ ಚಿತ್ರವನ್ನು ಮಾಡಲಾಗಿದೆ. 1984ರಲ್ಲಿ ಇಂದಿರಾ ಗಾಂಧಿಯನ್ನು ತುರ್ತು ಸ್ಥಿತಿ ಹೇರಿದ ಕಾರಣಕ್ಕಾಗಿಯೇ ಆಕೆಯ ಸಿಖ್ ಅಂಗರಕ್ಷಕರೇ ಗುಂಡು ಹಾರಿಸಿ ಕೊಂದಿದ್ದರು. ಆನಂತರ, ಪಂಜಾಬ್, ಹರ್ಯಾಣ, ದೆಹಲಿಯಲ್ಲಿ ಸಾವಿರಾರು ಸಿಕ್ಖರ ಮಾರಣ ಹೋಮ ನಡೆದಿತ್ತು. ಇಂದಿರಾ ಅವರನ್ನು ಸಿಕ್ಖರು ಕೊಂದಿದ್ದಾರೆಂಬ ಕಾರಣಕ್ಕೆ ಕಾಂಗ್ರೆಸ್ ಅವರನ್ನು ದೂರವೇ ಇಟ್ಟಿದೆ. ಇದೀಹ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಂಗನಾ ರನೌತ್, ತಾನೇ ಇಂದಿರಾ ಗಾಂಧಿ ಪಾತ್ರ ಮಾಡಿದ್ದಲ್ಲದೆ, ಎಮರ್ಜೆನ್ಸಿ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
BJP MP from Mandi and actor Kangana Ranaut has received beheading threats from extremist Sikh groups after the release of her upcoming movie trailer. She is playing the role of former PM Indira Gandhi in 'Emergency' which is to be released on September 6. After the threatening video went viral, the actor sought police help.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 03:30 pm
HK News Staffer
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm