ಬ್ರೇಕಿಂಗ್ ನ್ಯೂಸ್
17-06-24 10:02 pm HK News Desk ದೇಶ - ವಿದೇಶ
ನವದೆಹಲಿ, ಜೂನ್.17: ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಬಗ್ಗೆ ಅನುಮಾನ ವ್ಯಕ್ತಪಡಿಸಿ ಟೆಸ್ಲಾ ಕಂಪನಿ ಮುಖ್ಯಸ್ಥ ಅಲಾನ್ ಮಸ್ಕ್ ಟ್ವೀಟ್ ಮಾಡಿರುವುದು ಭಾರತದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ದೇಶದಲ್ಲಿ ಲೋಕಸಭೆ ಚುನಾವಣೆ ನಡೆದು ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೇರಿದ ಬೆನ್ನಲ್ಲೇ ಎಲಾನ್ ಮಸ್ಕ್, ಇವಿಎಂ ಮತಯಂತ್ರಗಳನ್ನು ತಿರುಚಬಹುದು ಎನ್ನುವ ರೀತಿ ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಪ್ರತಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದಿವೆ.
ಇವಿಎಂ ಯಂತ್ರಗಳನ್ನು ತಿರುಚಲು ಸಾಧ್ಯವಿದೆ. ಮಾನವನಿಂದಲೇ ರಚನೆಗೊಂಡಿರುವ ಯಂತ್ರಗಳನ್ನು ಮನುಷ್ಯನಿಂದಲೇ ತಿರುಚಲು ಸಾಧ್ಯವಾಗಲಾರದೇ.. ತಿರುಚುವ ಅವಕಾಶ ಕಡಿಮೆ ಇದ್ದರೂ ಫಲಿತಾಂಶ ಬದಲಿಸುವ ಅಪಾಯ ಇದೆ. ಹೀಗಾಗಿ ಭವಿಷ್ಯದ ಚುನಾವಣೆಗಳಲ್ಲಿ ಇವಿಎಂ ಮತಯಂತ್ರಗಳ ಬಳಕೆ ನಿಷೇಧಿಸಬೇಕು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಕೆರಿಬಿಯನ್ ದ್ವೀಪ ಸಮೂಹದ ಪೋರ್ಟೊರಿಕಾದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಇವಿಎಂ ಮತಯಂತ್ರ ಅಕ್ರಮ ಆರೋಪ ಉಲ್ಲೇಖಿಸಿ ಅಲಾನ್ ಮಸ್ಕ್ ಪೋಸ್ಟ್ ಮಾಡಿದ್ದು, ಅಮೆರಿಕದ ಚುನಾವಣೆಯಲ್ಲಿ ಮತಯಂತ್ರ ಬಳಕೆ ಮಾಡದಂತೆ ಸಲಹೆ ನೀಡಿದ್ದಾರೆ.
ಇವಿಎಂ ಬ್ಲಾಕ್ ಬಾಕ್ಸ್ ಇದ್ದಂತೆ- ರಾಹುಲ್
ಈ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಭಾರತದಲ್ಲಿ ಇವಿಎಂಗಳು ಬ್ಲಾಕ್ ಬಾಕ್ಸ್ ಇದ್ದಂತೆ. ಅವುಗಳನ್ನು ಪರಿಶೀಲಿಸಲು ಯಾರಿಗೂ ಅವಕಾಶ ಇಲ್ಲ. ಚುನಾವಣೆ ಪಾರದರ್ಶಕ ಬಗ್ಗೆ ಗಂಭೀರ ಪ್ರಶ್ನೆ ಎದುರಾಗಿದ್ದರೂ ಚುನಾವಣಾ ಆಯೋಗ ಆರೋಪ ಅಲ್ಲಗಳೆಯುತ್ತಿದೆ. ಹೊಣೆಗಾರಿಕೆ ಇಲ್ಲದಿರುವ ವ್ಯವಸ್ಥೆಯಲ್ಲಿ ವಂಚನೆ ಅಪಾಯ ಹೆಚ್ಚಿದೆ ಎಂದು ಹೇಳಿದ್ದಾರೆ. ಅಲಾನ್ ಮಸ್ಕ್ ಮಾಡಿರುವ ಆರೋಪದ ಬಗ್ಗೆ ಮಾಜಿ ಸಚಿವ ರಾಜೀವ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದು, ಇವಿಎಂ ಬಗ್ಗೆ ಮಸ್ಕ್ ಮಾಡಿರುವ ಆರೋಪಗಳಿಗೆ ಯಾವುದೇ ಆಧಾರ ಇಲ್ಲ. ಯಾವುದೋ ದೇಶದಲ್ಲಿ ಅಕ್ರಮ ಆಗಿದೆಯೆಂದು ಅದನ್ನು ಭಾರತಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ. ಅಮೆರಿಕದಂತಹ ಇಂಟರ್ನೆಟ್ ಆಧರಿತ ವೋಟಿಂಗ್ ವ್ಯವಸ್ಥೆಯುಳ್ಳ ದೇಶಕ್ಕೆ ಇವರ ಮಾತು ಅನ್ವಯ ಆಗಬಹುದು. ಭಾರತದಲ್ಲಿ ಯಾವುದೇ ನೆಟ್ವರ್ಕ್, ಬ್ಲೂಟೂತ್ ಸಂಪರ್ಕ ಇಲ್ಲದ ರೀತಿ ಇವಿಎಂ ರೂಪಿಸಿದ್ದು, ಹ್ಯಾಕ್ ಮಾಡುವುದು ಸಾಧ್ಯವಿಲ್ಲ ಎಂದಿದ್ದಾರೆ.
ಇವಿಎಂ ಓಪನ್ ಮಾಡಲು ಒಟಿಪಿ ಬಳಕೆ ಆರೋಪ
ಇದೇ ವೇಳೆ, ಮುಂಬೈನಲ್ಲಿ ಮತಯಂತ್ರ ತೆರೆಯಲು ಓಟಿಪಿ ಬಳಕೆ ಮಾಡಿದ್ದಾರೆಂಬ ಆರೋಪಕ್ಕೀಡಾಗಿರುವ ಶಿವಸೇನೆ ಏಕನಾಥ ಶಿಂಧೆ ಬಣದ ಸಂಸದ ರವೀಂದ್ರ ವೈಕರ್ ಅವರ ಸೋದರಳಿಯ ಮಂಗೇಶ್ ಪಂಡಿಲ್ಕರ್ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮತ ಎಣಿಕೆ ಕೇಂದ್ರದಲ್ಲಿ ಮಂಗೇಶ್ ಮೊಬೈಲ್ ಬಳಕೆ ಮಾಡಿದ್ದರು, ಇವಿಎಂ ಯಂತ್ರ ಓಪನ್ ಮಾಡಲು ಓಟಿಪಿ ಬಳಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಪ್ರಕರಣ ಸಂಬಂಧಿಸಿ ತನಿಖೆಗೆ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ರವೀಂದ್ರ ವೈಕರ್ ಅವರು ಸಮೀಪದ ಪ್ರತಿಸ್ಪರ್ಧಿ ಶಿವಸೇನೆಯ ಉದ್ಧವ್ ಬಣದ ಅಭ್ಯರ್ಥಿ ಅಮೋಲ್ ಗಜಾನನ ಕೀರ್ತೀಕರ್ ಅವರನ್ನು 48 ಮತಗಳಿಂದ ಸೋಲಿಸಿದ್ದರು.
Tesla CEO Elon Musk’s call to scrap Electronic Voting Machines (EVMs) Sunday triggered a fresh debate in India on their reliability with Congress leader Rahul Gandhi flagging “serious concerns” about transparency in the country’s electoral process.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 06:14 pm
Mangalore Correspondent
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm