ಬ್ರೇಕಿಂಗ್ ನ್ಯೂಸ್
25-08-24 10:13 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 25: ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್, ರಾಜಕೀಯಕ್ಕೆ ಸೇರ್ಪಡೆಯಾಗ್ತಾರಾ ಎನ್ನುವ ಕುತೂಹಲದ ಪ್ರಶ್ನೆ ಎದ್ದಿದೆ. ಒಲಿಂಪಿಕ್ ಕೂಟದಿಂದ ಬಂದ ಬೆನ್ನಲ್ಲೇ ಹರ್ಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷ ಕಾಂಗ್ರೆಸ್ ನಾಯಕ ಭೂಪೀಂದರ್ ಸಿಂಗ್ ಹೂಡಾ ಅವರನ್ನು ಭೇಟಿ ಮಾಡಿರುವುದು ರಾಜಕೀಯಕ್ಕೆ ಎಂಟ್ರಿಯಾಗುತ್ತಾರೆ ಎನ್ನುವ ವದಂತಿ ಹಬ್ಬಲು ಕಾರಣವಾಗಿದೆ.
ಕಾಂಗ್ರೆಸ್ ಹಿರಿಯ ನಾಯಕ ಭೂಪೀಂದರ್ ಸಿಂಗ್ ಹೂಡಾ ಅವರನ್ನು ವಿನೇಶ್ ಫೋಗಟ್ ಸೌಹಾರ್ದ ಭೇಟಿಯಾಗಿದ್ದಾರೆ. ಇದರ ಬೆನ್ನಲ್ಲೇ ವಿನೇಶ್ ಫೋಗಟ್ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದು, ಅಕ್ಟೋಬರ್ 01ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಭೂಪೀಂದರ್ ಸಿಂಗ್ ಭೇಟಿಯ ಕುರಿತಂತೆ ವಿನೇಶ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಹೂಡಾ, ಯಾರೇ ಕಾಂಗ್ರೆಸ್ಗೆ ಬಂದರೂ ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.
ಓರ್ವ ಅಥ್ಲೀಟ್ ಆದವರು ಯಾವುದೇ ನಿರ್ದಿಷ್ಟ ಪಕ್ಷ ಅಥವಾ ರಾಜ್ಯಕ್ಕೆ ಸೇರಿದವರಾಗಿರುವುದಿಲ್ಲ. ಒಲಿಂಪಿಕ್ ಸ್ಪರ್ಧಿಸಿದ ಯಾವುದೇ ಅಥ್ಲೀಟ್ ಇಡೀ ದೇಶದ ಪ್ರತಿನಿಧಿಗಳಾಗಿರುತ್ತಾರೆ. ಈಕೆ ಕೂಡಾ ಇಡೀ ದೇಶದ ಪ್ರತಿನಿಧಿ. ಯಾವುದಾದರೂ ಪಕ್ಷವನ್ನು ಸೇರಬೇಕೋ ಅಥವಾ ಬೇಡವೇ ಎನ್ನುವುದು ಅವರ ಆಯ್ಕೆಯಾಗಿರುತ್ತದೆ. ಆದರೆ ಯಾರೇ ಕಾಂಗ್ರೆಸ್ ಪಕ್ಷಕ್ಕೆ ಬಂದರೂ ಅವರನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. ಆಕೆ ಏನು ಮಾಡಬೇಕು ಎನ್ನುವ ನಿರ್ಧಾರ ಆಕೆಗೆ ಬಿಟ್ಟಿದ್ದು ಎಂದು ಹರ್ಯಾಣ ವಿಧಾನಸಭೆ ವಿಪಕ್ಷ ನಾಯಕ ಭೂಪೀಂದರ್ ಸಿಂಗ್ ಹೂಡಾ ಹೇಳಿದ್ದಾರೆ.
ಇತ್ತೀಚೆಗಷ್ಟೇ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 50 ಕೆಜಿ ಫ್ರೀ ಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ 29 ವರ್ಷದ ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರು. ಒಲಿಂಪಿಕ್ಸ್ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಇತಿಹಾಸ ನಿರ್ಮಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ 100 ಗ್ರಾಮ್ ತೂಕ ಹೆಚ್ಚಳವಾಗಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ಇದೇ ವೇಳೆ, ಈ ಹಿಂದೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಜೊತೆಗಿನ ಗಲಾಟೆಯೇ ಇದಕ್ಕೆಲ್ಲ ಕಾರಣ ಎಂಬಂತೆ ಚರ್ಚೆಯೂ ನಡೆದಿತ್ತು. ಒಲಿಂಪಿಕ್ಸ್ ಕೂಟಕ್ಕೆ ವಿದಾಯ ಹೇಳಿ ಬಂದಿದ್ದ ವಿನೇಶ್ ಪೋಗಟ್ ಪರವಾಗಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು.
Wrestling star Vinesh Phogat fuelled speculations of joining politics in the future after meeting Congress politician and former Chief Minister of Haryana Bhupendra Singh Hooda at his New Delhi residence on Friday.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm