ಬ್ರೇಕಿಂಗ್ ನ್ಯೂಸ್
29-06-24 07:21 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 29: ಜಮ್ಮು ಕಾಶ್ಮೀರದ ಲಡಾಖ್ ಪ್ರಾಂತ್ಯದ ಚೀನಾ ಗಡಿಭಾಗದಲ್ಲಿ ನದಿಯೊಂದನ್ನು ಯುದ್ಧ ಟ್ಯಾಂಕರಿನಲ್ಲಿ ದಾಟುತ್ತಿದ್ದಾಗ ಒಮ್ಮೆಲೇ ನೀರಿನ ಪ್ರಮಾಣ ಹೆಚ್ಚಾಗಿ ಅದರಲ್ಲಿದ್ದ ಐವರು ಯೋಧರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಲಡಾಖ್ ಗಡಿಭಾಗದ ದೌಲತ್ ಬೇಗ್ ಓಲ್ಡೀ ಏರಿಯಾದಲ್ಲಿ ಘಟನೆ ನಡೆದಿದ್ದು, ಚೀನಾ ಭಾಗದಿಂದ ಹರಿದು ಬರುವ ನ್ಯೋಮಾ ಚುಶೂಲ್ ಎನ್ನುವ ನದಿಯನ್ನು ದಾಟುತ್ತಿದ್ದಾಗ ದುರಂತ ಉಂಟಾಗಿದೆ. ಟಿ-72 ಹೆಸರಿನ ಯುದ್ಧ ಟ್ಯಾಂಕರನ್ನು ನಸುಕಿನಲ್ಲಿ ಐವರು ಯೋಧರು ದಾಟಿಸುತ್ತಿದ್ದಾಗ ಒಮ್ಮಿಂದೊಮ್ಮೆಲೇ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ನದಿಯ ಪ್ರವಾಹದಲ್ಲಿ ಸಿಲುಕಿದ ಐವರು ಯೋಧರು ಕೊಚ್ಚಿ ಹೋಗಿದ್ದು ದುರಂತ ಸಾವಿಗೀಡಾಗಿದ್ದಾರೆ.
ಯುದ್ಧ ಟ್ಯಾಂಕ್ ನದಿಯ ಮಧ್ಯೆ ಸ್ಥಗಿತಗೊಂಡಿದ್ದರಿಂದ ದುರ್ಘಟನೆ ಸಂಭವಿಸಿದೆ. ಕೂಡಲೇ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಲು ಯತ್ನಿಸಿದ್ದು, ನೀರಿನ ಪ್ರವಾಹ ಹೆಚ್ಚಿದ್ದರಿಂದ ಸಾಧ್ಯವಾಗಲಿಲ್ಲ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ. ತರಬೇತಿ ಉದ್ದೇಶದ ಭಾಗವಾಗಿ ಯೋಧರು ಯುದ್ಧ ಟ್ಯಾಂಕ್ ಅನ್ನು ನದಿ ದಾಟಿಸುತ್ತಿದ್ದರು. ಅದೇ ಸಂದರ್ಭದಲ್ಲಿ ದುರ್ಘಟನೆ ಆಗಿದ್ದು ಆರ್ಮಿ ಚೀಫ್ ಮನೋಜ್ ಪಾಂಡೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರಲ್ಲಿ ಐವರು ಭೂಸೇನೆಯ ಸೈನಿಕರು ಮತ್ತು ಒಬ್ಬರು ಜೂನಿಯರ್ ಕಮಿಷನ್ಡ್ ಅಧಿಕಾರಿ ಇದ್ದಾರೆ. ಲಡಾಖ್ ಮತ್ತು ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನದಿಯಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಶಿಮ್ಲಾ, ಕುಲು, ಕಿನ್ನೌರ್ ಜಿಲ್ಲೆಗಳಲ್ಲಿ ಭೂಕುಸಿತ ಘಟನೆಗಳು ನಡೆದಿವೆ. ಶಿಮ್ಲಾದಲ್ಲಿ ಭೂಕುಸಿತದಿಂದ ಹಲವಾರು ವಾಹನಗಳು ಜಖಂ ಆಗಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
Five soldiers of the Indian Army died after they were swept away in flash floods while their tank was crossing a river in the Daulat Beg Oldie area of eastern Ladakh. The area is near the Line of Actual Control with China.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 02:45 pm
Mangalore Correspondent
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm