ಬ್ರೇಕಿಂಗ್ ನ್ಯೂಸ್
01-07-24 07:42 pm HK News Desk ದೇಶ - ವಿದೇಶ
ಕಾಸರಗೋಡು, ಜುಲೈ 1: ಐಎಎಸ್, ಐಪಿಎಸ್ ಪರೀಕ್ಷೆ ಅಂದ್ರೆ ಕಬ್ಬಿಣದ ಕಡಲೆ ಎನ್ನೋರು ಬಹಳಷ್ಟು ಮಂದಿ ಇದ್ದಾರೆ. ಹಲವು ಬಾರಿ ಟ್ರೈ ಮಾಡಿದರೂ, ಗಿಟ್ಟಿಸಿಕೊಳ್ಳಲಾಗದೆ ಹಣ ಖರ್ಚು ಮಾಡಿ ಕೈಸುಟ್ಟುಕೊಂಡವರೂ ಇದ್ದಾರೆ. ಇಂಥವರ ಮಧ್ಯೆ ಇಲ್ಲೊಬ್ಬ ಬಿಎಸ್ಸಿ ಓದುತ್ತಿರುವ ಹುಡುಗ ಐಎಎಸ್, ಐಪಿಎಸ್ ಪರೀಕ್ಷೆ ಆಕಾಂಕ್ಷಿಗಳಿಗೇ ಕೋಚಿಂಗ್ ನೀಡುತ್ತಿದ್ದಾನೆ. ಅಷ್ಟೇ ಅಲ್ಲ, ಈ ಹುಡುಗ ತನ್ನ ಆನ್ಲೈನ್ ಚಾನೆಲಲ್ಲಿ ಗಳಿಸಿದ ಹಣದಿಂದಲೇ ಹೊಸ ಕಾರು ಖರೀದಿಸಿ ಕಾಲೇಜಿನವರನ್ನೇ ಹುಬ್ಬೇರಿಸುವಂತೆ ಮಾಡಿದ್ದಾನೆ.
ಕೇರಳದ ಕಾಸರಗೋಡು ಜಿಲ್ಲೆಯ ರಾಜಾಪುರಂನಲ್ಲಿ ಸೈಂಟ್ ಪಿಯೂಸ್ ಕಾಲೇಜಿನಲ್ಲಿ ಮೈಕ್ರೋ ಬಯಲಾಜಿ ವಿಷಯದಲ್ಲಿ ಬಿಎಸ್ಸಿ ಓದುತ್ತಿರುವ 21 ವರ್ಷದ ಸಾಯೂಜ್ ಚಂದ್ರನ್ ಈ ಸಾಧನೆ ಮಾಡಿರುವ ವಿದ್ಯಾರ್ಥಿ. ಕಳೆದ ಮಂಗಳವಾರ ಅಂದ್ರೆ, ಜೂನ್ 25ರಂದು ಸಂಜೆ ಕಾಲೇಜಿನಲ್ಲಿ ಮೈಕ್ರೋ ಬಯಾಲಜಿ ಕಲಿಸುತ್ತಿರುವ ಅಸಿಸ್ಟೆಂಟ್ ಪ್ರೊಫೆಸರ್ ಶಿನೋಷ್ ಸ್ಕರಿಯಾಚನ್ ಫೋನ್ ವಿದ್ಯಾರ್ಥಿಗೆ ಮಾಡಿದ್ದರು. ನಾಳೆ, ನೀನು ಅಂತಿಮ ವರ್ಷದ ಸ್ಟಡಿ ರಿಪೋರ್ಟ್ ಸಲ್ಲಿಕೆ ಮಾಡಬೇಕು, ನಿನ್ನ ಡೆಡ್ ಲೈನ್ ಮುಗಿದಿದೆ ಎಂದು ತಾಕೀತು ಮಾಡಿದ್ದರು. ಅದಕ್ಕುತ್ತರಿಸಿದ್ದ ಸಾಯುಜ್, ಸಾರಿ ಸರ್, ನಾನು ಕಾರು ಖರೀದಿಗೆ ಹೋಗುತ್ತಿದ್ದೇನೆ, ಬುಧವಾರ ಕಾಲೇಜಿಗೆ ಬರೋದಿಲ್ಲ ಎಂದಿದ್ದಾನೆ.
ವಿದ್ಯಾರ್ಥಿ ಮಾತು ಕೇಳಿ ಹೌಹಾರಿದ ಪ್ರೊಫೆಸರ್
ಏಯ್, ಅಪ್ಪ- ಅಮ್ಮ ಕಾರು ಖರೀದಿ ಮಾಡ್ತಿದ್ದರೆ, ನಿನಗೇನು ಕೆಲಸ ಇದೆ. ಅವರು ಹೋಗಿ ಕಾರು ತಗೊಂಡು ಬರ್ತಾರೆ, ನೀನು ಹೋಗೋದು ಬೇಡ. ಅದಕ್ಕೆಲ್ಲ ಕಾಲೇಜಿಗೆ ಚಕ್ಕರ್ ಹಾಕಿದರೆ ಸರಿ ಬರಲ್ಲ ಎಂದು ಪ್ರೊಫೆಸರ್ ಶಿನೋಷ್ ಕಟುವಾಗಿಯೇ ಹೇಳಿಬಿಟ್ಟಿದ್ದರು. ಆದರೆ ಮರುತ್ತರ ನೀಡಿದ್ದ ಹುಡುಗ, ಸರ್ ನಾನೇನು ಅಪ್ಪ – ಅಮ್ಮನ ಹಣದಲ್ಲಿ ಕಾರು ಖರೀದಿ ಮಾಡ್ತಿಲ್ಲ. ನಾನೇ ದುಡಿದಿಟ್ಟ ಹಣದಲ್ಲಿ ಹತ್ತು ಲಕ್ಷದ ಕಾರು ತರುತ್ತಿದ್ದೇನೆ ಎಂದು ಹೇಳುತ್ತಲೇ ಪ್ರೊಫೆಸರ್ ಶಾಕ್ ಆಗಿದ್ದರು. ಸಾಯುಜ್ ಕಾಲೇಜು ಸ್ನೇಹಿತರು, ಶಿಕ್ಷಕ ಸಿಬಂದಿಗೆಲ್ಲ ಈ ಮಾತು ತಿಳಿಯುತ್ತಲೇ ಅಚ್ಚರಿಗೊಂಡಿದ್ದಾರೆ. ಉಳಿದೆಲ್ಲ ಮಕ್ಕಳು ಕಾಲೇಜಿನಲ್ಲಿ ಪೋಕರಿ ಮಾಡ್ತಾ ಕಾಲ ಕಳೆಯುತ್ತಿದ್ದರೆ, ಈತ ಐಎಎಸ್ ಪರೀಕ್ಷೆ ಬರೆಯೋರಿಗೇ ಕೋಚಿಂಗ್ ನೀಡುತ್ತಿದ್ದಾನೆ ಅನ್ನೋ ಮಾತನ್ನು ಕೇಳಿ ನಂಬುವುದಕ್ಕೂ ಆಗಲಿಲ್ಲ.
ನಿವೃತ್ತ ಸೈನಿಕ ಪಿ.ಚಂದ್ರನ್ ಮತ್ತು ಸಾಮಾಜಿಕ ಕಾರ್ಯಕರ್ತೆ ಹಾಗೂ ಎಂಎನ್ಆರ್ ಇಜಿಎಸ್ ಮೇಲ್ವಿಚಾರಕಿ ಆಗಿರುವ ಸ್ವಾತಿ ಚಂದ್ರನ್ ಅವರ ಪುತ್ರನಾಗಿರುವ ಸಾಯುಜ್, ಕಾಸರಗೋಡಿನ ಚೆಮ್ನಾಡ್ ಪಂಚಾಯತ್ ವ್ಯಾಪ್ತಿಯ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಸ್ಕೂಲ್ ಮತ್ತು ಚೆಂಗಳ ಪಂಚಾಯತಿನ ಎಡನೀರು ಮಠದ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದ. 2022ರಲ್ಲಿ ಪಿಯುಸಿ ಮುಗಿಸಿದ ಬಳಿಕ ಡಾಕ್ಟರ್ ಆಗಬೇಕೆಂದು ನೀಟ್ ಎಕ್ಸಾಂ ಬರೆದಿದ್ದ. ಆದರೆ, ನಿರೀಕ್ಷಿತ ಅಂಕ ಬರದೇ ಇದ್ದುದರಿಂದ ತನ್ನ ಮನೆಯಿಂದ 35 ಕಿಮೀ ದೂರದ ರಾಜಾಪುರಂ ಸೈಂಟ್ ಪಿಯೂಸ್ ಕಾಲೇಜಿನಲ್ಲಿ ಮೈಕ್ರೋ ಬಯಾಲಜಿ ವಿಷಯದಲ್ಲಿ ಬಿಎಸ್ಸಿ ಓದಲು ಸೇರಿದ್ದ. ಮೆಡಿಕಲ್ ಸೈನ್ಸ್ ಗೆ ಹತ್ತಿರವಾಗಿರುವ ಮೈಕ್ರೋ ಬಯಾಲಜಿ ಪದವಿ ಕಲಿಯುವ ಅವಕಾಶ ಇಡೀ ಕೇರಳದಲ್ಲಿ ಇಲ್ಲಿ ಮಾತ್ರ ಇತ್ತು.
ಜೈಶಂಕರ್, ಶಶಿ ತರೂರ್ ಭಾಷಣ ಇಷ್ಟ
ಬಿಎಸ್ಸಿ ಓದುತ್ತಿದ್ದಾಗಲೇ ಐಎಎಸ್ ಪರೀಕ್ಷೆ ಬರೆಯಬೇಕೆಂಬ ಹಂಬಲ ಹುಟ್ಟಿತ್ತು. ಇದಕ್ಕಾಗಿ ಎರಡು ಇಂಗ್ಲಿಷ್ ಪತ್ರಿಕೆಯ ಆನ್ಲೈನ್ ಎಡಿಶನ್ ಓದಲು ಇ-ಪೇಪರ್ ಸಬ್ ಸ್ಕ್ರೈಬ್ ಮಾಡಿಕೊಂಡಿದ್ದ. ಪತ್ರಿಕೆಯಲ್ಲಿ ಬರುತ್ತಿದ್ದ ಕೆಲವು ಇಂಗ್ಲಿಷ್ ಶಬ್ದಗಳು ಅರ್ಥವಾಗುತ್ತಿರಲಿಲ್ಲ. ಇದಕ್ಕಾಗಿ ಇಂಗ್ಲಿಷ್ ಸಿನಿಮಾ ನೋಡಲು ಮತ್ತು ಕಾದಂಬರಿಗಳನ್ನು ಓದಲು ಶುರು ಮಾಡಿದ್ದ. ಅಲ್ಲದೆ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಶಶಿ ತರೂರ್ ಅವರ ಭಾಷಣಗಳನ್ನು ನೋಡಲು ಆರಂಭಿಸಿದ್ದ. ಜೈಶಂಕರ್ ಭಾಷಣ ನನಗೆ ಇಷ್ಟ. ಅವರ ರೀತಿ ಮಾತನಾಡುವುದಕ್ಕೆ ಕಷ್ಟ ಆಗಬಹುದು, ಅದೇ ರೀತಿ ಕಮ್ಯುನಿಕೇಟ್ ಮಾಡಬೇಕೆಂಬ ಛಲ ಇದೆ ಎನ್ನುತ್ತಾನೆ, ಸಾಯುಜ್.
ಇದೇ ವೇಳೆ, 2018ರಲ್ಲಿ ಒಂದೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದು 5ನೇ ರ್ಯಾಂಕ್ ಪಡೆದಿದ್ದ ಅಕ್ಷತ್ ಜೈನ್ ಮಾದರಿಯನ್ನು ಫಾಲೋ ಮಾಡಲು ಶುರುಹಚ್ಚಿದ್ದ. ಜಾಲತಾಣದಲ್ಲಿ ಫ್ರೀಯಾಗಿ ಸಿಗುವ ಆಕರಗಳನ್ನು ಪಡೆದು ಒಂದೇ ವರ್ಷದಲ್ಲಿ ಪರೀಕ್ಷೆಗೆ ತಯಾರು ಮಾಡಿದ್ದೆ ಎಂಬ ಅಕ್ಷತ್ ಜೈನ್ ಮಾತನ್ನು ಪಾಲಿಸಲಾರಂಭಿಸಿದ್ದ. ಕೇವಲ ಎಂಟು ತಿಂಗಳಲ್ಲಿ ಸಾಯುಜ್ ಚಂದ್ರನ್, ಪ್ರಸಕ್ತ ರಾಜಕೀಯ ಸನ್ನಿವೇಶ, ಇತಿಹಾಸ, ಜೀಯೋಗ್ರಫಿ, ಜನರಲ್ ಸ್ಟಡೀಸ್ ವಿಚಾರಗಳನ್ನು ಅರಿತುಕೊಂಡಿದ್ದ. ಇದಕ್ಕಾಗಿ ಫಿಸಿಕ್ಸ್ ವಾಲಾ ಎಂಬ ಯೂಟ್ಯೂಬ್ ಚಾನೆಲ್ ಫಾಲೋ ಮಾಡುತ್ತಿದ್ದ. ಒಂದು ಕಡೆ ನೋಟ್ಸ್ ಗಳನ್ನು ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಮೈಕ್ರೋ ಬಯಾಲಜಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಸಬ್ಜೆಕ್ಟ್ ಆಗಿರಲ್ಲ ಎಂದು ತಿಳಿದು ಸೋಶಿಯಾಲಜಿ ವಿಷಯ ಆಯ್ಕೆ ಮಾಡಿಕೊಂಡು ಕಲಿಯತೊಡಗಿದ್ದ. ಯುಪಿಎಸ್ಸಿಯಲ್ಲಿ ಎನ್ ಸಿಆರ್ ಇಟಿ ಸಿಲೆಬಸ್ ನಿಂದಲೇ ಬಹುತೇಕ ಪ್ರಶ್ನೆಗಳು ಬರುತ್ತವೆ ಎನ್ನುವುದನ್ನು ತಿಳಿದು 6ರಿಂದ 10ನೇ ತರಗತಿಯ ವಿಷಯಗಳನ್ನು ಮತ್ತೆ ಓದಲು ಶುರು ಮಾಡಿದ್ದ.
ಪತ್ರಿಕೆ ಓದುತ್ತಲೇ ಪರೀಕ್ಷೆಗೆ ಸಿದ್ಧತೆ
ಪ್ರತಿದಿನ ಬೆಳಗ್ಗೆ ಏಳು ಗಂಟೆಗೆ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗಲೇ ತನ್ನ ಐಪಾಡ್ ನಲ್ಲಿ ಪತ್ರಿಕೆಗಳನ್ನು ಓದುವುದನ್ನು ರೂಢಿಸಿದ್ದ. ಕಾಲೇಜಿನಲ್ಲಿ ಬ್ರೇಕ್ ಸಿಗುತ್ತಿದ್ದಾಗಲೂ ಇದೇ ವಿಚಾರದಲ್ಲಿ ಸ್ಟಡಿ ಮಾಡುತ್ತಿದ್ದ. ದಿನವೂ ಸಂಜೆ 7 ಗಂಟೆಯ ವೇಳೆಗೆ ಎರಡು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಲು ರೆಡಿ ಮಾಡಿಕೊಳ್ಳುತ್ತಿದ್ದ. ಇದನ್ನೆಲ್ಲ ಬರೆದಿಟ್ಟುಕೊಳ್ಳಬೇಕಲ್ವಾ, ವಿಡಿಯೋ ಮಾಡಿ ಅಪ್ಲೋಡ್ ಮಾಡಿದರೆ, ಆಸಕ್ತರಿಗೂ ಲಾಭ ಆಗಬಹುದು ಅಂದ್ಕೊಂಡು ಆರಂಭಿಸಿದ್ದೇ ಯೂಟ್ಯೂಬ್ ಚಾನೆಲ್. ಮೊದಲಿಗೆ ವಾಟ್ಸಪ್ ಮತ್ತು ಟೆಲಿಗ್ರಾಮ್ ಮೂಲಕ ಯೂಟ್ಯೂಬ್ ಲಿಂಕ್ ಷೇರ್ ಮಾಡುತ್ತಿದ್ದ. ಆರಂಭದಲ್ಲಿ ‘ಐಎಎಸ್ ಅಕಾಡೆಮಿ’ ಅಂತ ತನ್ನ ಚಾನೆಲಿಗೆ ಹೆಸರಿಟ್ಟುಕೊಂಡಿದ್ದ. ಕೆಲ ಸಮಯದಲ್ಲೇ ಹೆಚ್ಚು ಜನರನ್ನು ಆಕರ್ಷಿಸಿದ್ದು ನೋಡಿ, ‘ಐಎಎಸ್ ಹಬ್ ಮಲಯಾಳಂ’ ಎಂದು ಹೆಸರು ಬದಲಿಸಿದ್ದ. ಮಲಯಾಳಂನಲ್ಲಿ ವಿವರಣೆ ನೀಡುತ್ತಿದ್ದ ಸಾಯುಜ್, ನೋಟ್ಸ್ ಗಳನ್ನು ಇಂಗ್ಲಿಷಿನಲ್ಲಿ ನೀಡುತ್ತಿದ್ದ. ವಾರದಲ್ಲೊಮ್ಮೆ ಇಡೀ ಒಂದು ವಾರದ ಅನಾಲಿಸಿಸ್ ರಿಪೋರ್ಟ್ ನೀಡುತ್ತಿದ್ದ. ಎರಡು ತಿಂಗಳಲ್ಲಿ ಹತ್ತು ಸಾವಿರದಷ್ಟು ವೀವ್ಸ್ ಬಂದಿದ್ದು ನೋಡಿ ಮತ್ತಷ್ಟು ಹುಮ್ಮಸ್ಸು ಬಂದಿತ್ತು. ಆನಂತರ, ಟೆಲಿಗ್ರಾಮ್ ಗ್ರೂಪ್ ಆರಂಭಿಸಿ ಅದರಲ್ಲಿ ಆಸಕ್ತರಿಗೆ ಷೇರ್ ಮಾಡುತ್ತಿದ್ದ. ಇದರಿಂದ ಮತ್ತಷ್ಟು ಐಎಎಸ್ ಆಸಕ್ತರು ಗ್ರೂಪಿನಲ್ಲಿ ಸೇರಿಕೊಂಡಿದ್ದರು.
ಯೂಟ್ಯೂಬ್ ಚಾನೆಲ್ ಹಿಂದೆ ಬಿದ್ದ ವೃತ್ತಿಪರರು
ಸಾಯುಜ್ ನೋಟ್ಸ್ ಹೆಚ್ಚು ಪರಿಪೂರ್ಣ ಇರುತ್ತಿದ್ದುದರಿಂದ ಬೇರೆ ಬೇರೆ ಉದ್ಯೋಗದಲ್ಲಿದ್ದು ಐಎಎಸ್ ಬರೆಯಬೇಕೆಂದಿದ್ದವರು ಗ್ರೂಪ್ ಸೇರಿಕೊಳ್ತಿದ್ದರು. ಅಲ್ಲದೆ, ನಾವು ಇದಕ್ಕಾಗಿ ಪೇ ಮಾಡಲು ರೆಡಿ ಇದ್ದೇವೆ, ಉಚಿತ ಬೇಡ, ನೀವು ಖಾಸಗಿ ಚಾನೆಲ್ ಮಾಡಿಕೊಳ್ಳಿ ಎಂದು ಸಲಹೆಯಿತ್ತಿದ್ದರು. ಐಟಿ ಸೇರಿದಂತೆ ವಿವಿಧ ವೃತ್ತಿ ಮಾಡಿಕೊಂಡಿದ್ದವರು ತಮಗೆ ಸುದ್ದಿ ಪತ್ರಿಕೆ ಓದಿ ರೆಡಿಯಾಗಲು ಸಮಯ ಇಲ್ಲವೆಂದು ಹೇಳಿ ಈತನ ಯೂಟ್ಯೂಬ್ ಚಾನೆಲ್ ಫಾಲೋ ಮಾಡತೊಡಗಿದ್ದರು. ಇದರಿಂದಾಗಿ ಸಾಯುಜ್ ತನ್ನ ಚಾನೆಲನ್ನು ಖಾಸಗಿಯಾಗಿ ಮಾಡಿಕೊಂಡು ತಿಂಗಳಿಗೆ 500 ರೂ.ಗೆ ಸಬ್ ಸ್ಕ್ರೈಬ್ ಆಗುವಂತೆ ಹೇಳಿದ್ದ. ಹಣ ಇಲ್ಲದ ಬಡವರು, ದೈಹಿಕ ದೌರ್ಬಲ್ಯ ಇದ್ದವರಿಗೆ ಫ್ರೀಯಾಗಿ ಡೈರೆಕ್ಟ್ ಯೂಟ್ಯೂಬ್ ಲಿಂಕ್ ಕಳಿಸುತ್ತಿದ್ದ. ಹೆಚ್ಚಿನ ನೋಟ್ಸ್ ನೀಡುತ್ತಿದ್ದುದಲ್ಲದೆ, ದಿನವೂ ಪರೀಕ್ಷೆಗಳನ್ನು ಕಂಡಕ್ಟ್ ಮಾಡಿ ವಿದ್ಯಾರ್ಥಿಗಳನ್ನು ರೆಡಿ ಮಾಡಿಸುತ್ತಿದ್ದ. ಇದರಿಂದಾಗಿ ಬಹಳಷ್ಟು ಬೇಗ ಮಲಯಾಳಿ ಯುವಕರ ನಡುವೆ ಯೂಟ್ಯೂಬ್ ತರಬೇತಿ ಜನಾಕರ್ಷಣೆ ಪಡೆದಿತ್ತು. ರಾತ್ರಿ 8 ಗಂಟೆಯಿಂದ ಹತ್ತು ಗಂಟೆ ವರೆಗೂ ಆನ್ಲೈನ್ ಕ್ಲಾಸ್ ನೀಡುತ್ತಾನೆ. 2023ರ ಎಪ್ರಿಲ್ ತಿಂಗಳಲ್ಲಿ ಆರಂಭಗೊಂಡ ಚಾನೆಲಿನಲ್ಲಿ ಸದ್ಯ ಲೈವ್ ಕ್ಲಾಸಿನಲ್ಲಿ 95 ಮಂದಿ ವಿದ್ಯಾರ್ಥಿಗಳಿದ್ದಾರೆ. ಯುಪಿಎಸ್ಸಿ ತೇರ್ಗಡೆಯಾದ ಬಳಿಕ ಉಚಿತವಾಗಿಯೇ ಕ್ಲಾಸ್ ಮಾಡುತ್ತೇನೆ ಎಂದು ಸಾಯುಜ್ ಹೇಳುತ್ತಾನೆ.
ಸಾಯುಜ್ ಚಂದ್ರನ್ ಬಿಎಸ್ಸಿ ಅಂತಿಮ ವರ್ಷದಲ್ಲಿದ್ದು, ಮುಂದಿನ ವರ್ಷ 2025ರಲ್ಲಿ ಸ್ವತಃ ಯುಪಿಎಸ್ಸಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಾನೆ. ಸಾಯುಜ್ ಇಷ್ಟೆಲ್ಲ ಮಾಡುತ್ತಿದ್ದರೂ, ಸೈಂಟ್ ಪಿಯೂಸ್ ಕಾಲೇಜಿನಲ್ಲಾಗಲೀ, ಗೆಳೆಯರಿಗಾಗಲೀ ತಿಳಿದಿರಲಿಲ್ಲ. ಕಾಲೇಜಿನಲ್ಲಿ ಕೆಮಿಸ್ಟ್ರಿ ಕಲಿಸುತ್ತಿರುವ ಡಾ.ಆಶಾ ಚಾಕೋಗೆ ಮಾತ್ರ, ಸಾಯುಜ್ ಯೂಟ್ಯೂಬ್ ಚಾನೆಲ್ ಬಗ್ಗೆ ತಿಳಿದಿತ್ತು. ಆದರೆ, ಆಕೆ ಈ ವಿಚಾರವನ್ನು ಗುಪ್ತವಾಗಿಯೇ ಇಟ್ಟಿದ್ದರು. ನಮ್ಮಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಐಎಎಸ್- ಐಪಿಎಸ್ ಬರೆಯುವ ಆಸಕ್ತಿ ಹೊಂದಿದ್ದಾರೆ. ಆದರೆ ಸಾಯುಜ್ ರೀತಿ ಇನ್ನೊಬ್ಬರಿಗೆ ಕಲಿಸುವ ಸಾಮರ್ಥ್ಯ ಇದ್ದವರು ಯಾರೂ ಇಲ್ಲ. ಈತನ ಯೂಟ್ಯೂಬ್ ಚಾನೆಲ್ ಫಾಲೋ ಮಾಡುತ್ತಿರುವವರಲ್ಲಿ ಐಟಿ ಪರಿಣಿತರು, ಖಾಸಗಿ, ಸರ್ಕಾರಿ ಉದ್ಯೋಗ ಮಾಡಿಕೊಂಡವರೂ ಇದ್ದಾರೆ ಎಂದು ಆಶಾ ಚಾಕೋ ಹೇಳುತ್ತಾರೆ.
Late Tuesday evening, assistant professor Shinosh Skariachan phoned his final-year undergraduate student Sayooj S Chandran and asked him not to miss the deadline the next day to submit his microbiology record. Sayooj told his teacher that he would not be coming to college on Wednesday because he was going to buy a car. "I was taken aback. Why should a diligent student like him skip college if his parents are buying a car? I insisted that he cannot make that an excuse to miss the deadline," said Dr Skariachan.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
16-03-25 10:43 am
Mangalore Correspondent
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm