ಬ್ರೇಕಿಂಗ್ ನ್ಯೂಸ್
04-08-24 09:15 pm HK News Desk ದೇಶ - ವಿದೇಶ
ಲಕ್ನೋ, ಆಗಸ್ಟ್ 4: ಸಮವಸ್ತ್ರ ನಿಯಮ ಪ್ರಕಾರ ಗಡ್ಡ ಬಿಟ್ಟುಕೊಂಡು ಕಾಲೇಜಿಗೆ ಬರಬಾರದು ಎಂದು ಸೂಚನೆ ನೀಡಿದರೂ, ಕೇಳದಿದ್ದ ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ಪ್ರಿನ್ಸಿಪಾಲ್ ಕಾಲೇಜಿನಿಂದಲೇ ಹೊರಹಾಕಿದ ಪ್ರಸಂಗ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು ವಿವಾದಕ್ಕೆ ಕಾರಣವಾಗಿದೆ. ಪ್ರಿನ್ಸಿಪಾಲರು ತಾರತಮ್ಯ, ವರ್ಗ ದ್ವೇಷ ಮಾಡಿದ್ದಾರೆಂದು ಈ ಬಗ್ಗೆ ವಿದ್ಯಾರ್ಥಿಯ ಸೋದರ ಜಿಲ್ಲಾಧಿಕಾರಿ ಮತ್ತು ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ್ದಾರೆ.
ಬರೇಲಿಯ ಹೊಬಿಗಂಜ್ ನಲ್ಲಿರುವ ಆಜಾದ್ ನೌರಂಗ್ ಇಂಟರ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಫರ್ಮಾನ್ ಆಲಿ ಎನ್ನುವ ಮುಸ್ಲಿಂ ವಿದ್ಯಾರ್ಥಿಗೆ ಕಾಲೇಜಿನ ಶಿಕ್ಷಕರು ಗಡ್ಡ ಬಿಟ್ಟುಕೊಂಡು ಬರಬಾರದು ಎಂದು ಸೂಚಿಸಿದ್ದರು. ಗಡ್ಡ ತೆಗೆದುಕೊಂಡು ಬಾ, ಇಲ್ಲಾಂದ್ರೆ ಕಾಲೇಜಿನಿಂದ ಡಿಬಾರ್ ಮಾಡುತ್ತೇವೆ, ಫೈಲ್ ಮಾಡುತ್ತೇವೆ ಎಂದು ಎಚ್ಚರಿಸಿದ್ದರೂ ಆತ ಮಾತ್ರ ಕಾಲೇಜು ಸಿಬಂದಿಯ ಮಾತು ಕೇಳಿರಲಿಲ್ಲ. ಮೊನ್ನೆ ಜುಲೈ 31ರಂದು ಕಾಲೇಜಿನ ಪ್ರಾಂಶುಪಾಲರು ಫರ್ಮಾನ್ ಆಲಿಯನ್ನು ಕರೆದು ತರಗತಿಗೆ ಬರದಂತೆ ಗದರಿಸಿದ್ದು, ಇದು ಕಾಲೇಜು, ಮದ್ರಸಾ ಅಲ್ಲ. ಮೊದಲು ಗಡ್ಡ ಕತ್ತರಿಸಿಕೊಂಡು ಬಾ. ಈ ರೀತಿ ಕಾಲೇಜಿಗೆ ಬರುವುದಕ್ಕೆ ನಮ್ಮಲ್ಲಿ ಅವಕಾಶ ಇಲ್ಲ ಎಂದು ಹೇಳಿ ಕ್ಲಾಸಿನಿಂದ ಹೊರಕ್ಕೆ ಕಳಿಸಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿಯ ಸೋದರ ಜೀಶನ್ ಆಲಿ ಬರೇಲಿ ಜಿಲ್ಲಾಧಿಕಾರಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ್ದು, ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದೇ ವೇಳೆ ವಿದ್ಯಾರ್ಥಿ ಪ್ರಾಂಶುಪಾಲರ ಜೊತೆಗೆ ವಾಗ್ವಾದ ಮಾಡಿರುವ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಪ್ರಿನ್ಸಿಪಾಲ್, ವಿದ್ಯಾರ್ಥಿಯನ್ನು ಡ್ರೆಸ್ ಕೋಡ್ ಪಾಲನೆ ಮಾಡದಿದ್ದರೆ ತರಗತಿಗೆ ಬರಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಆದರೆ ಉತ್ತರ ಪ್ರದೇಶದ ಮಾಧ್ಯಮಗಳಲ್ಲಿ ಪ್ರಿನ್ಸಿಪಾಲ್, ಕೆಟ್ಟ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಸುದ್ದಿಯಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಪ್ರಿನ್ಸಿಪಾಲ್ ರಾಮ ಅಚಲ್ ಖಾರ್ವಾರ್ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ವಿದ್ಯಾರ್ಥಿ ನಮ್ಮ ಸಮವಸ್ತ್ರ ಪಾಲನೆ ಮಾಡುತ್ತಿರಲಿಲ್ಲ. ಸಮವಸ್ತ್ರ ಪದ್ಧತಿ ನಿಮಯ ನಾವು ಮಾಡಿದ್ದಲ್ಲ. ಸರಕಾರದಿಂದಲೇ ಮಾಡಿರುವಂಥದ್ದು ಎಂದು ಹೇಳಿದ್ದಾರೆ. ಆ ರೀತಿಯ ಆದೇಶ ಏನಾದ್ರೂ ಇದ್ದರೆ ತೋರಿಸಿ ಎಂದು ವಿದ್ಯಾರ್ಥಿ ಕುಟುಂಬಸ್ಥರು ವಾದಿಸಿದ್ದು, ಈ ವೇಳೆ ನೀವು ನಮಗೆ ಕಾನೂನು ಕಲಿಸಲು ಬರಬೇಡಿ, ನೀವು ಹೆಚ್ಚು ಸ್ಮಾರ್ಟ್ ಆಗಲು ನೋಡಿದರೆ, ಎಸ್ಸಿ ಆಕ್ಟ್ ಅಡಿ ಕೇಸು ಹಾಕಿ ಜೈಲಿಗೆ ಹಾಕಿಸುತ್ತೇನೆ ಎಂದು ಪ್ರಿನ್ಸಿಪಾಲ್ ತಮಗೆ ಬೆದರಿಸಿದ್ದಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
A Muslim student has been expelled from an inter-college in the Uttar Pradesh city of Bareilly for keeping a beard. The case, involving Farman Ali, a student at the Azad Naurang Inter College in Hobiganj, has drawn widespread attention after a video of the incident went viral on social media.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm