ಬ್ರೇಕಿಂಗ್ ನ್ಯೂಸ್
01-08-24 07:16 pm HK News Desk ದೇಶ - ವಿದೇಶ
ವಯನಾಡು, ಆ 01: ಕಾಂಗ್ರೆಸ್ ನಾಯಕ, ವಯನಾಡು ಮಾಜಿ ಸಂಸದ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಮಧ್ಯಾಹ್ನ ಪ್ರವಾಹ ಪೀಡಿತ ಚೊರಾಲ್ ಮಾಲಾ ಪ್ರದೇಶಕ್ಕೆ ಭೇಟಿ ನೀಡಿದರು. ಬೆಳಗ್ಗೆ 9-30ಕ್ಕೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಳಿಕ ರಸ್ತೆ ಮಾರ್ಗವಾಗಿ ವೈಯನಾಡು ತಲುಪಿದ್ದಾರೆ.
ಧಾರಾಕಾರ ಮಳೆಯ ನಡುವೆ ಪ್ರವಾಹ ಪೀಡಿತ ಪ್ರದೇಶಕ್ಕೆ ಆಗಮಿಸಿದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ, ಮೆಪ್ಪಡಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ಅಲ್ಲಿಂದ ಮೆಪ್ಪಡಿಯಲ್ಲಿನ ಡಾ. ಮೂಫೆನ್ಸ್ ವೈದ್ಯಕೀಯ ಕಾಲೇಜು ಹಾಗೂ ಎರಡು ಪರಿಹಾರ ಶಿಬಿರಗಳಿಗೆ ತೆರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಕೂಡಾ ಇದ್ದಾರೆ. ರಾಹುಲ್ ಗಾಂಧಿ 2019ರ ಲೋಕಸಭಾ ಚುನಾವಣೆಯಲ್ಲಿ ವಯನಾಡಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಉತ್ತರ ಪ್ರದೇಶದ ರಾಯಬರೇಲಿ ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಿದ್ದರಿಂದ ಅದನ್ನು ಉಳಿಸಿಕೊಂಡು ವಯನಾಡನ್ನು ಬಿಟ್ಟುಕೊಟ್ಟಿದ್ದಾರೆ. ಉಪ ಚುನಾವಣೆಯಲ್ಲಿ ಅಲ್ಲಿಂದ ಪ್ರಿಯಾಂಕಾಗಾಂಧಿ ಸ್ಪರ್ಧಿಸುವ ಸಾಧ್ಯತೆಯಿದೆ.
ಬಳಿಕ ಮಾತನಾಡಿದ ಅವರು, ನನ್ನ ತಂದೆ ಮೃತಪಟ್ಟಾಗ ನನಗೆ ಎದುರಾದ ಭಾವನೆಗಳೇ ಇದೀಗ ಮತ್ತೆ ಎದುರಾಗಿದೆ ಎಂದು ಭಾವುಕರಾಗಿ ನುಡಿದರು. ಇಲ್ಲಿನ ಜನರು ಕೇವಲ ಒಬ್ಬ ತಂದೆಯನ್ನು ಮಾತ್ರವಲ್ಲ, ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ. ತಾವು ಗೌರವಿಸುವ ಹಾಗೂ ಪ್ರೀತಿ ಪಾತ್ರರಾಗಿದ್ದ ಜನರನ್ನೇ ಇಲ್ಲಿನವರು ಕಳೆದುಕೊಂಡಿದ್ಧಾರೆ. ಇದೀಗ ಇಡೀ ದೇಶದ ಗಮನ ವಯನಾಡಿನತ್ತ ಇದೆ ಎಂದು ರಾಹುಲ್ ಗಾಂಧಿ ಹೇಳಿದರು.
ವಯನಾಡಿನಲ್ಲಿ ನಡೆದ ದುರಂತ ಕೇರಳ ಮಾತ್ರವಲ್ಲ, ಇಡೀ ದೇಶದಲ್ಲೇ ಅತಿ ದೊಡ್ಡ ದುರಂತವಾಗಿದೆ. ಇಲ್ಲಿನ ಪರಿಸ್ಥಿತಿ ನೋಡಲು ನಾವು ಬಂದೆವು. ಇಲ್ಲಿನ ಜನರ ಸಂಕಷ್ಟಕರ ಸನ್ನಿವೇಶ ನೋಡಿ ನೋವಾಗುತ್ತಿದೆ. ತಮ್ಮ ಮನೆ ಹಾಗೂ ಕುಟುಂಬ ಸದಸ್ಯರನ್ನೇ ಕಳೆದುಕೊಮಡ ಇಲ್ಲಿನ ಜನ ಸಂಕಷ್ಟದಲ್ಲಿದ್ದಾರೆ ಎಂದ ರಾಹುಲ್ ಗಾಂಧಿ, ಇಲ್ಲಿನ ಜನರಿಗೆ ಸೂಕ್ತ ಪರಿಹಾರ ಸಿಗುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಆದಷ್ಟು ಬೇಗ ಇಲ್ಲಿನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕಿದೆ. ಈ ಭಾಗದಲ್ಲಿ ಸಾಕಷ್ಟು ಪರಿಹಾರ ಕಾರ್ಯ ಆಗಬೇಕಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಧಾರಾಕಾರ ಮಳೆ ಹಾಗೂ ಬೃಹತ್ ಭೂಕುಸಿತದಿಂದಾಗಿ ಮುಂಡಕ್ಕಿ, ಚೊರಾಲ್ ಮಾಲಾ, ಅಟ್ಟಮಲಾ, ನೂಲ್ಫುಂಜಾದಲ್ಲಿ ಮಂಗಳವಾರದಿಂದ ಈವರೆಗೂ ಸುಮಾರು 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 250ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದು, 1,000ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ
100ಕ್ಕೂ ಹೆಚ್ಚು ಮೃತದೇಹಗಳು ಪತ್ತೆ:ಮತ್ತೊಂದೆಡೆ,ಭೂಕುಸಿತದಲ್ಲಿ ಒಟ್ಟಾರೆ ಮೃತರ ಪೈಕಿ 100ಕ್ಕೂ ಹೆಚ್ಚು ಮೃತದೇಹಗಳನ್ನು ಪತ್ತೆ ಹೆಚ್ಚಲಾಗಿದೆ. 500ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಕರ್ನಾಟಕ ಮತ್ತು ಕೇರಳ ಉಪ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ವಿ.ಟಿ.ಮ್ಯಾಥ್ಯೂ ತಿಳಿಸಿದ್ದಾರೆ.ಜುಲೈ 30ರ ಬೆಳಗ್ಗೆಯಿಂದಲೂ ಪರಿಹಾರ ಕಾರ್ಯದಲ್ಲಿ ತೊಡಗಲಾಗಿದೆ. ಇದುವರೆಗೆ ನಾವು 100ಕ್ಕೂ ಅಧಿಕ ಶವಗಳನ್ನು ಪತ್ತೆ ಮಾಡಿದ್ದೇವೆ. ಒಟ್ಟಾರೆ ಸಾವಿನ ಇನ್ನೂ ಅಧಿಕವಾಗಿದೆ. ಇದೇ ವೇಳೆ, ನೂರಾರು ಜನರನ್ನು ರಕ್ಷಣೆ ಮಾಡಿದೆ. ಮುಂಡಕ್ಕೈ, ಚೂರಲ್ಮಲಾ ಬಳಿ ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಇಂದು ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ಧಾರೆ.ಇದೇ ವೇಳೆ, ಕೇಂದ್ರ ಸಚಿವ ಜಾರ್ಜ್ ಕುರಿಯನ್ ಕೂಡ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ತಮ್ಮನ್ನು ಪ್ರಧಾನಿ ಮೋದಿ ಅವರು ಕಳುಹಿಸಿದ್ದಾರೆ. ಸೇನೆ ಮತ್ತು ಎನ್ಡಿಆರ್ಎಫ್ನ ಹಲವಾರು ತಂಡಗಳು ಮತ್ತು ಡಿಎಸ್ಇಯ ಎರಡು ತಂಡಗಳು ಈಗಾಗಲೇ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ನೌಕಾಪಡೆಯ ಒಂದು ಹೆಲಿಕಾಪ್ಟರ್ ಸೇರಿದಂತೆ ಸೇನೆ ಮತ್ತು ವಾಯುಪಡೆಗಳ ತಮ್ಮ ಆರು ಹೆಲಿಕಾಪ್ಟರ್ಗಳನ್ನು ಪರಿಹಾರ, ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ.
Leader of the Opposition Rahul Gandhi, MP, will visit Wayanad on Thursday. Mr. Gandhi will reach Kannur airport at 9.45 a.m. He will visit the relief camps opened for the Chooralmala landslide victims at Meppadi and the injured persons admitted in various hospitals. Though Mr. Gandhi was meant to visit Wayanad on Wednesday, it was postponed following rescue personnel’s request.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm