ಬ್ರೇಕಿಂಗ್ ನ್ಯೂಸ್
11-08-24 01:45 pm HK News Desk ದೇಶ - ವಿದೇಶ
ಢಾಕಾ, ಆಗಸ್ಟ್ 11: ಮೀಸಲಾತಿ ವಿರೋಧಿ ಹೋರಾಟಗಾರರ ಹಿಂಸಾಚಾರ ಅಲ್ಪಸಂಖ್ಯಾತ ಹಿಂದುಗಳ ಮೇಲೆ ತಿರುಗಿದ ಬೆನ್ನಲ್ಲೇ ಬಾಂಗ್ಲಾ ದೇಶದಲ್ಲಿ ಹಿಂದೂ ಸಮುದಾಯದ ಲಕ್ಷಾಂತರ ಮಂದಿ ಬೀದಿಗೆ ಇಳಿದಿದ್ದಾರೆ. ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಹಿಂದೂಗಳು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದು ನಾವೆಲ್ಲೂ ಹೋಗಲ್ಲ. ನಾವು ಬಾಂಗ್ಲಾದವರೇ. ಬಾಂಗ್ಲಾ ನಮ್ಮ ಹಕ್ಕು ಎಂದು ಘೋಷಣೆ ಕೂಗುತ್ತ ಧರಣಿ ನಡೆಸಿದ್ದಾರೆ.
ಬಾಂಗ್ಲಾ ದೇಶದ ಮಾಜಿ ಪ್ರಧಾನ ಮಂತ್ರಿ ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಶುರುವಾದ ಹಿಂದೂಗಳ ಮೇಲಿನ ಹಿಂಸಾಚಾರ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಹಿಂದೂಗಳು ತಮ್ಮ ಆಕ್ರೋಶ ಹೊರ ಹಾಕುತ್ತಿದ್ಧಾರೆ. ರಾಜಧಾನಿ ಢಾಕಾ ಹಾಗೂ ಚಿತ್ತಗಾಂಗ್ನಲ್ಲಿ ಹಿಂದೂಗಳು ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಬಾಂಗ್ಲಾ ದೇಶದಲ್ಲಿ ಢಾಕಾ ಬಳಿಕ ಎರಡನೇ ಅತಿ ದೊಡ್ಡ ನಗರವಾದ ಚಿತ್ತಗಾಂಗ್ನಲ್ಲಿ ಲಕ್ಷಾಂತರ ಮಂದಿ ಹಿಂದೂಗಳು ಒಂದೆಡೆ ಸೇರಿ ಭಾರೀ ಜನಾಂದೋಲನ ನಡೆಸಿದರು.
ಬಾಂಗ್ಲಾ ದೇಶದಾದ್ಯಂತ 52 ಜಿಲ್ಲೆಗಳಲ್ಲಿ ಸುಮಾರು 205 ಕಡೆ ಅಲ್ಪಸಂಖ್ಯಾತ ಹಿಂದುಗಳನ್ನು ಟಾರ್ಗೆಟ್ ಮಾಡಿ ದಾಳಿಗಳು ನಡೆದಿವೆ. ನೂರಾರು ಹಿಂದೂಗಳು ಗಾಯಗೊಂಡಿದ್ದು ಹಲವರು ಸಾವನ್ನಪ್ಪಿದ್ದಾರೆ. ಹಿಂದೂಗಳ ಮನೆ ಹಾಗೂ ಉದ್ಯಮಗಳ ಮೇಲೂ ದಾಳಿ ನಡೆದಿದೆ. ಸಾಕಷ್ಟು ಕಡೆ ಹಿಂದೂ ದೇಗುಲಗಳಿಗೂ ಹಾನಿ ಮಾಡಲಾಗಿದೆ. ಶೇಖ್ ಹಸೀನಾ ಅವರ ಆವಾಮಿ ಲೀಗ್ ಪಕ್ಷದ ನಾಯಕರಾಗಿದ್ದ ಇಬ್ಬರು ಹಿಂದುಗಳನ್ನು ಹತ್ಯೆ ಮಾಡಲಾಗಿದೆ. ಕೆಲವು ದೇಗುಲಗಳ ಮೇಲೆ ದಾಳಿ ನಡೆಸಿ, ಬೆಂಕಿ ಇಟ್ಟಿರುವ ಘಟನೆಗಳೂ ನಡೆದಿವೆ. ಇದೇ ವೇಳೆ, ಸಾವಿರಾರು ಮಂದಿ ಬಾಂಗ್ಲಾ ಬಿಟ್ಟು ಭಾರತಕ್ಕೆ ಬರಲು ಗಡಿಯಲ್ಲಿ ಜಮಾಯಿಸಿರುವ ಘಟನೆಗಳೂ ನಡೆದಿವೆ.
ಇದೀಗ ತಮ್ಮ ಮೇಲಾದ ದೌರ್ಜನ್ಯ ವಿರುದ್ಧ ಹೋರಾಟ ನಡೆಸುತ್ತಿರುವ ಹಿಂದೂ ಸಮುದಾಯ, ತಮ್ಮ ಮೇಲೆ ದಾಳಿ ಮಾಡಿದವರನ್ನು ಗುರುತಿಸಿ ಅವರಿಗೆ ಶಿಕ್ಷೆ ಕೊಡಲು ವಿಶೇಷ ನ್ಯಾಯ ಮಂಡಳಿ ರಚನೆ ಮಾಡುವಂತೆ ಆಗ್ರಹಿಸಿದ್ದಾರೆ. ಬಾಂಗ್ಲಾ ದೇಶದ ಸಂಸತ್ನಲ್ಲಿ ಶೇ. 10 ರಷ್ಟು ಸ್ಥಾನಗಳನ್ನು ಅಲ್ಪಸಂಖ್ಯಾತ ಹಿಂದೂಗಳಿಗೆ ಮೀಸಲು ಇಡುವಂತೆಯೂ ಆಗ್ರಹಿಸಿದ್ದಾರೆ. ಜೊತೆಯಲ್ಲೇ ಅಲ್ಪಸಂಖ್ಯಾತ ರಕ್ಷಣಾ ಕಾನೂನು ಜಾರಿಗೆ ತರಬೇಕು ಎಂದೂ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಹಿಂದುಗಳ ಮೇಲೆ ದಾಳಿಯಿಂದ ಕಂಗೆಟ್ಟ ಹಂಗಾಮಿ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಿಸ್, ದಾಳಿ ನಿಲ್ಲಿಸದಿದ್ದರೆ ರಾಜಿನಾಮೆ ಕೊಟ್ಟು ಹೋಗುತ್ತೇನೆ ಎಂದು ಹೋರಾಟಗಾರರಿಗೆ ಎಚ್ಚರಿಸಿದ್ದಾರೆ.
Members of at least six Hindu organisations marched to the office of the Assistant High Commissioner of Bangladesh in Guwahati to protest the targeted attacks on minorities during the political turmoil in the neighbouring country. The groups, including Kutumba Surakshya Parishad and Hindu Surakshya Sena, also handed over a memorandum to the representatives of Bangladesh containing a list of demands and requests.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm