ಬ್ರೇಕಿಂಗ್ ನ್ಯೂಸ್
13-06-24 12:49 pm HK News Desk ದೇಶ - ವಿದೇಶ
ನವದೆಹಲಿ, ಜೂನ್.13: ಕುವೈತ್ ಸಿಟಿಯಲ್ಲಿ ನಡೆದಿರುವ ಅಗ್ನಿ ದುರಂತದಲ್ಲಿ 50ಕ್ಕೂ ಹೆಚ್ಚು ಮಂದಿ ಮಡಿದಿದ್ದು, ಆ ಪೈಕಿ 42 ಭಾರತೀಯರು ಎನ್ನುವುದು ದೃಢಪಟ್ಟಿದೆ. ದಕ್ಷಿಣ ಕುವೈತಿನ ಮಂಗಾಫ್ ನಗರದಲ್ಲಿ ಅಪಾರ್ಟ್ಮೆಂಟ್ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡು ಅದರಲ್ಲಿ ಉಳಿದುಕೊಂಡಿದ್ದ ಭಾರತದ ನೌಕರರು ಸಾವು ಕಂಡಿದ್ದಾರೆ.
ಮೃತಪಟ್ಟ ಭಾರತದ 42 ಮಂದಿಯಲ್ಲಿ ಕೇರಳದ 19 ನಿವಾಸಿಗಳೆಂದು ತಿಳಿದುಬಂದಿದೆ. ಕೇರಳ ಸರಕಾರ 19 ಮಂದಿ ಮಲಯಾಳಿಗಳೆಂದು ದೃಢಪಡಿಸಿದ್ದು, ಕೇರಳ ಆರೋಗ್ಯ ಮಂತ್ರಿ ವೀಣಾ ಜಾರ್ಜ್ ಮತ್ತು ಅಧಿಕಾರಿಗಳು ಕುವೈಟ್ ತೆರಳಿದ್ದಾರೆ. ಇದೇ ವೇಳೆ, ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಮಂತ್ರಿ ಕೀರ್ತಿ ವರ್ಧನ್ ಸಿಂಗ್ ಅಧಿಕಾರಿಗಳ ತಂಡದೊಂದಿಗೆ ಕುವೈಟ್ ತಲುಪಿದ್ದು ದುರಂತದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳ ರಕ್ಷಣೆ, ಮಡಿದವರ ಮೃತದೇಹಗಳನ್ನು ಹುಟ್ಟೂರಿಗೆ ತಲುಪಿಸಲು ಮುಂದಾಗಿದೆ.
ಶವಗಳು ಅರೆಬರೆ ಸುಟ್ಟು ಹೋಗಿರುವುದರಿಂದ ಗುರುತು ಪತ್ತೆ ಸಾಧ್ಯವಾಗಿಲ್ಲ. ಅಪಾರ್ಟ್ಮೆಂಟ್ ಕಟ್ಟಡದಲ್ಲಿ 195 ಮಂದಿ ಭಾರತೀಯರೇ ಇದ್ದರು. ಅದರಲ್ಲಿ ಅತಿ ಹೆಚ್ಚು ಕೇರಳದ ನಿವಾಸಿಗಳೇ ಆಗಿದ್ದಾರೆ. ಎನ್ ಬಿಟಿಸಿ ಗ್ರೂಪ್ ಕಂಪನಿ ಕೇರಳ ಮೂಲದ ಕೆಜಿ ಅಬ್ರಹಾಂ ಎಂಬವರಿಗೆ ಸೇರಿದ್ದಾಗಿದ್ದು, ಕೇರಳ, ತಮಿಳುನಾಡಿನ ಸಾಮಾನ್ಯ ಕುಟುಂಬದ ನಿವಾಸಿಗಳು ಕಂಪನಿಯಲ್ಲಿ ಬೇರೆ ಬೇರೆ ಉದ್ಯೋಗದಲ್ಲಿ ಸೇರಿಕೊಂಡಿದ್ದರು. ಕುಟುಂಬ ರಹಿತವಾಗಿದ್ದವರೆಲ್ಲ ಈ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ನೆಲೆಸಿದ್ದರು. ಕೇರಳ ಸರಕಾರ ಮೃತ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಹಾಗೂ ಗಾಯಗೊಂಡವರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ಘೋಷಿಸಿದೆ.
ಮಡಿದವರಲ್ಲಿ ಹೆಚ್ಚಿನವರು ತಮ್ಮ ಕುಟುಂಬದ ಪಾಲಿಗೆ ಆಸರೆಯಾಗಿದ್ದವರು. ಕೊಟ್ಟಾಯಂ ಜಿಲ್ಲೆಯ ಪಂಪಾಡಿ ಎಂಬಲ್ಲಿನ ನಿವಾಸಿ 29 ವರ್ಷದ ಸ್ಟೀಫನ್ ಅಬ್ರಹಾಂ ಸಾಬು ಇಂಜಿನಿಯರ್ ಆಗಿದ್ದವರು. ತಾಯಿ ಮತ್ತು ಇಬ್ಬರು ಸೋದರರನ್ನು ಅಗಲಿದ್ದು, ಬೆಂಕಿಯಲ್ಲಿ ಸಿಲುಕಿ ಪ್ರಾಣ ಕಳಕೊಂಡಿದ್ದಾರೆ. ಕಾಸರಗೋಡಿನ 34 ವರ್ಷದ ರಂಜಿತ್ ಒಂದೂವರೆ ವರ್ಷದ ಹಿಂದೆ ಊರಿನಲ್ಲಿ ಗೃಹ ಪ್ರವೇಶ ಮುಗಿಸಿ ಕುವೈಟ್ ತೆರಳಿದ್ದರು. ಮುಂದಿನ ಜುಲೈ ರಜೆಯಲ್ಲಿ ಊರಿಗೆ ಬರುತ್ತೇನೆಂದು ಹೇಳಿದ್ದ ರಂಜಿತ್ ಬೆಂಕಿಯಲ್ಲಿ ಲೀನವಾಗಿದ್ದಾರೆ. ರಂಜಿತ್ ಸಾವಿನ ಸುದ್ದಿ ಆತನ ಊರಲ್ಲಿ ಶೋಕಕ್ಕೀಡು ಮಾಡಿದೆ. ಕಾಸರಗೋಡಿನ ತೃಕ್ಕರಿಪುರದ ಕೇಳು ಪೊನ್ಮಲೇರಿ ಎಂಬ ಮಹಿಳೆ ಕಂಪನಿಯಲ್ಲಿ ಪ್ರೊಡಕ್ಷನ್ ಇಂಜಿನಿಯರ್ ಆಗಿದ್ದು, ದುರಂತದಲ್ಲಿ ಮೃತಪಟ್ಟಿದ್ದಾರೆ. ಇವರ ಪತಿ ಕೆಎಂ ಮಾಣಿ ಪಂಚಾಯತ್ ಉದ್ಯೋಗಿಯಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.
ಪುನಲೂರು ನಿವಾಸಿ ಸಾಜನ್ ಜಾರ್ಜ್ ಎಂಟೆಕ್ ಪೂರೈಸಿ ಒಂದೂವರೆ ತಿಂಗಳ ಹಿಂದೆ ಕುವೈಟ್ ತೆರಳಿದ್ದರು. ಕೇರಳ ಮೂಲದ ಎನ್ ಬಿಟಿಸಿ ಕಂಪನಿಯಲ್ಲಿ ಜೂನಿಯರ್ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು. ಸಾಜನ್ ತಂದೆ, ತಾಯಿ ಮತ್ತು ಒಬ್ಬಳು ಸೋದರಿಯನ್ನು ಬಿಟ್ಟು ದುರಂತ ಸಾವಿಗೀಡಾಗಿದ್ದಾರೆ. ಈ ಕುಟುಂಬಕ್ಕೆ ಸಾಜನ್ ದುಡಿಮೆಯೇ ಆಧಾರವಾಗಿತ್ತು. ಕೊಲ್ಲಂ ನಿವಾಸಿ ಲೂಕೋಸ್ ಕೂಡ ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳನ್ನು ತಬ್ಬಲಿಯಾಗಿಸಿ ಸಾವು ಕಂಡಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ಪಂದಳಂ ನಿವಾಸಿ 32 ವರ್ಷದ ಆಕಾಶ್ ನಾಯರ್ ಎಂಟು ವರ್ಷಗಳಿಂದ ಕುವೈಟ್ ನಲ್ಲಿದ್ದು ವರ್ಷದ ಹಿಂದೆ ರಜೆಯಲ್ಲಿ ಬಂದು ಹೋಗಿದ್ದರು. ತಾಯಿಗೆ ಏಕೈಕ ಮಗನಾಗಿದ್ದ ಆಕಾಶ್ ಸಣ್ಣ ಪ್ರಾಯದಲ್ಲೇ ಸಾವಿನ ದಾರಿ ಹಿಡಿದಿದ್ದಾನೆ.
ಪತ್ತನಂತಿಟ್ಟ ಜಿಲ್ಲೆಯ ಕೊನ್ನಿ ನಿವಾಸಿ ಸಾಜು ವರ್ಗೀಸ್ 22 ವರ್ಷಗಳಿಂದ ಕುವೈಟ್ ಉದ್ಯೋಗದಲ್ಲಿದ್ದು ಅಗ್ನಿ ದುರಂತದಲ್ಲಿ ಪ್ರಾಣ ಕಳಕೊಂಡಿದ್ದು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪಂದಳಂ ನಿವಾಸಿ ಆಕಾಶ್ ಎಂಬ 23 ವರ್ಷದ ಇನ್ನೊಬ್ಬ ಯುವಕನೂ ದುರಂತದಲ್ಲಿ ಸಾವಿಗೀಡಾಗಿದ್ದಾನೆ. ಚೆಂಗನಾಶ್ಶೇರಿಯ ಮೆಕ್ಯಾನಿಕಲ್ ಇಂಜಿನಿಯರ್ ಶ್ರೀಹರಿ ಪ್ರದೀಪ್ ಕೂಡ ದುರಂತದಲ್ಲಿ ಮಡಿದಿದ್ದು, ಆತನ ತಂದೆಯೂ ಕುವೈಟ್ ನಲ್ಲೇ ಉದ್ಯೋಗದಲ್ಲಿದ್ದು ಬದುಕುಳಿದಿದ್ದಾರೆ.
ಕೊಲ್ಲಂ ಜಿಲ್ಲೆಯ ಉಮರುದ್ದೀನ್ ಶಮೀರ್ ಐದು ವರ್ಷಗಳಿಂದ ಕುವೈಟಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಅಗ್ನಿ ದುರಂತದಲ್ಲಿ ಸಾವಿಗೀಡಾಗಿದ್ದು ಆತನ ಕುಟುಂಬ ಶಾಕ್ ಆಗಿದೆ. ದುರಂತದ ಬಗ್ಗೆ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಪ್ರತಿಕ್ರಿಯಿಸಿದ್ದು, ಬೆಂಕಿ ದುರಂತದಿಂದ ಇಡೀ ಜಗತ್ತೇ ಶಾಕ್ ಆಗಿದೆ. ನಮ್ಮ ಕಾಸರಗೋಡಿನ ನಾಲ್ವರು ಸಾವು ಕಂಡಿದ್ದಾರೆ. ಸರಕಾರ ಮೃತರ ಸಹಾಯಕ್ಕೆ ಧಾವಿಸಬೇಕು ಎಂದು ಹೇಳಿದ್ದಾರೆ. ಎನ್ ಬಿಟಿಸಿ ಗ್ರೂಪ್ ಕುವೈತ್ ದೇಶದಲ್ಲಿ ಅತಿ ದೊಡ್ಡ ಕಟ್ಟಡ ನಿರ್ಮಾಣದ ಕಂಪನಿಯಾಗಿದ್ದು ಅತಿ ಹೆಚ್ಚು ಭಾರತೀಯರೇ ಇದರಲ್ಲಿ ಕೆಲಸ ಮಾಡುತ್ತಿದ್ದಾರೆ.
The death toll of Indians in the Kuwait fire surged to at least 42 on Wednesday, as a massive blaze engulfed a building housing foreign workers. Out of the total 49 foreign workers killed, some 42 victims were confirmed to be Indian nationals, most of whom were breadwinners for their families
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 06:14 pm
Mangalore Correspondent
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm