ಬ್ರೇಕಿಂಗ್ ನ್ಯೂಸ್
02-08-24 06:36 pm HK News Desk ದೇಶ - ವಿದೇಶ
ವಯನಾಡ್, ಆಗಸ್ಟ್ 2: ವಯನಾಡ್ ಜಿಲ್ಲೆಯ ಮುಂಡಕೈ ಮತ್ತು ಚೂರನ್ಮಾಲ ಗ್ರಾಮಗಳ ನಡುವೆ ಇದ್ದ ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದರಿಂದ ಮಿಲಿಟರಿ ಪಡೆಗಳೇ ತುರ್ತಾಗಿ ಕಬ್ಬಿಣದ ಸೇತುವೆಯೊಂದನ್ನು ರಚಿಸಿದ್ದಾರೆ. ಇರುವಂಜಿಪುಝ ಎನ್ನುವ ಹೊಳೆಯಿಂದಾಗಿ ಆಸುಪಾಸಿನಲ್ಲಿದ್ದ ಮನೆಗಳು, ಸೇತುವೆಗಳೆಲ್ಲ ಕೊಚ್ಚಿ ಹೋಗಿದ್ದರಿಂದ ಅಲ್ಲಿ ಸಿಕ್ಕಿಬಿದ್ದ ಜನರನ್ನು ಅತ್ತಿತ್ತ ಸಾಗಿಸುವುದೂ ಸವಾಲಾಗಿತ್ತು. ಮರಗಳನ್ನು ಅಡ್ಡಲಾಗಿಟ್ಟು ಮಾಡಿದ್ದ ತಾತ್ಕಾಲಿಕ ಸೇತುವೆಯೂ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರಿಂದ ಸೇನಾ ಯೋಧರು ಕಬ್ಬಿಣದ ಸೇತುವೆಯನ್ನು ರಚಿಸಿದ್ದಾರೆ.
ಭಾರತೀಯ ಸೇನೆಗೆ ಒಳಪಟ್ಟ ಮದ್ರಾಸ್ ಸ್ಯಾಪರ್ಸ್ ಎಂದು ಕರೆಯಲಾಗುವ ಇಂಜಿನಿಯರಿಂಗ್ ತಂಡವೊಂದು ಕಬ್ಬಿಣದ ಸೇತುವೆಯನ್ನು ಕೇವಲ 32 ಗಂಟೆಗಳಲ್ಲಿ ನಿರ್ಮಾಣ ಮಾಡಿದ್ದು, ಅಲ್ಲಿದ್ದ ಜನರನ್ನೇ ಹುಬ್ಬೇರಿಸುವಂತೆ ಮಾಡಿದೆ. ಮಹಾರಾಷ್ಟ್ರ ಮೂಲದ ಮೇಜರ್ ಸೀತಾ ಅಶೋಕ್ ಶೆಲ್ಕೆ ನೇತೃತ್ವದ ಈ ತಂಡವು ಬುಧವಾರ ಬೆಳಗ್ಗೆ 9.30ಕ್ಕೆ ಸೇತುವೆ ರಚನೆಯ ಕೆಲಸ ಆರಂಭಿಸಿದ್ದು, ಗುರುವಾರ ಸಂಜೆ 5.30ಕ್ಕೆ ಕೆಲಸ ಮುಗಿಸಿದೆ. ರಾತ್ರಿ ಹಗಲೆನ್ನದೆ ನಿರಂತರ ಸೇತುವೆಯನ್ನು ಜೋಡಿಸಿದ್ದು, ಕೇವಲ ಕಬ್ಬಿಣದ ಸಲಾಕೆಗಳನ್ನೇ ಬಳಸಿ ಗಟ್ಟಿಮುಟ್ಟಾದ ಸೇತುವೆಯನ್ನು ಕಟ್ಟಿ ತೋರಿಸಿದೆ. ಇದನ್ನು ಭಾರತೀಯ ಸೇನೆ ಬೈಲಿ ಬ್ರಿಡ್ಜ್ ಎಂದು ಕರೆಯುತ್ತಿದ್ದು, ತುರ್ತು ಅಗತ್ಯದ ಸಂದರ್ಭದಲ್ಲಿ ಸಲಕರಣೆಗಳನ್ನು ಕೊಂಡೊಯ್ದು ದುರಂತ ಸ್ಥಳದಲ್ಲೇ ಸೇತುವೆಯನ್ನು ಜೋಡಣೆ ಮಾಡುತ್ತದೆ.
ಗುರುವಾರ ಸಂಜೆ ಸೇತುವೆ ರೆಡಿಯಾಗುತ್ತಿದ್ದಂತೆ ಭೂಸೇನೆಯ ಕೇರಳ- ಕರ್ನಾಟಕ ಉಪ ವಿಭಾಗದ ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ ತಮ್ಮ ವಾಹನವನ್ನು ಅದರ ಮೇಲಿಂದ ಚಲಾಯಿಸುವ ಮೂಲಕ ಸೇತುವೆ ಉದ್ಘಾಟನೆ ಮಾಡಿದರು. ಈ ಸೇತುವೆಯು 24 ಟನ್ ಭಾರದ ಯಾವುದೇ ಸರಕುಗಳನ್ನು ಒಯ್ಯಬಲ್ಲಷ್ಟು ಸಾಮರ್ಥ್ಯ ಹೊಂದಿದೆ. ಆನಂತರ, ಜಿಲ್ಲಾಡಳಿತಕ್ಕೆ ಬಿಟ್ಟು ಕೊಡುವ ಮೊದಲು ಆರ್ಮಿ ಮೆಡಿಕಲ್ ಯೂನಿಟ್, ಮಿಲಿಟರಿ ಟ್ರಕ್ ಸೇತುವೆಯ ಮೇಲಿನಿಂದ ಸಾಗಿದವು. ದೆಹಲಿ, ಬೆಂಗಳೂರಿನಿಂದ ಸೇತುವೆಯ ಸಾಮಗ್ರಿಗಳನ್ನು ವಿಮಾನದ ಮೂಲಕ ಕಣ್ಣೂರು ಏರ್ಪೋರ್ಟ್ ತರಿಸಲಾಗಿದ್ದು, ಅಲ್ಲಿಂದ 17 ಟ್ರಕ್ ಗಳಲ್ಲಿ ವಯನಾಡಿಗೆ ತರಲಾಗಿತ್ತು.
ಬೈಲಿ ಬ್ರಿಡ್ಜ್ ಎಂದರೇನು ?
ಎರಡನೇ ಮಹಾಯುದ್ಧ ಸಂದರ್ಭದಲ್ಲಿ ತುರ್ತು ಸೇತುವೆ ರಚನೆಯ ಕಾರಣಕ್ಕೆ ಈ ರೀತಿಯ ಕಬ್ಬಿಣದ ಸೇತುವೆಗಳನ್ನು ರಚಿಸಲಾಗಿತ್ತು. ಬ್ರಿಟಿಷ್ ಮೂಲದ ಇಂಜಿನಿಯರ್ ಸರ್ ಡೊನಾಲ್ಡ್ ಕೋಲ್ಮನ್ ಬೈಲಿ ಎಂಬವರು ಈ ಸೇತುವೆಯನ್ನು ಮೊದಲ ಬಾರಿಗೆ ರಚಿಸಿದ್ದು, ಅವರದೇ ಹೆಸರಲ್ಲಿ ಗುರುತಿಸಲಾಗುತ್ತಿದೆ. 1940ರ ವೇಳೆಗೆ ಈ ರೀತಿಯ ಕಬ್ಬಿಣದ ಸೇತುವೆಯ ಜೋಡಣೆಗಳನ್ನು ಹೊಸತಾಗಿ ಮಾಡಲಾಗಿತ್ತು. ಆನಂತರ, ಸೇತುವೆ ರಚನೆಯ ಉದ್ದೇಶಕ್ಕಾಗಿ ಇಂಜಿನಿಯರಿಂಗ್ ವಿಂಗ್ ಒಂದನ್ನು ಸೇನಾಪಡೆಗೆ ಜೋಡಿಸಲಾಗಿತ್ತು. ತುರ್ತಾಗಿ ಜೋಡಣೆ ಮತ್ತು ಬಲಿಷ್ಠ ಸಾಮರ್ಥ್ಯದ ಕಾರಣಕ್ಕೆ ಬೈಲಿ ಬ್ರಿಡ್ಜ್ ಎನ್ನುವ ಹೆಗ್ಗುರುತು ದಾಖಲಾಗಿತ್ತು.
ಭೂಕುಸಿತ, ಭೂಕಂಪದಂತಹ ತುರ್ತು ಸಂದರ್ಭಗಳಲ್ಲಿ ಈ ರೀತಿಯ ಸೇತುವೆಗಳನ್ನು ಸೇನಾಪಡೆ ಸ್ಥಳದಲ್ಲೇ ರಚಿಸುತ್ತದೆ. 2017ರಲ್ಲಿ ಮುಂಬೈ ಕಾಲ್ತುಳಿತ ದುರಂತ, ಸಿಕ್ಕಿಂನಲ್ಲಿ ಭೂಕುಸಿತ ಘಟನೆಗಳ ಸಂದರ್ಭ ಬೈಲಿ ಬ್ರಿಡ್ಜ್ ಬಳಸಿದ್ದು ಇತ್ತೀಚಿನ ಉದಾಹರಣೆ. ತುರ್ತು ನಿರ್ಮಾಣ, ವಾಹನಗಳಲ್ಲಿ ಸಾಗಣೆ ಮಾಡಬಲ್ಲ ಸಾಮರ್ಥ್ಯ, ಹೆಚ್ಚಿನ ಭಾರಗಳನ್ನು ತಾಳಿಕೊಳ್ಳುವ ಶಕ್ತಿ ಇರುವುದರಿಂದ ಅಗತ್ಯ ಸನ್ನಿವೇಶಗಳಲ್ಲಿ ಉಪಯುಕ್ತವಾಗಿದೆ.
ಇದು ಮದ್ರಾಸ್ ತಂಬಿಗಳ ಗ್ರೂಪ್
ಸೇತುವೆ ರಚನೆಯ ಇಂಜಿನಿಯರುಗಳಿರುವ ಈ ತಂಡಕ್ಕೆ ಮದ್ರಾಸ್ ಸ್ಯಾಪರ್ಸ್ ಎನ್ನುತ್ತಾರೆ. ಹೆಚ್ಚಿನವರು ತಮಿಳುನಾಡಿನ ತಂಬಿಗಳೇ ಇರೋದು. ಭಾರತೀಯ ಸೇನೆಯಲ್ಲೇ ಇರುವ ಪ್ರತ್ಯೇಕ ಇಂಜಿನಿಯರ್ ಗ್ರೂಪ್ ಇದಾಗಿದ್ದು, ಬ್ರಿಟಿಷರ ಕಾಲದಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಇರುವಾಗಲೇ ಈ ತಂಡವನ್ನು ರಚಿಸಲಾಗಿತ್ತು. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಬ್ರಿಟಿಷ್ ಆರ್ಮಿಯ ಬೆನ್ನೆಲುಬಾಗಿ ಈ ತಂಬಿಗಳ ಗ್ರೂಪ್ ಇತ್ತು. ಬ್ರಿಟಿಷ್ ಸೇನೆಯಲ್ಲಿ ಸಮಸ್ಯೆ ಆದಾಗ ತಂಬಿಗಳ ತಂಡವೇ ಆರ್ಮಿ ಹಿಂದೆ ನಿಂತು ಕೆಲಸ ಮಾಡುತ್ತಿತ್ತು. ಮದ್ರಾಸ್ ಸ್ಯಾಪರ್ಸ್ ಎನ್ನುವ ಹೆಸರಲ್ಲೇ ಆಬಳಿಕ ಭಾರತೀಯ ಸೇನೆಯಲ್ಲಿ ಇಂಜಿನಿಯರ್ ತಂಡವನ್ನು ಉಳಿಸಿಕೊಳ್ಳಲಾಗಿತ್ತು. ಮದ್ರಾಸ್ ಸ್ಯಾಪರ್ಸ್ ತಂಡದ ಹೆಡ್ ಕ್ವಾರ್ಟರ್ಸ್ ಈಗ ಬೆಂಗಳೂರಿನಲ್ಲಿದೆ.
Led by Major Seeta Ashok Shelke, the Madras Engineering Group of the Indian Army in Bengaluru, also called Madras Sappers, on Thursday completed the construction of the 190-ft-long Bailey bridge in Wayanad district which was hit by devastating landslides on Tuesday.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm