ಬ್ರೇಕಿಂಗ್ ನ್ಯೂಸ್
17-08-24 09:49 pm HK News Desk ದೇಶ - ವಿದೇಶ
ಕೊಲ್ಕತ್ತಾ, ಆಗಸ್ಟ್.17: ವೈದ್ಯ ವಿದ್ಯಾರ್ಥಿನಿಯ ಮೇಲಿನ ಪೈಶಾಚಿಕ ಗ್ಯಾಂಗ್ ರೇಪ್ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ದೇಶಾದ್ಯಂತ ವೈದ್ಯರು ಬೀದಿಗಿಳಿದಿದ್ದಾರೆ. ಆಗಸ್ಟ್ 17ರ ಶನಿವಾರ 24 ಗಂಟೆ ಕಾಲ ವೈದ್ಯರು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಸೂಚಿಸಿದ್ದಾರೆ. ಗ್ಯಾಂಗ್ ರೇಪ್ ಮಾಡಿರುವ ಕೃತ್ಯದ ಬಗ್ಗೆ ಸಮಗ್ರ ತನಿಖೆ ನಡೆಸಿ, ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ಇದೇ ವೇಳೆ, ದೇಶಾದ್ಯಂತ ವೈದ್ಯರು ಬೀದಿಗಿಳಿದರೂ ಪ್ರಧಾನಿ ಮೋದಿ ಮೌನ ವಹಿಸಿರುವ ಬಗ್ಗೆಯೂ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕೇಂದ್ರ ಸಚಿವರೂ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಂತ ಮಜುಂದಾರ್ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಕೊಲ್ಕತ್ತಾ ಆಸ್ಪತ್ರೆಯ ವೈದ್ಯಾಧಿಕಾರಿಗಳ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದಾರೆ. ವೈದ್ಯರ ವಾಟ್ಸಪ್ ಗ್ರೂಪ್ ಚಾಟ್ ಹೊರಬಂದಿದ್ದು, ಅದರಲ್ಲಿ ಡ್ರಗ್ಸ್ ರಾಕೆಟ್ ರೀತಿಯಲ್ಲೇ ಸೆಕ್ಸ್ ರಾಕೆಟ್ ಕೂಡ ನಡೆಯುತ್ತಿತ್ತಾ ಎನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ. ವೈದ್ಯರ ತಂಡ ವಾಟ್ಸಪ್ ಚಾಟ್ ಮಾಡಿರುವ ಸ್ಕ್ರೀನ್ ಶಾಟ್ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಡ್ರಗ್ಸ್ ರಾಕೆಟ್ ರೀತಿಯಲ್ಲೇ ಸೆಕ್ಸ್ ರಾಕೆಟ್ ವಿಷಯದ ಉಲ್ಲೇಖ ಇದೆ. ಟಿಎಂಸಿ ಸಂಸದ ಮತ್ತು ಅವರ ಅಳಿಯನ ಹೆಸರು ಚಾಟ್ ಮಧ್ಯೆ ಕಾಣಿಸಿಕೊಂಡಿದೆ. ಅಲ್ಲಿ ಏನಾಗಿದೆ ಅಂತ ಗೊತ್ತಿಲ್ಲ. ಆದರೆ ಏನೋ ಎಡವಟ್ಟು ಆಗಿರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಇದಲ್ಲದೆ, ಟಿಎಂಸಿ ಪಕ್ಷದ ಯಾವುದೇ ಸಂಸದನೂ ಇದರ ಬಗ್ಗೆ ಚಕಾರ ಎತ್ತಿಲ್ಲ ಯಾಕೆ. ಮಹಿಳಾ ಸಂಸದರಿದ್ದರೂ ಇಷ್ಟೊಂದು ವಿಕೃತ ಘಟನೆಯಾದರೂ ಮೌನ ವಹಿಸಿದ್ದಾರೆ ಯಾಕೆ. ಈ ಪೈಕಿ ಒಬ್ಬ ಟಿಎಂಸಿ ಸಂಸದ, ಮೂರು ಶಾಸಕರು ಅದೇ ಆರ್ ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲೇ ಕಲಿತವರಿದ್ದಾರೆ. ಇವರೆಲ್ಲ ತಮ್ಮ ಬಾಯಿಗೆ ಬೀಗ ಜಡಿದುಕೊಂಡು ಕುಳಿತಿರುವುದು ಇವರು ಯಾರನ್ನೋ ರಕ್ಷಣೆ ಮಾಡುತ್ತಿರುವಂತಿದೆ ಎಂದು ಸುಕಂತ ಮಜುಂದಾರ್ ಹೇಳಿದ್ದಾರೆ.
ಘಟನೆಯ ಬಗ್ಗೆ ತನಿಖೆಯನ್ನೇ ನಡೆಸದೆ ಪೊಲೀಸರು ಯುವತಿಯ ಹೆತ್ತವರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಯಾಕೆ ಹೇಳಿದ್ದಾರೆ. ಈ ರೀತಿ ಹೇಳಿಕೆ ನೀಡುವುದಕ್ಕೆ ಮೊದಲೇ ತಯಾರಿ ಮಾಡಿಕೊಂಡಿದ್ದರೇ.. ಪೊಲೀಸರು ಯಾರನ್ನೋ ಬಚಾವ್ ಮಾಡಲು ಪ್ರಯತ್ನ ಮಾಡಿರುವಂತೆ ಕಾಣುತ್ತಿದೆ. ಘಟನೆ ಬಳಿಕದ ಬೆಳವಣಿಗೆಗಳೇ ಪಶ್ಚಿಮ ಬಂಗಾಳ ಸರಕಾರವೇ ಯಾರನ್ನೋ ರಕ್ಷಣೆ ಮಾಡಲು ನಿಂತಿರುವುದನ್ನು ಹೇಳುತ್ತಿದೆ ಎಂದು ಸುಕಂತಾ ಮಜುಂದಾರ್ ಹೇಳಿದ್ದಾರೆ.
Indian doctors have called for a nationwide shutdown of hospital services as public fury over the rape and murder of a trainee medic in the eastern city of Kolkata last week mounts. The Indian Medical Association (IMA), the country’s largest grouping of medics with 400,000 members, said the 24-hour shutdown would be implemented on Saturday, affecting most hospital departments except for essential services.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm