ಬ್ರೇಕಿಂಗ್ ನ್ಯೂಸ್
25-08-24 10:56 pm HK News Desk ದೇಶ - ವಿದೇಶ
ಹೈದರಾಬಾದ್, ಆಗಸ್ಟ್ 25: ತೆಲಂಗಾಣ ಮೂಲದ 27 ವರ್ಷದ ಯುವಕನೊಬ್ಬ ಸಹೋದ್ಯೋಗಿ ಜೊತೆ ಸೌದಿ ಅರೇಬಿಯಾದ ಭಯಾನಕ ಮರಳುಗಾಡಿನಲ್ಲಿ ಸಿಲುಕಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಸೌದಿಯ ಅಪಾಯಕಾರಿ ರಬ್ ಅಲ್ ಖಲಿ ಮರುಭೂಮಿಯಲ್ಲಿ ಈ ದುರಂತ ಸಂಭವಿಸಿದೆ.
ತೆಲಂಗಾಣದ ಕರೀಮ್ ನಗರ ನಿವಾಸಿಯಾಗಿದ್ದ ಮೊಹಮ್ಮದ್ ಶೆಹಜಾದ್ ಖಾನ್ ಮೃತ ದುರ್ದೈವಿ. ಕಳೆದ ಮೂರು ವರ್ಷಗಳಿಂದ ಸೌದಿ ಅರೇಬಿಯಾದ ಟೆಲಿಕಾಂ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಜಗತ್ತಿನ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದು ಎಂದೇ ಹೇಳಲಾಗಿರುವ ರಬ್ ಅಲ್ ಖಲಿ ಮರುಭೂಮಿಯ ಎಂಪ್ಟಿ ಕ್ವಾರ್ಟರ್ ಎಂಬ ನಿರ್ಜನ ಭಾಗದಲ್ಲಿ ಸಿಲುಕಿಕೊಂಡ ಶೆಹಜಾದ್ ಖಾನ್ ಜೀವ ಕಳೆದುಕೊಂಡಿದ್ದಾನೆ. ಈತ ಸುಡಾನ್ ಮೂಲದ ವ್ಯಕ್ತಿಯ ಜೊತೆಗೆ ತಿರುಗಾಡಲು ಹೋಗಿದ್ದು ಆತನೂ ಅನ್ನ, ನೀರು ಸಿಗದೆ ಮರಳಿನಲ್ಲಿ ಬಿದ್ದು ಸತ್ತಿದ್ದಾನೆ.
650 ಕಿಮೀಗೂ ಅಧಿಕ ವಿಸ್ತಾರ ಪ್ರದೇಶದಲ್ಲಿ ಚಾಚಿಕೊಂಡಿರುವ ರಬ್ ಅಲ್ ಖಲಿ ಮರುಭೂಮಿ, ಸೌದಿ ಅರೇಬಿಯಾದ ದಕ್ಷಿಣ ಪ್ರದೇಶ ಹಾಗೂ ನೆರೆಯ ದೇಶಗಳ ವರೆಗೂ ಹರಡಿದೆ. ಇಲ್ಲಿನ ಕಠೋರ ವಾತಾವರಣ ಪರಿಸ್ಥಿತಿ ಕಾರಣದಿಂದ ಇದನ್ನು ‘ನಟೋರಿಯಸ್’ ಜಾಗ ಎಂದೇ ಕರೆಯಲಾಗುತ್ತದೆ.
ಸುಡಾನ್ ದೇಶದ ಪ್ರಜೆ, ಸಹೋದ್ಯೋಗಿ ಜತೆ ಶೆಹಜಾದ್ ಖಾನ್ ಮರಳುಗಾಡಿನ ಪ್ರಯಾಣದ ಅನುಭವ ಪಡೆಯಲು ತೆರಳಿದ್ದ.
ಆದರೆ ಅವರ ಮೊಬೈಲ್ ಬ್ಯಾಟರಿ ಮುಗಿದು ಜಿಪಿಎಸ್ ಸಿಗ್ನಲ್ ಕೈಕೊಟ್ಟಿದ್ದರಿಂದ ಇಬ್ಬರೂ ಅಪಾಯಕ್ಕೆ ಸಿಲುಕಿದ್ದಾರೆ. ಶೆಹಜಾದ್ನ ಮೊಬೈಲ್ ಫೋನ್ ಬ್ಯಾಟರಿ ಡೆಡ್ ಆಗಿದ್ದರಿಂದ ಅವರಿಬ್ಬರೂ ಸಹಾಯಕ್ಕಾಗಿ ಕರೆ ಮಾಡುವುದು ಸಾಧ್ಯವಾಗಿರಲಿಲ್ಲ. ದಾರಿ ಹುಡುಕುವ ಪ್ರಯತ್ನದಲ್ಲಿ ಅವರ ವಾಹನದ ಇಂಧನ ಕೂಡ ಖಾಲಿಯಾಗಿದೆ. ಬೆಂಕಿಯಂತೆ ಸುಡುತ್ತಿರುವ ಬಿಸಿಲ ತಾಪ ಒಂದೆಡೆಯಾದರೆ, ಬಾಯಾರಿಕೆ ದಣಿವಾರಿಸಲು ನೀರು ಮತ್ತು ಆಹಾರ ಸಿಗದೆ ಒದ್ದಾಡಿದ್ದಾರೆ. ತಾಪಮಾನ ಸಹಿಲಾಗದಷ್ಟು ವಿಪರೀತ ಮಟ್ಟಕ್ಕೆ ತಲುಪಿದಾಗ ಜೀವ ಉಳಿಸಿಕೊಳ್ಳಲು ಇಬ್ಬರೂ ಶಕ್ತಿಮೀರಿ ಹೋರಾಡಿದ್ದಾರೆ. ಆದರೆ ಪ್ರಕೃತಿ ಮುಂದೆ ಅವರ ಪ್ರಯತ್ನ ಸಫಲವಾಗಿಲ್ಲ. ಒಣಗುತ್ತಿದ್ದ ಗಂಟಲನ್ನು ತೇವ ಮಾಡಿಕೊಳ್ಳಲಾಗದಷ್ಟು ಇಡೀ ದೇಹ ಒಣಗಿತ್ತು. ನಿರ್ಜಲೀಕರಣ ಹಾಗೂ ಬಳಲಿಕೆಯಿಂದ ಹೈರಾಣಾದ ಇಬ್ಬರೂ ಅಲ್ಲಿಯೇ ದಾರುಣ ಅಂತ್ಯ ಕಂಡಿದ್ದಾರೆ. ನಾಲ್ಕು ದಿನಗಳ ಬಳಿಕ, ಕಳೆದ ಗುರುವಾರ ಶೆಹಜಾದ್ ಮತ್ತು ಆತನ ಸಹೋದ್ಯೋಗಿಯ ಶವಗಳು ಮರಳಿನ ದಿಬ್ಬಗಳ ನಡುವೆ ನಿಂತಿದ್ದ ಅವರ ವಾಹನದ ಪಕ್ಕದಲ್ಲಿ ಪತ್ತೆಯಾಗಿವೆ.
The sun is extremely hot in Saudi Arabia, and two people have died due to the high temperatures. A resident of Telangana, India went missing in the southern desert of Saudi Arabia, known as the empty quarter or Rab al-Khali in Arabic, which is one of the most desolate places on earth. 27-year-old Mohammad Shahzad Khan died of dehydration due to constant walking in the sun. He was identified as a resident of Karimnagar in Telangana.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm