ಬ್ರೇಕಿಂಗ್ ನ್ಯೂಸ್
10-06-24 10:08 pm HK News Desk ದೇಶ - ವಿದೇಶ
ಶ್ರೀನಗರ, ಜೂ 10: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿಭಾನುವಾರ ಬಸ್‌ವೊಂದು ಪ್ರಪಾತಕ್ಕೆ ಉರುಳಿದ್ದು, ದುರಂತದಲ್ಲಿ10 ಮಂದಿ ಮೃತಪಟ್ಟು, 33 ಮಂದಿ ಗಾಯಗೊಂಡಿದ್ದಾರೆ.
ಶಿವಖೋಡ ದೇವಸ್ಥಾನದಿಂದ ಕಾತ್ರಾಗೆ ಮರಳುತ್ತಿದ್ದ ಪ್ರವಾಸಿಗರಿದ್ದ ಬಸ್ ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ಗಾಬರಿಗೊಂಡ ಬಸ್ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆಯಿಂದ ಪಕ್ಕದ ಪ್ರಪಾತಕ್ಕೆ ಉರುಳಿದೆ.

ತೆರ್‌ಯಾಥ್ ಗ್ರಾಮದ ಬಳಿ ಘಟನೆ ಜರುಗಿದೆ. ಪ್ರಪಾತದಲ್ಲಿದ್ದ ಬಸ್‌ನಿಂದ 30 ಮಂದಿಯನ್ನು ಕಾರ್ಯಾಚರಣೆ ನಡೆಸಿ ಪೊಲೀಸರು ಮತ್ತು ಅರೆಸೇನಾ ಪಡೆಗಳು ರಕ್ಷಿಸಿದ್ದಾರೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಮೀಪದ ಅರಣ್ಯದಿಂದ ಏಕಾಏಕಿ ರಸ್ತೆಗೆ ಧುಮುಕಿದ ಉಗ್ರರು ಹಲವು ಸುತ್ತಿನ ಗುಂಡಿನ ದಾಳಿಯನ್ನು ಬಸ್ ಮೇಲೆ ನಡೆಸಿದ್ದಾರೆ. ದಾಳಿಯ ಸ್ಥಳದಲ್ಲಿಅಪಾರ ಸಂಖ್ಯೆಯಲ್ಲಿ ಗುಂಡುಗಳು ಪತ್ತೆಯಾಗಿವೆ,'' ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಶಂಕಿತ ಉಗ್ರರು ರಜೌರಿ, ಪೂಂಛ್ ಮತ್ತು ರಿಯಾಸಿಯ ಅರಣ್ಯ ಪ್ರದೇಶಗಳಲ್ಲಿಅಡಗಿರುವ ಸಾಧ್ಯತೆ ಇದ್ದು, ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಯಾಣಿಕರ ಗುರುತುಗಳನ್ನು ಇನ್ನೂ ದೃಢಪಡಿಸಲಾಗಿಲ್ಲ ಎಂದು ತಿಳಿದ್ದಾರೆ.
ದಾಳಿಯ ಹೊಣೆಯನ್ನು ಪಾಕಿಸ್ತಾನ ಬೆಂಬಲಿತ 'ದಿ ರೆಸಿಸ್ಟೆನ್ಸ್ ಫ್ರಂಟ್' ವಹಿಸಿಕೊಂಡಿದೆ.
ಪ್ರವಾಸಿಗರು ಮತ್ತು ಸ್ಥಳೀಯರಲ್ಲದವರ' ಮೇಲೆ ಇಂತಹ ದಾಳಿಗಳನ್ನು ಮುಂದವರಿಸುತ್ತೇವೆ ಎಂಬುದಾಗಿಯೂ ಉಗ್ರರು ಹೇಳಿಕೊಂಡಿದ್ದಾರೆ. ಅಲ್ಲದೆ ರಿಯಾಸಿ ದಾಳಿಯನ್ನು 'ಹೊಸ ಆರಂಭಕ್ಕೆ ಮುನ್ನುಡಿ' ಎಂದು ಕರೆದಿದೆ.
ಭಯೋತ್ಪಾದಕರನ್ನು ಪತ್ತೆಹಚ್ಚಲು ಉಗ್ರ ನಿಗ್ರ ದಳದ ಅಧಿಕಾರಿಗಳು ಬೃಹತ್ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಈ ಪ್ರದೇಶದಲ್ಲಿ ಭದ್ರತೆಯನ್ನು ಬಲಪಡಿಸಲಾಗಿದ್ದು, ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
The deadly terror attack in Jammu and Kashmir’s Reasi district has shocked India. At least nine people died and 33 were injured after terrorists fired upon a bus carrying Hindu pilgrims, resulting in the vehicle plunging into a deep gorge on Sunday (9 June).
01-03-26 09:20 pm
HK News Staffer
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
ರಾಜ್ಯ ಮುಸ್ಲಿಮರಿಗೆ ಸ್ವರ್ಗ, ಹಿಂದುಗಳಿಗೆ ನರಕವಾಗಿದ...
01-03-26 04:56 pm
ಖಮೇನಿ ಹತ್ಯೆ ಖಂಡನೀಯ, ಇರಾನ್ ಮೇಲಿನ ಅಮೆರಿಕ ಯುದ್ಧ...
01-03-26 04:51 pm
02-03-26 03:10 pm
HK News Staffer
ಇರಾನ್ ಸಂಘರ್ಷ; ಭಾರತದಲ್ಲಿ ಹಿಂಸಾಚಾರ ಸಾಧ್ಯತೆ, ತುರ...
02-03-26 02:26 pm
ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ; ಸೆನ್ಸೆಕ್ಸ್ 1,000...
02-03-26 01:34 pm
ಖಮೇನಿ ಯುಗಾಂತ್ಯ; ಹಂಗಾಮಿ ಸುಪ್ರೀಂ ಲೀಡರ್ ಸ್ಥಾನಕ್ಕ...
02-03-26 01:30 pm
Ayatollah Khamenei Killed: ಇರಾನ್ ಪರಮೋಚ್ಚ ನಾಯಕ...
01-03-26 09:52 am
01-03-26 08:37 pm
HK News Staffer
PSI Nasir Hussain: ಉಡುಪಿ ; ಮ್ಯಾರಥಾನಲ್ಲಿ ಪಾಲ್ಗ...
01-03-26 04:07 pm
ಹುಲಿಕಲ್ ಘಾಟಿಯಲ್ಲಿ ದುರ್ಗಾಂಬಾ ಬಸ್ ಗೆ ಬೆಂಕಿ ; ಕು...
28-02-26 08:53 pm
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm