ಬ್ರೇಕಿಂಗ್ ನ್ಯೂಸ್
22-06-24 05:37 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 22: ಕರ್ನಾಟಕದಲ್ಲಿ ಕಾಲೇಜು ತರಗತಿಯಲ್ಲಿ ಹಿಜಾಬ್ ನಿಷೇಧಿಸಿದ್ದನ್ನು ವಿರೋಧಿಸಿ ಬೀದಿ ರಂಪ ಆಗಿದ್ದು ನೋಡಿದ್ದೇವೆ. ಆದರೆ, ಈಗ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯಿರುವ ತಜಕಿಸ್ತಾನದಲ್ಲಿ ಮುಸ್ಲಿಮರ ಹಿಜಾಬ್ ಪದ್ಧತಿಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಹಿಜಾಬ್ ನಿಷೇಧದ ಜೊತೆಗೆ, ಎರಡು ಪ್ರಮುಖ ಇಸ್ಲಾಮಿಕ್ ಹಬ್ಬಗಳಾದ ಈದ್ ಉಲ್-ಫಿತರ್ ಮತ್ತು ಈದ್ ಉಲ್-ಅಧಾದಲ್ಲಿ ಮಕ್ಕಳು ಭಾಗವಹಿಸುವುದನ್ನು ಕೂಡ ತಜಕಿಸ್ತಾನದಲ್ಲಿ ನಿಷೇಧ ಮಾಡಲಾಗಿದೆ. ಹಿಜಾಬ್ ಮತ್ತು ಮಕ್ಕಳ ಈದ್ ಆಚರಣೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಕಾನೂನುಗಳಿಗೆ ಜೂನ್ 19 ರಂದು ಮಜ್ಲಿಸಿ ಮಿಲ್ಲಿ (ತಜಕಿಸ್ತಾನದ ಸಂಸತ್ತಿನ ಮೇಲಿನ ಚೇಂಬರ್) ಒಪ್ಪಿಗೆ ನೀಡಿದೆ. ತಜಕಿಸ್ತಾನದ ಸಂಸತ್ ಆದ ‘ತಾಜಿಕ್ ಸಂಸತ್ತಿನ’ ಕೆಳಮನೆ ಮಜ್ಲಿಸಿ ಮಯೊಂಡಗಾನ್ ಮೇ 8ರಂದು ಈ ಕುರಿತ ಶಾಸನವನ್ನು ಅನುಮೋದಿಸಿತ್ತು. ಇದೀಗ ಹಿಜಾಬ್ ನಿಷೇಧದ ಕಾನೂನು ದೇಶಾದ್ಯಂತ ಜಾರಿಯಾಗಿದೆ.
ಇಸ್ಲಾಮಿಕ್ ಪದ್ಧತಿಯಂತೆ ತಲೆ ಮತ್ತು ಮುಖವನ್ನು ಮುಚ್ಚುವ ಹಿಜಾಬ್ ಧಾರಣೆಯನ್ನು ನಿಷೇಧಿಸಿರುವ ತಜಕಿಸ್ತಾನ ಸರ್ಕಾರ ಮುಸ್ಲಿಂ ಮಹಿಳೆಯರು ಸ್ಥಳೀಯ ಶೈಲಿಯಲ್ಲಿ ತಮ್ಮ ಕೂದಲನ್ನು ಮುಚ್ಚಿಕೊಳ್ಳುವಂತೆ ಹೇಳಿದೆ. ತಜಕಿಸ್ತಾನ ಸರ್ಕಾರದ ಕಾನೂನು ತಿದ್ದುಪಡಿ ಪ್ರಕಾರ, ಇದನ್ನು ಉಲ್ಲಂಘಿಸಿದರೆ ಭಾರೀ ದಂಡವನ್ನು ವಿಧಿಸಬಹುದು. ಇದರಂತೆ, ತಜಕಿಸ್ತಾನದಲ್ಲಿ ಯಾವುದೇ ಮಹಿಳೆಯರು ಹಿಜಾಬ್ ಧರಿಸಿದರೆ ಭಾರೀ ದಂಡ ತೆರಬೇಕಾಗಬಹುದು.
ತಜಕಿಸ್ತಾನ್ 95-98 ಶೇಕಡಾದಷ್ಟು ಸುನ್ನಿ ಮುಸ್ಲಿಮರಿದ್ದಾರೆ. ಎರಡು ಪರ್ಸೆಂಟ್ ಶಿಯಾ ಮುಸ್ಲಿಮರಿದ್ದಾರೆ. ಮುಸ್ಲಿಂ ಬಾಹುಳ್ಯ ದೇಶವಾಗಿದ್ದರೂ ತಜಕಿಸ್ತಾನ್ ಜಾತ್ಯತೀತ ತತ್ವಗಳನ್ನು ಒಪ್ಪಿಕೊಂಡಿದೆ. ರಷ್ಯಾದ ಹಿಡಿತದಿಂದ ಪ್ರತ್ಯೇಕಗೊಂಡು ಸ್ವತಂತ್ರ ರಾಷ್ಟ್ರವಾದ ಬಳಿಕ ತಜಕಿಸ್ತಾನ್ 1994ರಲ್ಲಿ ತನ್ನದೇ ಆದ ಜಾತ್ಯತೀತ ತತ್ವಗಳನ್ನು ಪಾಲಿಸುವ ಸಂವಿಧಾನ ಜಾರಿಗೆ ತಂದಿದೆ. ಬೌದ್ಧರು, ಮಂಗೋಲಿಯನ್ನರು, ಯೆಹೂದಿಗಳ ದೇಶವಾಗಿದ್ದ ತಜಕಿಸ್ತಾನ್ ಏಳನೇ ಶತಮಾನದಲ್ಲಿ ಅರಬ್ಬರ ದಾಳಿ ಬಳಿಕ ಅಲ್ಲಿನ ಜನರು ಇಸ್ಲಾಮಿಗೆ ಮತಾಂತರಗೊಂಡಿದ್ದರು. ಅಪೂರ್ವ ಕಣಿವೆಗಳನ್ನು ಒಳಗೊಂಡ ತಜಕಿಸ್ತಾನ್ ಭಾರತದ ಸ್ನೇಹಿತ ರಾಷ್ಟ್ರವಾಗಿದ್ದು ಒಟ್ಟು 98 ಲಕ್ಷ ಜನಸಂಖ್ಯೆ ಹೊಂದಿದೆ.
ತಜಕಿಸ್ತಾನ್ ಸೊಮೊನಿ ಅಲ್ಲಿನ ಕರೆನ್ಸಿಯಾಗಿದ್ದು ಹಿಜಾಬ್ ನಿಷೇಧ ಕಾನೂನು ಉಲ್ಲಂಘನೆ ಮಾಡಿದರೆ 17 ಸಾವಿರ ಸೊಮೊನಿಗಳನ್ನು ದಂಡ ವಿಧಿಸಬಹುದು. ಸರ್ಕಾರಿ ಅಧಿಕಾರಿಗಳು ಮತ್ತು ಧಾರ್ಮಿಕ ಅಧಿಕಾರಿಗಳು ಈ ಅಪರಾಧ ಎಸಗಿದಲ್ಲಿ ಅವರ ಮೇಲೆ ಕ್ರಮವಾಗಿ 54,000 ಸೊಮೊನಿಗಳಿಂದ 57,600 ಸೊಮೊನಿಗಳ ವರೆಗೂ ದಂಡವನ್ನು ವಿಧಿಸಲು ಕಾನೂನು ಅವಕಾಶ ನೀಡಿದೆ.
Muslim-majority Tajikistan has prohibited the use of hijab (Arabic headcover for women), terming it an "alien garment". Tajikistan has also banned 'Idi', the custom of children seeking money during Eid. The move to prohibit the hijab in the Central-Asian nation is the latest in a series of measures by the government to promote a secular national identity.With around 10 million Muslims, more than 96% of the Republic of Tajikistan follows various sects of Islam.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm