ಬ್ರೇಕಿಂಗ್ ನ್ಯೂಸ್
08-08-24 07:44 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 8: ಬಾಂಗ್ಲಾ ರಾಜಧಾನಿಯಲ್ಲಿ ಹಿಂಸಾಚಾರ ಭುಗಿಲೆದ್ದು ಪ್ರಧಾನಿ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗುತ್ತಾರೆ ಎಂದು ತಿಳಿಯುತ್ತಲೇ ಆರ್ಮಿಯಿಂದ ಪ್ರಧಾನಿ ಶೇಖ್ ಹಸೀನಾ ಅವರು ದೇಶ ತೊರೆಯುವುದಕ್ಕೆ ಕೇವಲ 45 ನಿಮಿಷ ನೀಡಲಾಗಿತ್ತು. ಇದರಿಂದಾಗಿ ಶಾಕ್ ಆಗಿದ್ದ ಶೇಖ್ ಹಸೀನಾ ಏನು ಮಾಡುವುದೆಂದು ತೋಚದೆ ತನ್ನ ಬಟ್ಟೆಬರೆ, ಇನ್ನಿತರ ಅಗತ್ಯ ವಸ್ತುಗಳನ್ನೆಲ್ಲ ಬಿಟ್ಟು ಉಟ್ಟ ಬಟ್ಟೆಯಲ್ಲೇ ದೇಶ ತೊರೆದಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಆರ್ಮಿ ಸೂಚನೆ ಸಿಗುತ್ತಲೇ ತನ್ನ ಸೋದರಿ ಶೇಖ್ ರೆಹನಾ ಮತ್ತು ಇತರ ಆಪ್ತರ ಜೊತೆಗೆ ದೇಶ ತೊರೆದು ಸೇನೆಯ ಹೆಲಿಕಾಪ್ಟರ್ ನಲ್ಲಿ ನೇರವಾಗಿ ಭಾರತಕ್ಕೆ ಬಂದಿದ್ದರು. ಈ ನಡುವೆ, ಇಂಗ್ಲೆಂಡ್ ಗೆ ಹಾರಲು ಅಲ್ಲಿನ ಸರಕಾರದ ಅನುಮತಿ ಕೇಳಿದ್ದರು. ಆದರೆ, ಅವಕಾಶ ಸಿಗದೇ ಇದ್ದುದರಿಂದ ಭಾರತದ ಗಾಜಿಯಾಬಾದ್ ನಲ್ಲಿರುವ ವಾಯುನೆಲೆಗೆ ಬಂದು ಇಳಿದಿದ್ದರು. ಪ್ರಧಾನಿ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗುತ್ತಾರೆಂಬ ಭಯದಲ್ಲಿ ಶೇಖ್ ಹಸೀನಾ ಮತ್ತು ಜೊತೆಗಿದ್ದವರು ಗಡಿಬಿಡಿಯಲ್ಲೇ ದೇಶ ತೊರೆದಿದ್ದರು ಎಂದು ಮೂಲಗಳು ತಿಳಿಸಿವೆ.
ಗಾಜಿಯಾಬಾದ್ ವಾಯುನೆಲೆ ಬಳಿಯಲ್ಲೇ ಭಾರತೀಯ ಸೇನೆಯ ಭದ್ರತೆಯಲ್ಲಿ ಶೇಖ್ ಹಸೀನಾ ಉಳಿದುಕೊಂಡಿದ್ದಾರೆ. 48 ಗಂಟೆಯ ಬಳಿಕ ಹಸೀನಾ ಅವರಿಗಾಗಿ ಬಟ್ಟೆ, ಇನ್ನಿತರ ಡೈಲೀ ಬಳಕೆಯ ವಸ್ತುಗಳನ್ನು ಜೊತೆಗೆ ಬಂದಿದ್ದ ಪ್ರೋಟೋಕಾಲ್ ಸಿಬಂದಿ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಖರೀದಿಸಿದ್ದಾರೆ. ಹಸೀನಾ ಬೇರೆ ದೇಶಕ್ಕೆ ತೆರಳುವ ತನಕವೂ ಭಾರತದಲ್ಲಿ ಭದ್ರತೆ ನೀಡುವುದಕ್ಕೆ ಕೇಂದ್ರ ಸರಕಾರ ಒಪ್ಪಿದೆ. ಅಲ್ಲದೆ, ಆಗಿರುವ ಶಾಕ್ ನಿಂದ ಹೊರಬರಲು ಮತ್ತು ಒತ್ತಡ ನಿವಾರಿಸಿಕೊಳ್ಳಲು ಭಾರತೀಯ ಸೆಕ್ಯುರಿಟಿ ಸಿಬಂದಿಯೂ ಸಹಕಾರ ನೀಡಿದ್ದಾರೆ.
ಇತ್ತ ಇಂಗ್ಲೆಂಡ್ ಸರಕಾರ ಶೇಖ್ ಹಸೀನಾ ತಮ್ಮಲ್ಲಿಗೆ ಬರುವುದಕ್ಕೆ ಅನುಮತಿ ನೀಡಿಲ್ಲ. ಶೇಖ್ ಹಸೀನಾ ಅವರ ಪುತ್ರ ಸೇರಿದಂತೆ ಕುಟುಂಬಸ್ಥರು ಅಲ್ಲಿ ನೆಲೆಸಿದ್ದರೂ, ಬಾಂಗ್ಲಾದಿಂದ ತಪ್ಪಿಸಿಕೊಂಡು ಬಂದಿರುವ ಶೇಖ್ ಹಸೀನಾಗೆ ಆಶ್ರಯ ನೀಡಲು ನಿರಾಕರಣೆ ಮಾಡಿದೆ. ಹೀಗಾಗಿ ತ್ರಿಶಂಕು ಸ್ಥಿತಿಯಲ್ಲಿರುವ ಹಸೀನಾ ಯುರೋಪ್ ಖಂಡದ ಬೇರಾವುದೇ ದೇಶಕ್ಕೆ ತೆರಳುವುದಕ್ಕೆ ಮುಂದಾಗಿದ್ದಾರೆ. ಫಿನ್ಲೆಂಡ್ ನಲ್ಲಿಯೂ ಶೇಖ್ ಹಸೀನಾ ಕುಟುಂಬಸ್ಥರು ನೆಲೆಸಿದ್ದು, ಅಲ್ಲಿ ತೆರಳುವ ಸಾಧ್ಯತೆಯೂ ಇದೆ. ಇದೇ ವೇಳೆ, ಬಾಂಗ್ಲಾದಲ್ಲಿ ಹಂಗಾಮಿ ಸರಕಾರ ನಡೆಸಲು ಕಸರತ್ತು ನಡೆದಿದ್ದು ಹಂಗಾಮಿ ಮುಖ್ಯಸ್ಥರಾಗಿರುವ ಮೊಹಮ್ಮದ್ ಯೂನಿ
Former Bangladesh Prime Minister Sheikh Hasina and her team, who reached India on Monday fleeing a violent uprising against her Awami League government, could not even carry extra clothes or daily use items, government sources.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm