ಬ್ರೇಕಿಂಗ್ ನ್ಯೂಸ್
07-08-24 11:47 am HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್.7: ಕೊನೆಯ ಕ್ವಾರ್ಟರ್ ನಲ್ಲಿ ರಕ್ಷಣಾ ವೈಫಲ್ಯ ಅನುಭವಿಸಿದ ಭಾರತ ಪುರುಷರ ಹಾಕಿ ತಂಡವು ಸೆಮಿ ಫೈನಲ್ ನಲ್ಲಿ ಜರ್ಮನಿ ಎದುರು 2-3 ಗೋಲುಗಳಿಂದ ವೀರೋಚಿತ ಸೋಲನುಭವಿಸಿದೆ. ಗತ ವೈಭವವನ್ನು ಸೃಷ್ಟಿಸುವ ಹಾದಿಯಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದ್ದ ಹರ್ಮನ್ ಪ್ರೀತ್ ಸಿಂಗ್ ಬಳಗ ಮಹತ್ವದ ಪಂದ್ಯದಲ್ಲಿ ಸೋತು ನಿರಾಸೆ ಕಂಡಿತು.
ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ವಿಜೇತ ತಂಡ ಆಗಸ್ಟ್ 8ರಂದು ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಸವಾಲು ಎದುರಿಸಲಿದೆ. ಪಂದ್ಯ ಮುಕ್ತಾಯಕ್ಕೆ 3 ನಿಮಿಷಗಳು ಬಾಕಿ ಇರುವಾಗ ಗೋಲ್ ಕೀಪರ್ ಹೊರಗಿಟ್ಟು ರಕ್ಷಣಾ ವಿಭಾಗವನ್ನು ಹೆಚ್ಚಿಸಿಕೊಂಡ ಹೊರತಾಗಿಯೂ ಭಾರತ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. 54 ನಿಮಿಷದಲ್ಲಿ ಭಾರತೀಯರ ರಕ್ಷಣಾ ಪಡೆಯನ್ನು ಕಣ್ತಪ್ಪಿಸಿದ ಜರ್ಮನಿಯ ಮಾರ್ಕೋ ಗೋಲು ಗಳಿಸಿ ಗೆಲುವಿನ ರೂವಾರಿಯಾದರು.
ಪಂದ್ಯದ 7ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ನಾಯಕ ಮನ್ ಪ್ರೀತ್ ಸಿಂಗ್ ಭಾರತಕ್ಕೆ 1-0 ಅಂತರದ ಮುನ್ನಡೆ ಕಲ್ಪಿಸಿದರು. ದ್ವಿತೀಯಾರ್ಧದಲ್ಲಿ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಭಾರತ ವೈಫಲ್ಯ ಅನುಭವಿಸಿತು. ಇದನ್ನು ಲಾಭವಾಗಿಸಿಕೊಂಡ ಗೊಂಜಾಲೋ 18ನೇ ನಿಮಿಷದಲ್ಲಿ ಗೋಲು ಗಳಿಸಿ ಜರ್ಮನಿ ಹೋರಾಟವನ್ನು 1-1ರಲ್ಲಿ ಸಮಬಲಗೊಳಿಸಿದರು. ದ್ವಿತೀಯ ಕ್ವಾರ್ಟರ್ ಮುಕ್ತಾಯಕ್ಕೆ 3 ನಿಮಿಷ ಬಾಕಿ ಇರುವಾಗ ಕ್ರಿಸ್ಟೋಫರ್ ಗೋಲು ಗಳಿಸಿ ಜರ್ಮನಿ ತಂಡದ ಮುನ್ನಡೆಯನ್ನು 2-1ಕ್ಕೆ ವಿಸ್ತರಿಸಿದರು. ಬಳಿಕ ಸುಖಜೀತ್ ಸಿಂಗ್ 36ನೇ ನಿಮಿಷದಲ್ಲಿ ಗೋಲು ಬಾರಿಸಿ 2-2ಕ್ಕೆ ಸಮಬಲಗೈದರು.
ಭಾರತ ಪರ ನಾಯಕ ಹರ್ಮನ್ ಪ್ರೀತ್ ಸಿಂಗ್, ಸುಖಜಿತ್ ಸಿಂಗ್ ತಲಾ ಒಂದು ಗೋಲು ಗಳಿಸಿದರೆ, ಜರ್ಮನಿ ತಂಡದ ಪರ ಗೊಂಜಾಲೋ ಪೆಯಿಲ್ಲತ್, ಕ್ರಿಸ್ಟೋಫರ್, ಮಾರ್ಕೋ ಗೋಲು ಬಾರಿಸಿದರು. ಫೈನಲಿನಲ್ಲಿ ನೆದರ್ಲೆಂಡ್ ಮತ್ತು ಜರ್ಮನಿ ಚಿನ್ನದ ಪದಕಕ್ಕಾಗಿ ಪೈಪೋಟಿ ನಡೆಸಲಿದೆ. ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ 4-0 ಅಂತರದಿಂದ ಸ್ಪೇನ್ ವಿರುದ್ಧ ಏಕಪಕ್ಷೀಯ ಜಯ ದಾಖಲಿಸಿ ಫೈನಲ್ ಗೆಲ್ಲುವ ತವಕದಲ್ಲಿದೆ.
India some close in the final second!!! But it is not enough as it is Germany who go into the Gold Medal match after winning this semi-final by 3-2. India's wait for an Olympics final will have to wait, and they will face Spain in the Bronze medal match.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm