ಪಾಸ್ವಾನ್, ಕುಮಾರಸ್ವಾಮಿಗೆ ಸಂಪುಟ ದರ್ಜೆ, ಏಳು ಸ್ಥಾನ ಇರುವ ನಮಗೇಕಿಲ್ಲ ; ಏಕನಾಥ ಶಿಂಧೆ ಬಣ ಬೇಸರ 

11-06-24 02:11 pm       HK News Desk   ದೇಶ - ವಿದೇಶ

ಮೋದಿ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ದೊರೆಯದೇ ಇದ್ದುದಕ್ಕೆ ಶಿವಸೇನೆ ಏಕನಾಥ ಶಿಂಧೆ ಬಣದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿಯ ನಾಯಕರು ಲೇವಡಿ ಮಾಡಿದ್ದಾರೆ.

ಮುಂಬೈ, ಜೂನ್ 11: ಮೋದಿ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ದೊರೆಯದೇ ಇದ್ದುದಕ್ಕೆ ಶಿವಸೇನೆ ಏಕನಾಥ ಶಿಂಧೆ ಬಣದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿಯ ನಾಯಕರು ಲೇವಡಿ ಮಾಡಿದ್ದಾರೆ.
 
ನಾವು ಮೋದಿ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸೇರಿ ಮೂರು ಸ್ಥಾನಗಳ ನಿರೀಕ್ಷೆಯಲ್ಲಿದ್ದೆವು. ಎನ್‌ಡಿಎನಲ್ಲಿ ಟಿಡಿಪಿ, ಜೆಡಿಯು ಅನಂತರ 7 ಕ್ಷೇತ್ರ ಗೆದ್ದ ಶಿವಸೇನೆ (ಶಿಂಧೆ ಬಣ) 3ನೇ ಸ್ಥಾನದಲ್ಲಿದೆ. ನಮಗಿಂತ ಕಡಿಮೆ ಕ್ಷೇತ್ರಗಳಲ್ಲಿ ಗೆದ್ದ ಚಿರಾಗ್‌ ಪಾಸ್ವಾನ್‌, ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌, ಜಿತನ್‌ರಾಮ್‌ ಮಾಂಜಿ ಅವರ ಪಕ್ಷಗಳಿಗೆ ಸಂಪುಟ ಸಚಿವ ಸ್ಥಾನ ದೊರಕಿದೆ. ನಮಗೆ ಮಾತ್ರ ರಾಜ್ಯ ಖಾತೆ ದೊರಕ್ಕಿದ್ದು ಬೇಸರ ತಂದಿದೆ ಎಂದು ಶಿವಸೇನೆ ಸಂಸದ ಶ್ರೀರಂಗ ಬಾರ್ನೆ ಅಸಮಾಧಾನ ಹೊರ ಹಾಕಿದ್ದಾರೆ. ಎನ್‌ಸಿಪಿ (ಅಜಿತ್‌ ಪವಾರ್‌) ಬಣವೂ ಇದೇ ರೀತಿ ನೋವು ಹೊರಹಾಕಿದ್ದಾರೆ. 

ಈ ಕುರಿತು ಲೇವಡಿ ಮಾಡಿದ ಮಹಾ ವಿಕಾಸ ಅಘಾಡಿಯ ನಾಯಕರು, ಬಿಜೆಪಿ ಯೂಸ್‌ ಆ್ಯಂಡ್‌ ಥ್ರೋ ಪಾಲಿಸಿ ಅನುಸರಿಸುತ್ತದೆ. ಬೇರೆಯವರಿಗೆ ಗುಲಾಮರಾದರೇ ಇದೇ ಗತಿ ಎಂದು ಉದ್ಧವ್‌ ಠಾಕ್ರೆ ಬಣದ ನಾಯಕ ಸಂಜಯ ರಾವತ್‌ ಲೇವಡಿ ಮಾಡಿದ್ದಾರೆ. ಅಜಿತ್‌ ಪವಾರ್‌ ಕೂಡ ಈ ಅಂಶವನ್ನು ಅರಿತುಗೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ.

Eknath Shinde's Shiv Sena has expressed its displeasure over the MoS post it has been given in the Modi Cabinet, India Today reported on Monday. The BJP ally, which has won 7 Lok Sabha seats from Maharashtra, said it expects a Cabinet post. On Sunday, Shiv Sena's Pratap Jadhav was sworn in as Minister of State (Independent Charge).