ಬ್ರೇಕಿಂಗ್ ನ್ಯೂಸ್
21-06-24 03:04 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 21: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಆಚರಿಸಿದರು. ದಾಲ್ ಸರೋವರದ ಬಳಿ ಯೋಗಾಸನ ಮಾಡುವುದಕ್ಕೆ ಸಿದ್ಧತೆ ನಡೆಸಲಾಗಿತ್ತು. ಮಳೆಯ ಕಾರಣದಿಂದ ಒಳಾಂಗಣದಲ್ಲಿ ಸಾರ್ವಜನಿಕರ ಜೊತೆಗೆ ಮೋದಿ ಯೋಗಾಭ್ಯಾಸ ನಡೆಸಿದರು.
ದಾಲ್ ಲೇಕ್ ಮುಂಭಾಗದ ಶೇರ್ ಇ- ಕಾಶ್ಮೀರ್ ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಸೆಂಟರ್ ನಲ್ಲಿ ಯೋಗ ದಿನಾಚರಣೆಯಲ್ಲಿ ಮೋದಿ ಪಾಲ್ಗೊಂಡು ವಿವಿಧ ಆಸನಗಳನ್ನು ನಡೆಸಿದರು. ಈ ಬಾರಿ ಯೋಗ ದಿನವನ್ನು ಸ್ವಂತಕ್ಕೆ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಎನ್ನುವ ಥೀಮ್ ಇಟ್ಟುಕೊಳ್ಳಲಾಗಿತ್ತು. ಇದೇ ವೇಳೆ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಜಗತ್ತಿನ ಮೂಲೆ ಮೂಲೆಯಲ್ಲಿ ಯೋಗಾಭ್ಯಾಸ ನಡೆಸುವ ಎಲ್ಲ ಜನರಿಗೂ ಅಭಿನಂದನೆ ಹೇಳುತ್ತೇನೆ. ಜಗತ್ತಿನಲ್ಲಿ ಯೋಗಾಭ್ಯಾಸ ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ. ಅತಾರಾಷ್ಟ್ರೀಯ ಯೋಗ ದಿನಾಚರಣೆ ಹತ್ತನೇ ವರ್ಷ ಪೂರೈಸಿದೆ. 2014ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಬಗ್ಗೆ ವಿಶ್ವಸಂಸ್ಥೆಗೆ ಶಿಫಾರಸು ಮಾಡಿದಾಗ 177 ರಾಷ್ಟ್ರಗಳು ಬೆಂಬಲಿಸಿದ್ದವು. ಆನಂತರ, ಪ್ರತಿ ವರ್ಷವೂ ಯೋಗ ದಿನ ಹೊಸ ದಾಖಲೆಯತ್ತ ಸೇರುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ಹೇಳಿದರು.
ಇಂದು ನಾವು ಯೋಗ ಹೊಸ ದೃಷ್ಟಿಯತ್ತ ಹರಿದಿದ್ದನ್ನು ಕಾಣಬಹುದು. ದೇಶದಲ್ಲಿ ಯೋಗ ಇಕಾನಮಿ ಹೊಸದಾಗಿ ಅಭಿವೃದ್ಧಿ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಭಾರತದಲ್ಲಿ ಋಷಿಕೇಶ, ಕಾಶಿಯಿಂದ ಹಿಡಿದು ಕೇರಳದ ವರೆಗೂ ಯೋಗ ಟೂರಿಸಂ ಬೆಳೆಯುತ್ತಿದೆ. ವಿದೇಶಿ ಪ್ರಜೆಗಳು, ಪ್ರವಾಸಿಗರು ಭಾರತದ ನೈಜ ಯೋಗ ಕಲೆಯನ್ನು ಕಲಿಯುವುದಕ್ಕಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಇವತ್ತು ನಾವು ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಎಲ್ಲರೂ ಯೋಗವನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದೇನೆ ಎಂದರು.
ಯೋಗಿ, ಸಾಧಕರ ಭೂಮಿಯಾಗಿರುವ ಶ್ರೀನಗರದಲ್ಲಿ ಈ ಬಾರಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಶ್ರೀನಗರದಲ್ಲಿ ಯೋಗದ ಶಕ್ತಿಯನ್ನು ಅನುಭವಿಸಿದ್ದೇನೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ, ಫ್ರಾನ್ಸ್ ನಲ್ಲಿ ಯೋಗ ಟೀಚರ್ ಆಗಿದ್ದು ಈ ಬಾರಿ ಭಾರತದ ಅತ್ಯುನ್ನತ ಪುರಸ್ಕಾರ ಪಡೆದಿರುವ 101 ವರ್ಷದ ಮಹಿಳೆ ಚಾರ್ಲೆಟ್ ಚಾಪಿನ್ ಅವರನ್ನು ಸ್ಮರಿಸಿದ ಮೋದಿ, ಈ ವರ್ಷ ಪದ್ಮಶ್ರೀ ಪುರಸ್ಕಾರವನ್ನು ವಿದೇಶದ ಯೋಗ ಗುರುವಿಗೆ ನೀಡಲಾಗಿತ್ತು. ಆಕೆ ಎಂದೂ ಭಾರತಕ್ಕೆ ಬಂದಿಲ್ಲ. ಆದರೆ ಫ್ರಾನ್ಸ್ ನಲ್ಲಿದ್ದೇ ತಮ್ಮ ಇಡೀ ಜೀವನವನ್ನು ಯೋಗದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಅರ್ಪಿಸಿಕೊಂಡಿದ್ದಾರೆ. ಜಗತ್ತಿನ ಮುಂಚೂಣಿ ಯುನಿವರ್ಸಿಟಿಗಳಲ್ಲಿ ಇಂದು ಯೋಗದ ಬಗ್ಗೆ ಸಂಶೋಧನೆ ಕೈಗೊಳ್ಳುತ್ತಿದ್ದಾರೆ, ಥಿಸಿಸ್ ಗಳನ್ನು ಪ್ರಕಟಿಸುತ್ತಿದ್ದಾರೆ. ಯೋಗದ ಮಹತ್ವದ ಬಗ್ಗೆ ಇಡೀ ಜಗತ್ತಿನ ಜನರು ಆಕರ್ಷಿತರಾಗಿದ್ದಾರೆ ಎಂದು ಮೋದಿ ಹೇಳಿದರು.
Prime Minister Narendra Modi on Friday led the celebrations of the 10th International Day of Yoga in Jammu and Kashmir's Srinagar. The event, which was scheduled to start at 6.30 am at Sher-i-Kashmir International Conference Centre (SKICC) on the banks of the Dal Lake, was disrupted due to heavy rain in the city.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm