Suresh Gopi News: ಸಚಿವ ಸ್ಥಾನಕ್ಕೆ ರಾಜಿನಾಮೆ ವದಂತಿ ; ಮೋದಿ ಸರಕಾರದಲ್ಲಿ ಸಚಿವನಾಗಿರುವುದು ಹೆಮ್ಮೆಯ ಸಂಗತಿ- ಸಂಸದ ಸುರೇಶ್ ಗೋಪಿ

10-06-24 09:30 pm       HK News Desk   ದೇಶ - ವಿದೇಶ

ಕೇರಳದ ತೃಶೂರು ಸಂಸದ, ಚಿತ್ರನಟ ಸುರೇಶ್ ಗೋಪಿ ಅವರು ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಸಚಿವ ಸ್ಥಾನದಲ್ಲಿರಲು ಇಷ್ಟ ಹೊಂದಿಲ್ಲ, ರಾಜಿನಾಮೆ ನೀಡಲಿದ್ದಾರೆ ಎಂಬ ವದಂತಿಗಳನ್ನು ನಿರಾಕರಿಸಿದ್ದಾರೆ.

ತಿರುವನಂತಪುರಂ, ಜೂನ್ 10: ಕೇರಳದ ತೃಶೂರು ಸಂಸದ, ಚಿತ್ರನಟ ಸುರೇಶ್ ಗೋಪಿ ಅವರು ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಸಚಿವ ಸ್ಥಾನದಲ್ಲಿರಲು ಇಷ್ಟ ಹೊಂದಿಲ್ಲ, ರಾಜಿನಾಮೆ ನೀಡಲಿದ್ದಾರೆ ಎಂಬ ವದಂತಿಗಳನ್ನು ನಿರಾಕರಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಸ್ವತಃ ಸುರೇಶ್ ಗೋಪಿ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಸಂಸದ ಖಾತೆಯನ್ನು ಗೆಲ್ಲಿಸಿಕೊಟ್ಟಿರುವ ಸುರೇಶ್ ಗೋಪಿ, ಮೋದಿ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಚಿತ್ರರಂಗದಲ್ಲಿ ಬಿಝಿಯಾಗಿರುವ ಅವರು, ಸಚಿವ ಸ್ಥಾನವನ್ನು ತ್ಯಜಿಸಲಿದ್ದಾರೆ ಎಂದು ಕೆಲವು ಮಾಧ್ಯಗಳು ವರದಿ ಮಾಡಿದ್ದವು. ಇದರ ಬೆನ್ನಲ್ಲೇ ಸುರೇಶ್ ಗೋಪಿ ತನ್ನ ಫೇಸ್ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮೋದಿ ಸರಕಾರದಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದೇನೆ ಎಂದು ಕೆಲವು ಮಾಧ್ಯಗಳು ತಪ್ಪು ಸುದ್ದಿ ಹರಡುತ್ತಿವೆ. ಇದು ಸತ್ಯಕ್ಕೆ ದೂರವಾದ ವಿಚಾರ. ಮೋದಿ ಸರಕಾರದಲ್ಲಿ ಸಚಿವನಾಗಿರುವುದು ಮತ್ತು ಕೇರಳದ ಜನರನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವುದು ನನಗೆ ಹೆಮ್ಮೆಯ ವಿಚಾರ ಎಂದು ಬರೆದಿದ್ದಾರೆ. ಮೋದಿ ಅವರ ನಿಕಟವರ್ತಿ ಎನ್ನಲಾಗುವ ಸುರೇಶ್ ಗೋಪಿ, ಕ್ರೈಸ್ತರ ಪ್ರಭಾವ ಇರುವ ತೃಶ್ಯೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುರಲೀಧರನ್ ವಿರುದ್ಧ 76,686 ಮತಗಳಿಂದ ಗೆಲುವು ಪಡೆದಿದ್ದಾರೆ. ರಾಜಕೀಯ ಜೀವನದ ಜೊತೆಗೆ ಚಿತ್ರರಂಗದಲ್ಲೂ ಬಿಝಿಯಾಗಿರುವ ಸುರೇಶ್ ಗೋಪಿ, ಸದ್ಯಕ್ಕೆ ನಾಲ್ಕು ಬಿಗ್ ಬಜೆಟ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Day after claiming that he hoped the Centre would relieve him of his fresh duties as a Union Minister, Suresh Gopi said news reports of him resigning from the Cabinet are 'grossly incorrect'.