ಬ್ರೇಕಿಂಗ್ ನ್ಯೂಸ್
23-07-24 08:45 pm HK News Desk ದೇಶ - ವಿದೇಶ
ಅಹ್ಮದಾಬಾದ್, ಜುಲೈ.23: ಐಎಎಸ್ ಅಧಿಕಾರಿ ಪತಿಯನ್ನೇ ತೊರೆದು ತಮಿಳುನಾಡಿನ ರೌಡಿಯೊಬ್ಬನ ಜೊತೆಗೆ ಓಡಿ ಹೋಗಿದ್ದ ಪತ್ನಿ ಪೊಲೀಸ್ ಕೇಸು ಬೀಳುತ್ತಲೇ ಗಂಡನ ನೆನಪಾಗಿ ಓಡಿ ಬಂದಿದ್ದಳು. ಆದರೆ, ಆಕೆಗೆ ಗಂಡ ತನ್ನ ಮನೆಯ ಮೆಟ್ಟಿಲು ತುಳಿಯಲು ಬಿಡಲಿಲ್ಲ. ಇದರಿಂದ ನೊಂದ ಆಕೆ ವಿಷ ಕುಡಿದು ಸಾವಿಗೆ ಶರಣಾದ ಘಟನೆ ಗುಜರಾತಿನ ಅಹ್ಮದಾಬಾದಿನಲ್ಲಿ ನಡೆದಿದೆ.
ಗುಜರಾತ್ ಇಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ ವಿಭಾಗದಲ್ಲಿ ರಾಜ್ಯ ಸೆಕ್ರಟರಿಯಾಗಿರುವ ಐಎಎಸ್ ಅಧಿಕಾರಿ ರಜನೀತ್ ಕುಮಾರ್ ಅವರ ಪತ್ನಿ ಸೂರ್ಯಾ ಜೆ ದಾರುಣ ಅಂತ್ಯ ಕಂಡ ಕಥೆ. ಈಕೆ ತಮಿಳುನಾಡು ಮೂಲದವರಾಗಿದ್ದು, ಪತಿ ರಜನೀತ್ ಗುಜರಾತಿನಲ್ಲಿ ಹಿರಿಯ ಐಎಎಸ್ ಅಧಿಕಾರಿಯಾಗಿ ಸೇವೆಯಲ್ಲಿದ್ದರು. ಗಂಡನ ಜೊತೆಗೆ ಜಗಳವಾಡಿ ಒಂಬತ್ತು ತಿಂಗಳ ಹಿಂದೆ ತನ್ನೂರಿಗೆ ಓಡಿಹೋಗಿದ್ದ ಆಕೆ ಪತಿಯನ್ನು ಬಿಟ್ಟು ತನ್ನ ಊರಿನಲ್ಲೇ ರೌಡಿಯಾಗಿ ಗುರುತಿಸಿಕೊಂಡಿದ್ದ ರಾಜಾ ಎಂಬಾತನ ಸ್ನೇಹಕ್ಕೆ ಬಿದ್ದಿದ್ದಳು.
ವಿಷಯ ತಿಳಿದ ರಜನೀತ್ ಕುಮಾರ್ ಇತ್ತ ಪತ್ನಿಗೆ ವಿಚ್ಛೇದನಕ್ಕಾಗಿ ಕೋರ್ಟಿಗೆ ಅರ್ಜಿ ಹಾಕಿದ್ದರು. ಮೊನ್ನೆ ಶನಿವಾರ ಕೋರ್ಟಿನಲ್ಲಿ ಮೊದಲ ಹಿಯರಿಂಗ್ ಇತ್ತು. ಹೀಗಿರುವಾಗಲೇ ಪತ್ನಿ ಸೂರ್ಯಾ ಅಹ್ಮದಾಬಾದ್ ನಗರದ ಪತಿಯ ಮನೆಗೆ ಆಗಮಿಸಿದ್ದಾಳೆ. ಈ ವೇಳೆ, ಮನೆಯಲ್ಲಿ ಅಂಗರಕ್ಷಕರು ಮಾತ್ರ ಇದ್ದರು. ರಜನೀತ್ ಅವರ ಸೂಚನೆಯಂತೆ, ಅಂಗರಕ್ಷಕರು ಆಕೆಯನ್ನು ಮನೆಯ ಒಳಗೆ ಬರಲು ಬಿಟ್ಟಿರಲಿಲ್ಲ. ಇದರಿಂದ ಬೇಸತ್ತ 45 ವರ್ಷದ ಸೂರ್ಯಾ ತನ್ನ ಜೊತೆಗೆ ಮೊದಲೇ ಕಟ್ಟಿಕೊಂಡು ಬಂದಿದ್ದ ವಿಷವನ್ನು ಕುಡಿದಿದ್ದಾಳೆ. ಅಲ್ಲದೆ, ತಾನೇ 108 ನಂಬರಿಗೆ ಕರೆ ಮಾಡಿ ಆಂಬ್ಯುಲೆನ್ಸ್ ಕರೆಸಿಕೊಂಡಿದ್ದಳು. ಅಷ್ಟರಲ್ಲಿ ಆಕೆಯ ಸ್ಥಿತಿ ಬಿಗಡಾಯಿಸಿದ್ದು, ಅಲ್ಲಿದ್ದ ಕೆಲಸಗಾರರು ಬಳಿಕ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಮರುದಿನ ಅಂದರೆ ಭಾನುವಾರ ಸೂರ್ಯಾ ಚಿಕಿತ್ಸೆಗೆ ಸ್ಪಂದಿಸದೆ ದುರಂತ ಸಾವಿಗೀಡಾಗಿದ್ದಾಳೆ.
ಆಕೆಯ ಬ್ಯಾಗ್ ನಲ್ಲಿ ತಮಿಳಿನಲ್ಲಿ ಬರೆಯಲಾದ ಆತ್ಮಹತ್ಯೆ ಪತ್ರ ಸಿಕ್ಕಿದ್ದು ಆಕೆ ಮೊದಲೇ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿದ್ದುದು ಸ್ಪಷ್ಟವಾಗಿದೆ. ಇತ್ತ ಸೂರ್ಯಾ ವಿರುದ್ಧ ತಮಿಳುನಾಡಿನಲ್ಲಿ ಪೊಲೀಸರು ಕೇಸು ದಾಖಲಿಸಿ ಹುಡುಕಾಟ ನಡೆಸುತ್ತಿದ್ದುದೂ ಪತ್ತೆಯಾಗಿದೆ. ಮಧುರೈನಲ್ಲಿ ಇತ್ತೀಚೆಗೆ ನಡೆದಿದ್ದ 14 ವರ್ಷದ ಬಾಲಕನ ಅಪಹರಣದ ಪ್ರಕರಣದಲ್ಲಿ ರೌಡಿ ರಾಜಾ ಮತ್ತು ಸೂರ್ಯಾ ಪ್ರಮುಖ ಆರೋಪಿಗಳಾಗಿದ್ದರು. ರೌಡಿಯ ಸಹಚರ ಸೆಂಥಿಲ್ ಕುಮಾರ್ ನನ್ನು ಬಂಧಿಸಿದ್ದ ಪೊಲೀಸರು ರಾಜಾ ಮತ್ತು ಸೂರ್ಯಾಗೆ ಹುಡುಕಾಟ ನಡೆಸಿದ್ದರು. ಅಷ್ಟರಲ್ಲೇ ಸೂರ್ಯಾ, ತನ್ನ ಗೆಳೆಯನನ್ನು ಬಿಟ್ಟು ಅಧಿಕಾರಿ ಪತಿಯ ಮನೆಗೆ ಆಗಮಿಸಿದ್ದಳು. ಆದರೆ, ಈ ಬಗ್ಗೆ ಅರಿತಿದ್ದ ಪತಿಯೂ ಆಕೆಯನ್ನು ಒಳಗೆ ಬಿಟ್ಟುಕೊಂಡಿರಲಿಲ್ಲ.
ಮಧುರೈನಲ್ಲಿ ಹೈಕೋರ್ಟ್ ಮಹಾರಾಜಾ ಎಂದೇ ರೌಡಿಯನ್ನು ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಗ್ಯಾಂಗ್ ಕಟ್ಟಿಕೊಂಡು ಓಡಾಡುತ್ತಿದ್ದ ರಾಜಾನಾ ಜೊತೆಗೆ ಸೂರ್ಯಾ ಸೇರಿಕೊಂಡಿದ್ದಳು. ಈ ನಡುವೆ, ಮಹಿಳೆಯೊಬ್ಬರ ಜೊತೆಗೆ ಹಣಕಾಸು ವಹಿವಾಟು ನಡೆಸಿದ್ದಲ್ಲದೆ, ಆಕೆಯ 14 ವರ್ಷದ ಮಗನನ್ನು ಅಪಹರಿಸಿ ಎರಡು ಕೋಟಿ ಡಿಮ್ಯಾಂಡ್ ಇಟ್ಟಿದ್ದ. ಈ ವಿಚಾರದ ಬಗ್ಗೆ ಪೊಲೀಸರು ಕೇಸು ದಾಖಲಿಸಿ ಹುಡುಗನ ರಕ್ಷಣೆ ಮಾಡಿದ್ದರು. ಅಷ್ಟರಲ್ಲಿ ರಾಜಾ ಮತ್ತು ಸೂರ್ಯಾ ತಲೆಮರೆಸಿಕೊಂಡಿದ್ದರು. ಇದರಿಂದ ಬಚಾವಾಗುವುದಕ್ಕೋ ಏನೋ ಆಕೆ ತನ್ನ ಪತಿಯ ಮನೆಯತ್ತ ಹೊರಟಿದ್ದಳು. ಅಲ್ಲದೆ, ತನ್ನ ಪತಿಯನ್ನು ಹೀರೋ, ಒಳ್ಳೆ ಮನುಷ್ಯ ಎಂದು ಪತ್ರ ಬರೆದಿಟ್ಟಿದ್ದು, ತನ್ನ ಸಾವಿನ ಬಗ್ಗೆಯೂ ಬರೆದುಕೊಂಡಿದ್ದಳು. ಒಟ್ಟಿನಲ್ಲಿ ಇದ್ದುದೆಲ್ಲವ ಬಿಟ್ಟು ಇಲ್ಲದುದರೆಡೆ ತುಡಿಯುವುದೇ ಜೀವನ ಎನ್ನುವ ರೀತಿ ಸೂರ್ಯಾ ತನ್ನ ಪತಿ, ಸಂಸಾರವನ್ನೇ ಬಿಟ್ಟು ರೌಡಿಯ ಜೊತೆಗೆ ಹೋಗಿ ತನ್ನ ಜೀವನವನ್ನೇ ದುರಂತ ಅಂತ್ಯ ಮಾಡಿಕೊಂಡಿದ್ದಾಳೆ.
A Gujarat cadre IAS officer’s estranged wife, who allegedly eloped with a gangster nine months ago,died by suicide in Gujarat's
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm