ಬ್ರೇಕಿಂಗ್ ನ್ಯೂಸ್
16-08-24 08:11 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್.16: ನೂರಕ್ಕೂ ಹೆಚ್ಚು ದೇಶಗಳಲ್ಲಿ ಮಂಕಿ ಪಾಕ್ಸ್ ಹಬ್ಬಿದ್ದು ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಆಫ್ರಿಕಾ ಖಂಡದ ಬಹುತೇಕ ಭಾಗದಲ್ಲಿ ರೋಗದ ಹಾವಳಿ ಕಾಣಿಸಿಕೊಂಡಿದ್ದು ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ ಈ ರೋಗದಿಂದ ಸಂಪೂರ್ಣ ನಲುಗಿದೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎರಡನೇ ಬಾರಿಗೆ ಮಂಕಿ ಪಾಕ್ಸ್ ಬಗ್ಗೆ ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈ ಬಾರಿ ಎಮರ್ಜೆನ್ಸಿ ಘೋಷಣೆ ಮಾಡುವ ಜೊತೆಯಲ್ಲೇ ಸೋಂಕಿನ ವಿರುದ್ಧ ಹೋರಾಡಲು 1.5 ಮಿಲಿಯನ್ ಅಮೆರಿಕನ್ ಡಾಲರ್ ಅನುದಾನವನ್ನೂ ನೀಡಿದೆ.
ಸಿಡುಬು ರೋಗದಂತೆ ಕಂಡು ಬರುವ ಈ ರೋಗವನ್ನು 1970ರಲ್ಲಿ ಮೊದಲ ಬಾರಿಗೆ ವಿಜ್ಞಾನಿಗಳು ಮನುಷ್ಯನಲ್ಲಿ ಪತ್ತೆ ಮಾಡಿದ್ದರು. ಅದಕ್ಕೂ ಹಿಂದೆ ಈ ಸೋಂಕು ಕೇವಲ ಕೋತಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆಫ್ರಿಕಾದಲ್ಲೇ ಮೊದಲ ಬಾರಿಗೆ ಈ ಸೋಂಕು ಮನುಷ್ಯನಿಗೆ ಹರಡಿತ್ತು. ಕೇಂದ್ರ ಹಾಗೂ ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಈ ಸೋಂಕಿನ ಹಾವಳಿ ವಿಪರೀತವಾಗಿದೆ. ಸೋಂಕಿತ ಪ್ರಾಣಿಗಳ ಸಂಪರ್ಕಕ್ಕೆ ಬರುವ ಮಾನವರಿಗೂ ಮಂಕಿ ಪಾಕ್ಸ್ ಹರಡುತ್ತಿದೆ. 2022ರಲ್ಲಿ ಸೋಂಕು ಹರಡುವ ತೀವ್ರತೆ ಹೆಚ್ಚತೊಡಗಿತ್ತು.
ಮನುಷ್ಯನಲ್ಲಿ ಈ ಸೋಂಕು ಲೈಂಗಿಕ ಸಂಪರ್ಕದ ಮೂಲಕ ಹರಡುತ್ತದೆ ಎಂದು ಪತ್ತೆ ಮಾಡಲಾಗಿದೆ. 2022ರಲ್ಲಿ ಜಗತ್ತಿನ ಸುಮಾರು 70 ದೇಶಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆಗಲೂ ಜಾಗತಿಕ ತುರ್ತು ಪರಿಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿತ್ತು. ಆದರೆ ರೋಗದ ಹರಡುವಿಕೆ ಕಡಿಮೆಯಾಗಿಲ್ಲ. ಈವರೆಗೆ 15,300 ಮಂದಿಗೆ ಸೋಂಕು ಪತ್ತೆಯಾಗಿದ್ದು 537 ಮಂದಿ ಸಾವನ್ನಪ್ಪಿದ್ದಾರೆ.
ರೋಗ ಲಕ್ಷಣಗಳೇನು? ಅಪಾಯಕಾರಿಯೇ?
ಮಂಕಿ ಪಾಕ್ಸ್ ವೈರಾಣು ತಗುಲಿದ ವ್ಯಕ್ತಿಗಳಲ್ಲಿ ಆರಂಭದಲ್ಲಿ ಸಾಮಾನ್ಯ ರೀತಿಯ ಜ್ವರದ ಮಾದರಿಯ ಲಕ್ಷಣಗಳು ಕಂಡುಬರುತ್ತವೆ. ಜ್ವರ, ಚಳಿ ಹಾಗೂ ಮೈ ಕೈ ನೋವು ಇರುತ್ತದೆ. ಸಕಾಲದಲ್ಲಿ ಚಿಕಿತ್ಸೆ ಸಿಗದೆ ಹೋದರೆ ಸೋಂಕಿತರ ಮೈಯಲ್ಲಿ ಗುಳ್ಳೆಗಳು ಬೀಳುತ್ತವೆ. ಮುಖ, ಕೈ, ಎದೆ ಹಾಗೂ ಗುಪ್ತಾಂಗಗಳಲ್ಲಿ ಗುಳ್ಳೆಗಳು ಏಳುತ್ತವೆ. ತೀವ್ರ ತುರಿಕೆ ಕಂಡುಬರುತ್ತದೆ. ಸೂಕ್ತ ಚಿಕಿತ್ಸೆ ಸಿಗದೇ ಹೋದರೆ ಸಾವು ಸಂಭವಿಸುತ್ತದೆ. ಮಾರಣಾಂತಿಕ ಅಲ್ಲದಿದ್ದರೂ, ಸೋಂಕು ಹರಡುವ ವೇಗ ಹೆಚ್ಚಿರುವುದು ಮತ್ತು ಸಕಾಲದಲ್ಲಿ ಸೋಂಕು ಪತ್ತೆ ಆಗದಿರುವುದು ಸವಾಲಾಗಿ ಪರಿಣಮಿಸಿದೆ. ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ, ರೋಗ ಪತ್ತೆ ಮತ್ತು ಚಿಕಿತ್ಸೆ ಕಷ್ಟವಾಗುತ್ತದೆ. ಆಫ್ರಿಕಾ ರಾಷ್ಟ್ರಗಳ ಪೈಕಿ ಬುರುಂಡಿ, ಉಗಾಂಡ, ರವಾಂಡ, ಕೆನ್ಯಾ ದೇಶಗಳಲ್ಲಿ ಹೊಸತಾಗಿ ಸೋಂಕು ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಸೋಂಕಿಗೆ ಎದುರಾಗಿ ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು ಈ ರಾಷ್ಟ್ರಗಳಿಗೆ ಪೂರೈಕೆ ಮಾಡಲಾಗಿದೆ.
On Friday, the Pakistani province of Khyber Pakhtunkhwa's health department made the announcement that three patients had tested positive for the MPox virus, also known as monkeypox. After returning from the United Arab Emirates, these individuals reportedly tested positive for the virus. In light of the rising number of cases of Mpox in Africa, the World Health Organization (WHO) announced the disease, which was previously known as monkeypox, 'a global health emergency' on Wednesday. Following a meeting of the UN health agency's emergency committee, the announcement was made.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm