ಬ್ರೇಕಿಂಗ್ ನ್ಯೂಸ್
11-07-24 06:07 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 11: ರಾಮೇಶ್ವರದಿಂದ ಶ್ರೀಲಂಕಾ ನಡುವೆ ಇರುವ ರಾಮಾಯಣ ಕಾಲದ ರಾಮ ಸೇತುವನ್ನು ಇಸ್ರೋ ವಿಜ್ಞಾನಿಗಳು ಸ್ಯಾಟಲೈಟ್ ಮ್ಯಾಪ್ ಮೂಲಕ ಪತ್ತೆ ಮಾಡಿದ್ದಾರೆ. ಹಿಂದುಗಳ ಪುರಾಣ ಗ್ರಂಥ ರಾಮಾಯಣದಲ್ಲಿ ಶ್ರೀರಾಮ ಲಂಕೆಗೆ ರಾಮ ಸೇತುವಿನ ಮೂಲಕ ತೆರಳಿದ್ದ ಎನ್ನುವ ಉಲ್ಲೇಖ ಇದೆ. ಬ್ರಿಟಿಷರು ಇದೇ ಸೇತುವನ್ನು ಅನಾದಿ ಕಾಲದಲ್ಲಿ ಮಾನವರು ನಿರ್ಮಿಸಿದ್ದ ರಚನೆಯೆಂದೂ ಅದಕ್ಕೆ ಆಡಮ್ಸ್ ಬ್ರಿಡ್ಜ್ ಎಂದೂ ಹೆಸರಿಸಿದ್ದರು.
ಲಂಕೆ ಮತ್ತು ಭಾರತ ಮಧ್ಯೆ ಸಮುದ್ರದ ಆಳದಲ್ಲಿರುವ ಸೇತುವೆ ರಚನೆಯ ಬಗ್ಗೆ ಇಸ್ರೋ ವಿಜ್ಞಾನಿಗಳು ಅಮೆರಿಕದ ಐಸಿಇ ಸ್ಯಾಟ್-2 ಉಪಗ್ರಹ ಆಧರಿಸಿ 2018ರಿಂದ 2023ರ ವರೆಗೆ ಅಧ್ಯಯನ ಕೈಗೊಂಡಿದ್ದರು. ಹತ್ತು ಮೀಟರ್ ಅಗಲ ಹೊಂದಿರುವ ಸೇತುವೆಯನ್ನು ಮ್ಯಾಪಿಂಗ್ ನಲ್ಲಿ ಪತ್ತೆ ಮಾಡಿದ್ದು, ರೈಲು ಬೋಗಿಯಷ್ಟು ಅಗಲದ ಸೇತುವೆ ರಚನೆ ಇರುವುದನ್ನು ಕಂಡುಹಿಡಿದಿದ್ದಾರೆ.
ರಾಮೇಶ್ವರದ ಧನುಷ್ಕೋಡಿಯಿಂದ ಶ್ರೀಲಂಕಾದ ತಲೈಮನ್ನಾರ್ ದ್ವೀಪದ ವರೆಗೆ ಸುಮಾರು 50 ಕಿಮೀ ಉದ್ದಕ್ಕೆ ಬಿಲ್ಲಿನ ಆಕಾರದಲ್ಲಿ ಸೇತುವೆ ರಚನೆ ಇರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ನಾಸಾ ಹಾರಿಸಿರುವ ಉಪಗ್ರಹದ ಲೇಸರ್ ತಂತ್ರಜ್ಞಾನ ಬಳಸಿ ಹೈ ರೆಸಲ್ಯೂಶನ್ ಇರುವ ಮ್ಯಾಪ್ ಒಂದನ್ನು ರಚಿಸಿದ್ದು, ಸಮುದ್ರದಾಳದಲ್ಲಿ ಮುಳುಗಡೆಯಾಗಿರುವ ಸೇತುವೆಯ ಸ್ಪಷ್ಟ ಚಿತ್ರವನ್ನು ಇದು ತೋರಿಸಿದೆ. ವಿಜ್ಞಾನಿ ಗಿರಿಬಾಬು ದಂಡಬಾತುಲ ನೇತೃತ್ವದಲ್ಲಿ ಇಸ್ರೋದ ಜೋಧಪುರ ಮತ್ತು ಹೈದರಾಬಾದಿನ ನ್ಯಾಶನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಈ ಅಧ್ಯಯನ ನಡೆಸಿದ್ದು, ಇದರ ವರದಿ ಅಂತಾರಾಷ್ಟ್ರೀಯ ಮಟ್ಟದ ಸೈನ್ಸ್ ಜರ್ನಲ್ ನಲ್ಲಿ ಪ್ರಕಟವಾಗಿದೆ. ಅಧ್ಯಯನದ ಮೂಲಕ ಒಂದು ಕಾಲದಲ್ಲಿ ಭಾರತ- ಲಂಕಾ ಮಧ್ಯೆ ನೇರ ಭೂಸಂಪರ್ಕ ಇದ್ದುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಮ್ಯಾಪಿಂಗ್ ಮೂಲಕ ಪೂರ್ಣ ಸೇತುವೆ ರಚನೆಯ 98.98 ಪರ್ಸೆಂಟ್ ಅನ್ನು ಪತ್ತೆ ಮಾಡಿದ್ದಾರೆ.
ಸಮುದ್ರದಲ್ಲಿ ಮುಳುಗಡೆಯಾಗಿರುವ ಸೇತುವೆಯನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯವರು ಆಡಮ್ಸ್ ಬ್ರಿಡ್ಜ್ ಎಂದು ಕರೆದಿದ್ದರೆ, ರಾಮಾಯಣ ಗ್ರಂಥದಲ್ಲಿ ರಾಮನೇ ತನ್ನ ಪತ್ನಿ ಸೀತೆಯನ್ನು ಲಂಕೆಯಿಂದ ಕರೆತರಲು ವಾನರ ಸೇನೆಯ ಮೂಲಕ ಸೇತುವೆಯನ್ನು ರಚಿಸಿದ ಎಂಬ ಉಲ್ಲೇಖ ಇದೆ. ರಾಮಾಯಣದ ರಾಮ ಸೇತುವನ್ನು ಭಾರತೀಯರು ಪ್ರಾಚೀನ ಕಾಲದಿಂದಲೂ ನಂಬಿಕೊಂಡು ಬಂದಿದ್ದಾರೆ. ಆದರೆ, ಆಧುನಿಕ ಕಾಲದಲ್ಲಿ ರಾಮ ಸೇತು ಇರುವಿಕೆ ಬಗ್ಗೆ ಪುರಾವೆ ಇಲ್ಲವೆಂಬ ನೆಲೆಯಲ್ಲಿ ಕೋರ್ಟ್ ಕಟಕಟೆಯೇರಿ ಈ ವಿಚಾರ ಜಿಜ್ಞಾಸೆಗೆ ಒಳಗಾಗಿತ್ತು.
9ನೇ ಶತಮಾನದಲ್ಲಿ ಪರ್ಶಿಯನ್ ನೌಕಾಯಾನಿಗಳು ಲಂಕೆ ಮತ್ತು ಭಾರತ ಮಧ್ಯೆ ಸೇತುವೆ ಇರುವುದನ್ನು ಪತ್ತೆ ಮಾಡಿದ್ದರು. ಅದನ್ನು ಸೇತು ಬಂಧೈ ಎಂದು ಅಂದಿನ ಕಾಲದಲ್ಲಿ ಕರೆಯುತ್ತಿದ್ದರು. ರಾಮೇಶ್ವರ ದೇವಸ್ಥಾನದ ದಾಖಲೆ ಪ್ರಕಾರ, 1480ರ ವರೆಗೂ ಈ ಸೇತುವೆ ಸಮುದ್ರದಲ್ಲಿ ಕಾಣುವ ರೀತಿ ಇತ್ತಂತೆ. ಪ್ರಬಲ ಚಂಡಮಾರುತದಿಂದಾಗಿ ಸೇತುವೆ ಮತ್ತಷ್ಟು ಮುಳುಗಡೆಯಾಗಿತ್ತು ಎನ್ನಲಾಗುತ್ತಿದೆ. ಈ ಹಿಂದೆಯೂ ಉಪಗ್ರಹ ಆಧರಿತ ಚಿತ್ರದಲ್ಲಿ ಸೇತುವೆ ರಚನೆ ಇರುವ ಬಗ್ಗೆ ಕಾಣಿಸಿತ್ತು. ಆದರೆ, ಸೇತುವೆಯ ಕೆಲವು ಭಾಗ ಹೆಚ್ಚು ಆಳದಲ್ಲಿರುವುದರಿಂದ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಮಧ್ಯೆ ಹತ್ತು ಮೀಟರಿನಷ್ಟು ಆಳದಲ್ಲಿ ಸೇತುವೆಯ ಅವಶೇಷಗಳಿವೆ ಎನ್ನುವುದನ್ನೀಗ ಪತ್ತೆ ಮಾಡಲಾಗಿದೆ.
ಐಸಿಇ ಸ್ಯಾಟ್-2 ಮೂಲಕ ಗ್ರೀನ್ ಲೇಸರ್ ಬಳಸಿ ಅಧ್ಯಯನ ಕೈಗೊಳ್ಳಲಾಗಿದ್ದು, ಇದರಲ್ಲಿ ಸಮುದ್ರ ತಳದಿಂದ 40 ಮೀಟರ್ ಎತ್ತರದ ವರೆಗಿನ ಚಿತ್ರವನ್ನು ಸ್ಪಷ್ಟವಾಗಿ ಪತ್ತೆ ಮಾಡಲಾಗುತ್ತದೆ. ಸೇತುವೆಯು ತಳಮಟ್ಟದಿಂದ 8 ಮೀಟರ್ ಎತ್ತರಕ್ಕಿದ್ದು, ಕೆಲವು ಕಡೆ ಬರಿಗಣ್ಣಿಗೆ ಗೋಚರಿಸುವಂತಿದೆ. ಆದರೆ ಈ ರೀತಿ ಕಣ್ಣಿಗೆ ಕಾಣುವಂತಿರುವುದು 0.02 ಪರ್ಸೆಂಟ್ ಮಾತ್ರ. ಉಳಿಕೆಯದ್ದು ಪೂರ್ತಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ಸೇತುವೆ ಪೂರ್ತಿ ಸುಣ್ಣದ ಕಲ್ಲಿನಿಂದ ರಚಿಸಲ್ಪಟ್ಟಿದೆ ಎಂದು ಅಧ್ಯಯನದಲ್ಲಿ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
The Indian Space Research Organisation (ISRO) has successfully mapped the submerged structure of Adam's Bridge, also known as Ram Setu, an ancient bridge between India and Sri Lanka mentioned in Indian religious texts. The researchers used ICESat-2 data from October 2018 to October 2023 to generate a 10-metre resolution map of the full length of the submerged ridge, sufficient to capture details of the size of a train coach.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm