ಬ್ರೇಕಿಂಗ್ ನ್ಯೂಸ್
14-06-24 10:51 am HK News Desk ದೇಶ - ವಿದೇಶ
ತಿರುಪತಿ, ಜೂನ್ 14: ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು, ಇಲ್ಲಿ 'ಓಂ ನಮೋ ವೆಂಕಟೇಶಾಯ' ಘೋಷಣೆ ಮಾತ್ರ ಕೇಳಿಬರಬೇಕು ಎಂದು ಆಂಧ್ರ ಪ್ರದೇಶ ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಅವರು ತಿರುಮಲ ತಿರುಪತಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅಲ್ಲದೇ ಸಿಎಂ ಆದ ಬಳಿಕ ತಿರುಮಲದಲ್ಲೇ ಮೊದಲ ಸುದ್ದಿಗೋಷ್ಠಿಯನ್ನು ನಡೆಸಿದರು.
ವೆಂಕಟೇಶ್ವರ ನಮ್ಮ ಕುಲದೈವ, ಅವರಿಂದಲೇ ಕಾರ್ಯಕ್ರಮ ಆರಂಭವಾಗುತ್ತದೆ. ತಿಮ್ಮಪ್ಪನ ಆಶೀರ್ವಾದದಿಂದ ಹಂತ ಹಂತವಾಗಿ ಬೆಳೆದಿದ್ದೇನೆ. ಈ ಹಿಂದೆ ಶ್ರೀ ವೆಂಕಟೇಶ್ವರನಿಗೆ ರೇಷ್ಮೆ ವಸ್ತ್ರ ಸಮರ್ಪಿಸಲು ಬರುವಾಗ ಬಾಂಬ್ ಸ್ಫೋಟ ಮಾಡಿದ್ದರು. ಆಗಲೂ ನನ್ನ ಕುಲದೈವವೇ ನನ್ನನ್ನು ಕಾಪಾಡಿತ್ತು. ಪ್ರತಿ ವರ್ಷ ಮೊಮ್ಮಗ ದೇವಾಂಶ್ ಜನ್ಮದಿನದಂದು ತಿರುಮಲದಲ್ಲಿ ಅನ್ನದಾನ ನಡೆಸುತ್ತೇವೆ. ತಿರುಮಲವು ಪವಿತ್ರ ಕ್ಷೇತ್ರವಾಗಿದ್ದು ತಿರುಮಲದಲ್ಲಿದ್ದರೆ ವೈಕುಂಠದಲ್ಲಿದ್ದಂತೆ ಭಾಸವಾಗುತ್ತದೆ, ಇಂತಹ ಕ್ಷೇತ್ರವನ್ನು ಅಪವಿತ್ರಗೊಳಿಸುವುದು ಸರಿಯಲ್ಲ. ಹಿಂದಿನ ಸರ್ಕಾರ ಮಾಡಿದ್ದ ಅಪದ್ಧಗಳನ್ನು ಇಲ್ಲಿಂದಲೇ ಶುದ್ಧೀಕರಿಸಲು ತೊಡಗುತ್ತೇನೆ ಎಂದು ನಾಯ್ಡು ತಿಳಿಸಿದ್ದಾರೆ.
ತಿರುಮಲವನ್ನು ಕೆಲವರು ಹಣ ಗಳಿಸುವ ಕೇಂದ್ರವನ್ನಾಗಿ ಮಾಡಿದ್ದರು. ಭಕ್ತರಿಂದ ಸುಲಿಗೆ ಮಾಡ್ತಿದ್ದರು, ಕಾಳಸಂತೆಯಲ್ಲಿ ಟಿಕೆಟ್ ಮಾರಾಟಕ್ಕೆ ಅವಕಾಶ ನೀಡಿದ್ದರು. ನಮ್ಮ ಸರ್ಕಾರದಲ್ಲಿ ಇವೆಲ್ಲ ಇರೋದಿಲ್ಲ. ಹಿಂದಿನ ಸರ್ಕಾರವು ಇಲ್ಲಿ ಗಾಂಜಾ, ಅನ್ಯಧರ್ಮದ ಪ್ರಚಾರ, ಮದ್ಯ ಮತ್ತು ಮಾಂಸ ಮಾರಾಟಕ್ಕೆ ಅವಕಾಶ ಕೊಟ್ಟು ಅಸಭ್ಯವಾಗಿ ವರ್ತಿಸಿತ್ತು. ದೇವಸ್ಥಾನ ಸಮಿತಿಯಲ್ಲಿ ಇಷ್ಟ ಬಂದವರಿಗೆ ಸ್ಥಾನ ಕೊಟ್ಟು ಮದುವೆ ಸಮಾರಂಭಗಳಿಗೆ ವೆಂಕಟೇಶ್ವರ ಸ್ವಾಮಿಯನ್ನು ಮಾರಾಟ ಮಾಡುವ ಕೆಲಸ ಮಾಡಿದ್ದರು. ರಕ್ತಚಂದನ ಸ್ಮಗ್ಲಿಂಗ್ ಮಾಡುವವರಿಗೆ ಸೀಟುಗಳನ್ನ ಕೊಟ್ಟಿದ್ದರು. ದೃಢ ಸಂಕಲ್ಪದಿಂದ ಕೆಟ್ಟ ಸಂಸ್ಕೃತಿಗಳನ್ನು ದೂರ ಮಾಡ್ತೀನಿ ಎಂದು ನಾಯ್ಡು ಹೇಳಿದ್ದಾರೆ.
ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು, ಇಲ್ಲಿ 'ಓಂ ನಮೋ ವೆಂಕಟೇಶಾಯ' ಘೋಷಣೆ ಮಾತ್ರ ಕೇಳಿಬರಬೇಕು. ಹಿಂದಿನ ಸರ್ಕಾರ ಈ ಪವಿತ್ರ ಜಾಗವನ್ನು ಅಪವಿತ್ರಗೊಳಿಸುವ ಕೆಲಸ ಮಾಡಿತ್ತು. ಅದು ಸರಿಯಲ್ಲ. ನಾವು ಈಗ ಅದನ್ನು ಸರಿಪಡಿಸುತ್ತೇವೆ. ಬೆಳಗಿನ ಜಾವ ಇಲ್ಲಿ ಸುಪ್ರಭಾತ, ನಮೋ ವೆಂಕಟೇಶಾಯ ನಮಃ ಘೋಷಣೆ ಮಾತ್ರ ಕೇಳಬೇಕು ಎಂದು ಹೇಳಿದರು.
ಹಿಂದಿನ ಸರ್ಕಾರದಲ್ಲಿ ಕೇಸುಗಳನ್ನು ಹಾಕಿ ಹೆದರಿಸುವ ಪರಿಸ್ಥಿತಿ ಇತ್ತು. ಈ ಸರ್ಕಾರದಲ್ಲಿ ಜನಪರ ಆಡಳಿತ ಮುಂದುವರಿಯಲಿದೆ. ಎಲ್ಲಾ ಜನರಿಗೂ ನ್ಯಾಯ ಸಿಗುತ್ತೆ, ಹಿಂದಿನ 5 ವರ್ಷಗಳು, ಅವರು ಮಾಡಿದ ಹಾನಿಯಿಂದ ರಾಜ್ಯ 30 ವರ್ಷ ಹಿಂದಕ್ಕೆ ಹೋಗಿದೆ. ಆದ್ದರಿಂದ ಜನರು ಸರ್ಕಾರದ ಜೊತೆ ಕೈಜೋಡಿಸಬೇಕು. ಬಡತನ ನಿರ್ಮೂಲನೆಗೆ ಶ್ರಮಿಸಬೇಕು. ಅಮರಾವತಿ ಹಾಗೂ ಪೋಲವರಂ ಡ್ಯಾಂ ನಿರ್ಮಾಣ ಪೂರ್ಣಗೊಳ್ಳಬೇಕು ಎಂದು ತಮ್ಮ ಮುಂದಿನ ಯೋಜನೆಗಳ ವಿವರಣೆ ನೀಡಿದರು.
A day after taking over as Andhra Pradesh Chief Minister, Chandrababu Naidu visited the Venkateswara Swamy Temple in Tirumala on Thursday. He offered prayers at the temple and vowed to "cleanse" the Tirupati-Tirumala administration. He alleged that there were irregularities in the Tirumala Tirupati Devasthanams (TTD), a trust that oversees the temple, during the Jagan Mohan Reddy government. The TDP chief said he was committed to eliminating corruption and protecting 'Hindu Dharma' in Tirumala.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm