ಬ್ರೇಕಿಂಗ್ ನ್ಯೂಸ್
05-08-24 09:04 pm HK News Desk ದೇಶ - ವಿದೇಶ
ಢಾಕಾ, ಆಗಸ್ಟ್.5: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟ ಬೆನ್ನಲ್ಲೇ ಪ್ರಧಾನಿ ನಿವಾಸಕ್ಕೆ ಪ್ರತಿಭಟನಕಾರರು ನುಗ್ಗಿದ್ದು ವಿಕೃತಿ ಮೆರೆದಿದ್ದಾರೆ. ಶೇಖ್ ಹಸೀನಾ ನಿವಾಸದಲ್ಲಿದ್ದ ಬಿರಿಯಾನಿ ಸೇರಿ ಎಲ್ಲ ಆಹಾರವನ್ನು ಸೇವಿಸಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನು ಕದ್ದಿದ್ದಾರೆ. ಮನೆಯಲ್ಲಿ ಪ್ರತಿಭಟನಾಕಾರರ ಹುಚ್ಚಾಟದ ವಿಡಿಯೋಗಳು ವೈರಲ್ ಆಗಿವೆ.
ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ಆರಂಭಿಸಿದ ಪ್ರತಿಭಟನಾಕಾರರು, ಪ್ರಧಾನಿ ರಾಜೀನಾಮೆ ಬಳಿಕ ಅವರ ಭವ್ಯ ನಿವಾಸಕ್ಕೆ ಲಗ್ಗೆ ಇಟ್ಟಿದ್ದಾರೆ. ಶೇಖ್ ಹಸೀನಾ ಮನೆಯಲ್ಲಿರುವ ಸ್ವಿಮ್ಮಿಂಗ್ ಪೂಲ್ನಲ್ಲಿ ಸಾಮೂಹಿಕವಾಗಿ ಈಜಾಡಿದ್ದಾರೆ, ಬೆಡ್ರೂಮ್ನಲ್ಲಿ ಮಲಗಿ, ಐಷಾರಾಮಿ ವಸ್ತುಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಭಕ್ಷ್ಯ ಭೋಜನ ಸವಿದು, ಕುಣಿದು ಕುಪ್ಪಳಿಸಿ ಮಜಾ ಉಡಾಯಿಸಿದ್ದಾರೆ. ಆಮೂಲಕ ಪ್ರಧಾನಿ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಶೇಖ್ ಹಸೀನಾ ಫೋಟೊಗಳಿಗೆ ಮಸಿ ಬಳಿಯಲಾಗಿದೆ. ಶೇಖ್ ಹಸೀನಾ ಅವರ ತಂದೆಯ ಮೂರ್ತಿಗಳನ್ನು ಉದ್ರಿಕ್ತರು ಒಡೆದು ಹಾಕಿದ್ದಾರೆ. ಕೆಲ ಸರ್ಕಾರಿ ಕಚೇರಿಗಳನ್ನೂ ಧ್ವಂಸಗೊಳಿಸಿದ್ದಾರೆ. ದೇಶಾದ್ಯಂತ ಕರ್ಫ್ಯೂ ನಡುವಲ್ಲೇ ಸುಮಾರು 4 ಲಕ್ಷ ಜನ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ನಡುವೆ, ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಪಾಕಿಸ್ತಾನ ಕಾರಣ ಎಂದು ಹೇಳಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ಜಮಾತ್-ಎ-ಇಸ್ಲಾಮಿ ಎಂಬ ನಿಷೇಧಿತ ಸಂಘಟನೆಯ ವಿದ್ಯಾರ್ಥಿ ಘಟಕವಾಗಿರುವ ಛತ್ರಾ ಶಿಬಿರ್ ಎಂಬ ಸಂಘಟನೆಗೆ ಪಾಕಿಸ್ತಾನದ ಐಎಸ್ಐ ಬೆಂಬಲ ಇದೆ ಎನ್ನಲಾಗಿದೆ. ಬಾಂಗ್ಲಾದೇಶ ವಿಮೋಚನೆ ಹೋರಾಟದ ವೇಳೆ ಭಾಗಿಯಾದವರ ಕುಟುಂಬಸ್ಥರಿಗೆ ನೀಡುವ ಮೀಸಲಾತಿಯನ್ನು ಶೇ.5ಕ್ಕೆ ಇಳಿಸಿದರೂ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಯ ಹಿಂದಿರುವ ಪ್ರಮುಖ ವಿದ್ಯಾರ್ಥಿ ಸಂಘಟನೆಗಳಲ್ಲಿ ಛತ್ರಾ ಶಿಬಿರ್ ಎಂಬ ಸಂಘಟನೆಯ ಪಾತ್ರ ಪ್ರಮುಖವಾಗಿದೆ. ಇದಕ್ಕೆ ಪಾಕಿಸ್ತಾನವು ಹಣಕಾಸು ನೆರವು ನೀಡುತ್ತಿದೆ ಎಂದು ತಿಳಿದುಬಂದಿದೆ.
ಶೇಖ್ ಹಸೀನಾ ಅವರು ಕಳೆದ 15 ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅವರು ರಾಷ್ಟ್ರೀಯವಾದದಲ್ಲಿ ನಂಬಿಕೆ ಇರಿಸಿರುವುದರ ಜತೆಗೆ ಜನರ ಬೆಂಬಲ ಗಳಿಸಿದ್ದಾರೆ. ಬಡತನ ಪ್ರಮಾಣವನ್ನು ಶೇ.5ಕ್ಕೆ ಇಳಿಸಿದ್ದಾರೆ. ಇದರ ಜತೆಗೆ ಭಾರತದ ಜತೆ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಿದ್ದಾರೆ. ಮೇಲಾಗಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದನ್ನು ಸಹಿಸದ ಪಾಕಿಸ್ತಾನವು, ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಅಧಿಕಾರಕ್ಕೆ ಬರಬೇಕು ಎಂಬುದು ಪಾಕಿಸ್ತಾನ ಕುತಂತ್ರ ಮಾಡಿದೆಯೆಂದು ಹೇಳಲಾಗುತ್ತಿದೆ.
Hundreds of Bangladeshi protesters stormed into Prime Minister Sheikh Hasina's official residence as the leader's whereabouts were unknown, after demonstrators defied a military curfew to march in the capital Dhaka.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm