Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿ ಇದೆ, ಪಾಕಿಸ್ತಾನ ಜೈ ಎನ್ನುವವರು ಅಲ್ಲಿಗೇ ಹೋಗಲಿ ; ದೇಶದ್ರೋಹ ಕಲಿಸುವ ಮದರಸಾಗೆ ಅನುದಾನ ಕೊಟ್ಟಿದ್ದರಿಂದಲೇ ಇಂಥ ಸ್ಥಿತಿಯಾಗಿದೆ '

16-03-25 10:32 pm       HK News Desk   ಕರ್ನಾಟಕ

ಬಿಡದಿಯಲ್ಲಿ ಜೈ ಪಾಕಿಸ್ತಾನ ಎಂಬ ಬರಹ ಬರೆದಿರುವ ವಿಚಾರದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಜಿಂದಾಬಾದ್ ಅಂತ ಮುಸ್ಲಿಂ ಕಿಡಿಗೇಡಿಗಳು, ದೇಶದ್ರೋಹಿಗಳು ಬರೆದು ಕೆಣಕುತ್ತಿದ್ದಾರೆ. ಪಾಕಿಸ್ತಾನ ಬೇಕು ಅನ್ನುವಂತವರು ಪಾಕಿಸ್ತಾನಕ್ಕೆ ಹೋಗಿ ನೋಡಿ ಎಂದು ಹೇಳಿದ್ದಾರೆ. 

ದಾವಣಗೆರೆ, ಮಾ.16 : ಬಿಡದಿಯಲ್ಲಿ ಜೈ ಪಾಕಿಸ್ತಾನ ಎಂಬ ಬರಹ ಬರೆದಿರುವ ವಿಚಾರದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಜಿಂದಾಬಾದ್ ಅಂತ ಮುಸ್ಲಿಂ ಕಿಡಿಗೇಡಿಗಳು, ದೇಶದ್ರೋಹಿಗಳು ಬರೆದು ಕೆಣಕುತ್ತಿದ್ದಾರೆ. ಪಾಕಿಸ್ತಾನ ಬೇಕು ಅನ್ನುವಂತವರು ಪಾಕಿಸ್ತಾನಕ್ಕೆ ಹೋಗಿ ನೋಡಿ ಎಂದು ಹೇಳಿದ್ದಾರೆ. 

ಬಿಕರ್ ಚೋಡು ಪಾಕಿಸ್ತಾನ ದಿವಾಳಿ ಆಗಿದೆ. ಸಾಲ ಸೋಲ ಇಲ್ಲ, ಕಳ್ಳತನ ದರೋಡೆ ಮಾಡಿ, ಬಾಂಬ್ ಹಾಕಿ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಇದೆ.‌ ಹಂದಿ ನಾಯಿಗಳ ತರ ಜೀವನ ಮಾಡ್ತಾ ಇದ್ದಾರೆ. ಈ ದೇಶದಲ್ಲಿ ಹುಟ್ಟಿ ಅನ್ನ ತಿಂದು ದೇಶದ್ರೋಹಿ ಕೆಲಸ ಮಾಡ್ತಾ ಇದ್ದೀರಿ. ಗೋಡೆ ಮೇಲೆ ಬರೆದವರನ್ನ ನಿಶ್ಚಿತವಾಗಿ ಕಂಡು ಹಿಡಿಯಬಹುದು. ಎಲ್ಲೆಡೆ ಸಿಸಿ ಕ್ಯಾಮರಗಳಿವೆ, ಬಿಡದಿ ಪೊಲೀಸರು ಈ ಕೂಡಲೆ ದ್ರೋಹಿಗಳನ್ನ ಒದ್ದು ಒಳಗಡೆ ಹಾಕಬೇಕು ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಸರ್ಕಾರ ಇರೋದೇ ಮುಸ್ಲಿಮರ ರಕ್ಷಣೆಗಾಗಿ. ಮುಸ್ಲಿಮರಿಗೆ ಟೆಂಡರ್ ನಲ್ಲಿ ಮೀಸಲಾತಿ ಕೊಡುತ್ತಿದ್ದಾರೆ. ಬಜೆಟ್ ನಲ್ಲಿ ಎಸ್ ಸಿ, ಎಸ್ಟಿ ಅನುದಾನ ಕಸಿದುಕೊಂಡು ಇವರಿಗೆ ಕೊಟ್ಟಿದ್ದಾರೆ. ಎಸ್ಸಿ, ಎಸ್ಟಿಗಳು ಎಲ್ಲಿಗೆ ಹೋಗಬೇಕು, ಇದು ಸರಿಯಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮುಸ್ಲಿಮರು ಎದ್ದು ಕುಣಿತಾ ಇದಾರೆ. ಇವರನ್ನ ಹದ್ದು ಬಸ್ತ್ ನಲ್ಲಿ ನೀವು ಇಡ್ತಿರೋ, ಇಲ್ಲವೇ ನಾವು ಇಡಬೇಕೋ ಅನ್ನೋದು ನಿಶ್ಚಯ ಮಾಡಿ ಎಂದು ಮುತಾಲಿಕ್ ಸವಾಲ್ ಹಾಕಿದರು. 

ಹಿಂದುಗಳನ್ನು ಕಾಫಿರ್ ಎಂದು ಕಲಿಸುತ್ತಾರೆ ! 

ಬಿಡದಿಯಲ್ಲಿ ದೇಶದ್ರೋಹಿಗಳು ಪಾಕಿಸ್ತಾನಕ್ಕೆ ಜೈ ಎಂದು ಬರೆದಿರುವುದಕ್ಕೆ ವಿಜಯಪುರದಲ್ಲಿ ಶಾಸಕ ಯತ್ನಾಳ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಬಜೆಟ್, ಹಿಂದೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನೋಡಿದರೆ‌ ಮುಸ್ಲಿಮರಿಗೆ ರಾಜ್ಯ ಸರ್ಕಾರದ ಬಗ್ಗೆ ಭಯವೇ ಇಲ್ಲದಂತಾಗಿದೆ. ಇಷ್ಟು ಪಾಕಿಸ್ತಾನದ ಪರವಾಗಿ ಬರೆದರೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕರ್ನಾಟಕ ಪಾಕಿಸ್ತಾನದ ಒಂದು ಭಾಗವಾದಂತಾಗಿದೆ. 

ಸರ್ಕಾರಿ ಕಾಲೇಜುಗಳಿಗೆ ಬಿಲ್ಡಿಂಗ್ ಇಲ್ಲ, ಪ್ರಿನ್ಸಿಪಾಲ್ ಗಳಿಲ್ಲ. ಆದರೆ ಮದರಸಾಗಳಿಗೆ ಹಣ ಕೊಡುತ್ತಾರೆ. ಅಲ್ಲಿ ಏನು ಕಲಿಸುತ್ತಾರೆ, ದೇಶದ್ರೋಹಿ ವಿಚಾರಗಳಿರುತ್ತವೆ, ಅಲ್ಲಿ ಕಲಿತವರು ಪಾಕಿಸ್ತಾನದ ಪರವಾಗಿ ಮಾತನಾಡುತ್ತಾರೆ. ಇಸ್ಲಾಂ ಎಂದರೆ ಎಲ್ಲ‌ ಧರ್ಮೀಯರಿಗೆ ನಾಶ ಮಾಡಬೇಕು, ಲವ್ ಜಿಹಾದ್ ಮಾಡಬೇಕು ಎನ್ನುತ್ತಾರೆ. ಅಂತವರಿಗೆ ಸಿದ್ದರಾಮಯ್ಯ ಸರ್ಕಾರ ಹಣ ಕೊಡುತ್ತದೆ.

ಅಲ್ಲಿಯೂ ರಾಷ್ಟ್ರಗೀತೆ ಹಾಡಬೇಕು, ಆದರೆ ಅಲ್ಲಿ ರಾಷ್ಟ್ರ ಗೀತೆ ಏನೂ ಕಲಿಸೋದಿಲ್ಲ. ಹಿಂದುಗಳೆಂದರೆ ಕಾಫಿರರು ಎಂದು ಅಲ್ಲಿ ಕಲಿಸುತ್ತಾರೆ. ಅವರಿಗೆ ಕಂಪ್ಯೂಟರ್ ಕೊಟ್ಟರೆ ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸುತ್ತಾರೆ. ಇದೆಲ್ಲವನ್ನು ನೋಡಿದರೆ ಮುಸ್ಲಿಮರಿಗೆ ಧೈರ್ಯ ಬಂದಿದೆ. ಸಿದ್ದರಾಮಯ್ಯ ಇರುವವರೆಗೂ ನಮಗ್ಯಾರೂ ಏನೂ ಮಾಡಲಾಗಲ್ಲ ಎಂದು. ಹೀಗಾಗಿ ಈ ಪರಿಸ್ಥಿತಿ ಬಂದಿದೆ.

ಬಿಜೆಪಿಯವರು ಇದಕ್ಕೆ ಕಡಿವಾಣ ಹಾಕಲು ವಿಫಲವಾಗಿದ್ದಾರೆ. ಹಿಂದೆ ಡಿಜೆ ಹಳ್ಳಿಯಲ್ಲಿ ನಾಲ್ಕು ಎನ್ ಕೌಂಟರ್, ಹುಬ್ಬಳ್ಳಿ ಯಲ್ಲಿ ನಾಲ್ಕು ಎನ್ಕೌಂಟರ್ ಮಾಡಿದ್ದರೆ ಎಲ್ಲ ಸರಿಯಾಗುತ್ತಿತ್ತು. ಒಬ್ಬ ಮುಲ್ಲಾ ಬಂದು ಪೋಲಿಸ್ ಜೀಪ್ ಮೇಲೆ ಕುಂತು ಡ್ಯಾನ್ಸ್ ಹೊಡಿಯುತ್ತಾನೆ‌. ನಮ್ಮವರು ಮಾಡಿದ ತಪ್ಲಿನಿಂದಲೇ ನಮ್ಮ ಹಿಂದೂ ಜನ‌ ನಾರಾಜ್ ಆದರು, ನಮ್ಮವರು ಮನೆಯಲ್ಲಿ ಕುಂತರು. ನಮ್ಮ ಹಿಂದುಗಳಿಂದಲೇ ನಾವು ಸೋತೆವು ಎಂದರು.

Davangere, Pramod Muthalik,  Controversy Erupts Over Funding of Radical Madrasas Amid Ongoing Security Concerns