BJP loses majority in India election shock: ಕೇಸರಿ ಪಕ್ಷಕ್ಕೆ ಕೈಕೊಟ್ಟ ಹಿಂದಿ ಹಾರ್ಟ್ ಲ್ಯಾಂಡ್ ; ಭದ್ರಕೋಟೆ ಎನಿಸಿದ್ದ ರಾಜ್ಯಗಳಲ್ಲೇ ಬಿಜೆಪಿಗೆ ಹೊಡೆತ, ಬಿಜೆಪಿ ನಾಯಕರ ಅತಿ ಆತ್ಮವಿಶ್ವಾಸವೇ ಮುಳುವಾಯ್ತಾ ?! 

05-06-24 12:30 pm       HK News Desk   ದೇಶ - ವಿದೇಶ

400 ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಎನ್​ಡಿಎಗೆ ಈ ಬಾರಿ ಶಾಕ್ ಆಗಿದೆ. ಕಳೆದೆರಡು ಲೋಕಸಭೆ ಚುನಾವಣೆಗಳಲ್ಲಿ ಬಹುಮತ ಪಡೆದಿದ್ದ ಬಿಜೆಪಿ ಈ ಬಾರಿ 240 ಸ್ಥಾನ ಪಡೆಯುವಲ್ಲಿ ಸುಸ್ತು ಹೊಡೆದಿದೆ. ಎನ್‌ಡಿಎ ಮೈತ್ರಿ ಪಕ್ಷಗಳು ಸೇರಿಕೊಂಡರೂ ಬಹುಮತದ ಗೆರೆಯನ್ನಷ್ಟೇ ದಾಟಿ ನಿಂತಿವೆ.

ನವದೆಹಲಿ, ಜೂನ್.5: 400 ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಎನ್​ಡಿಎಗೆ ಈ ಬಾರಿ ಶಾಕ್ ಆಗಿದೆ. ಕಳೆದೆರಡು ಲೋಕಸಭೆ ಚುನಾವಣೆಗಳಲ್ಲಿ ಬಹುಮತ ಪಡೆದಿದ್ದ ಬಿಜೆಪಿ ಈ ಬಾರಿ 240 ಸ್ಥಾನ ಪಡೆಯುವಲ್ಲಿ ಸುಸ್ತು ಹೊಡೆದಿದೆ. ಎನ್‌ಡಿಎ ಮೈತ್ರಿ ಪಕ್ಷಗಳು ಸೇರಿಕೊಂಡರೂ ಬಹುಮತದ ಗೆರೆಯನ್ನಷ್ಟೇ ದಾಟಿ ನಿಂತಿವೆ. ಬಿಜೆಪಿಗೆ ಯಾವತ್ತೂ ಕೈಹಿಡೀತಿದ್ದ ಹಿಂದಿ ಹಾರ್ಟ್ ಲ್ಯಾಂಡ್ ಈ ಬಾರಿ ಶಾಕ್ ಕೊಟ್ಟಿದೆ. 

3ನೇ ಬಾರಿಗೆ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಗದ್ದುಗೆ ಏರುವ ಅತಿ ಮಹತ್ವಾಕಾಂಕ್ಷೆಯಲ್ಲಿದ್ದ ಮೋದಿ ಪರಿವಾರ್​​​​​ಗೆ ಮತದಾರನ ನಿರ್ಣಯ ಸ್ಪಷ್ಟ ಸಂದೇಶ ರವಾನಿಸಿದೆ. ನಂಬಿಕಸ್ಥ ರಾಜ್ಯಗಳಲ್ಲೇ ಮತದಾರರು ಬಿಜೆಪಿಗೆ ಸೋಲಿನ ರುಚಿ ಉಣಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ 353 ಸೀಟುಗಳನ್ನು ಗೆದ್ದಿದ್ದ ಎನ್​ಡಿಎ ಕೂಟಕ್ಕೆ ಈ ಬಾರಿ 300ರ ಗಡಿ ದಾಟಲು ಸಾಧ್ಯವಾಗಿಲ್ಲ. 2014 ಹಾಗೂ 2019ರ ಚುನಾವಣೆಯಲ್ಲಿ ಹಿಂದಿ ಹಾರ್ಟ್​​​ ಲ್ಯಾಂಡ್​​ಗಳು ಬಿಜೆಪಿ ಕೈ ಹಿಡಿದಿದ್ದು ದೊಡ್ಡ ಗೆಲುವಿಗೆ ಕಾರಣ ಆಗಿತ್ತು. 2019ರಲ್ಲಿ ಏಕಾಂಗಿಯಾಗಿಯೇ ಬಿಜೆಪಿ 303 ಸ್ಥಾನಗಳನ್ನ ಗೆದ್ದುಕೊಂಡಿತ್ತು. ಆದ್ರೆ ಈ ಬಾರಿ ಹಿಂದಿ ಭಾಷಿಕ ರಾಜ್ಯಗಳಲ್ಲೇ ಬಿಜೆಪಿ ಹೊಡೆತ ಅನುಭವಿಸಿದೆ. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಹರಿಯಾಣ, ಪಂಜಾಬ್​​​ನಲ್ಲೂ ಬಿಜೆಪಿ ನಿರಾಸೆ ಅನುಭವಿಸಿದೆ. ಉತ್ತರ ಪ್ರದೇಶವೊಂದರಲ್ಲೇ ಬಿಜೆಪಿ 30 ಸೀಟುಗಳನ್ನ ಕಳೆದುಕೊಂಡಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲೇ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್, ಇಂಡಿಯಾ ಒಕ್ಕೂಟದ ಅಭ್ಯರ್ಥಿ ಅವಧೇಶ್ ಪ್ರಸಾದ್ ಎದುರು ಸೋಲು ಕಂಡಿದ್ದಾರೆ. ಯುಪಿಯಲ್ಲಿ ಬಿಜೆಪಿ 33, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಾರ್ಟಿ 37, ಕಾಂಗ್ರೆಸ್ 6, ರಾಷ್ಟ್ರೀಯ ಲೋಕದಳ್ ಎರಡು ಸ್ಥಾನಗಳಲ್ಲಿ ಗೆದ್ದಿದೆ. ಹರ್ಯಾಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 5 ಸ್ಥಾನ ಪಡೆದಿದೆ. ಕಳೆದ ಬಾರಿ ಬಿಜೆಪಿ ಇಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. 

Rajasthan Election Results highlights: BJP wins 115 seats, Cong bags 69 |  Hindustan Times

ರಾಜಸ್ಥಾನದಲ್ಲಿ ಬಿಜೆಪಿಗೆ 11 ಕ್ಷೇತ್ರಗಳು ಖೋತಾ!

25 ಲೋಕಸಭೆ ಕ್ಷೇತ್ರಗಳನ್ನು ಹೊಂದಿದ್ದ ರಾಜಸ್ಥಾನದಲ್ಲಿ ಬಿಜೆಪಿ ಈ ಬಾರಿ 14 ಕ್ಷೇತ್ರಗಳನ್ನಷ್ಟೇ ಗೆದ್ದಿದೆ. ಕಾಂಗ್ರೆಸ್ 8 ಹಾಗೂ ಇತರರು 3 ಸ್ಥಾನಗಳನ್ನು ಗಳಿಸಿದ್ದಾರೆ. 2019ರಲ್ಲಿ ಎಲ್ಲಾ 25 ಕ್ಷೇತ್ರಗಳನ್ನೂ ಬಿಜೆಪಿ ಗೆದ್ದು ದಾಖಲೆ ಬರೆದಿದ್ದ ಬಿಜೆಪಿ ರಾಜಸ್ಥಾನದಲ್ಲಿ 11 ಸ್ಥಾನಗಳನ್ನು ನಷ್ಟ ಅನುಭವಿಸಿದ್ದು ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ಮತದಾರರು ಶಾಕ್ ನೀಡಿದ್ದಾರೆ. ಹಾಗೆ ನೋಡಿದರೆ ಹಿಂದಿ ಹಾರ್ಟ್ ಲ್ಯಾಂಡ್ ಮಧ್ಯಪ್ರದೇಶದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿರುವುದು ಕೇಸರಿ ಪಕ್ಷದ ದೊಡ್ಡ ಸಾಧನೆ. 

INDI alliance races past NDA in Maharashtra, show Election Commission  trends – Firstpost

ಮಹಾರಾಷ್ಟ್ರದಲ್ಲಿ ಅಘಾಡಿ ಎದುರು ಮಂಕಾದ ಮೈತ್ರಿ!

ಮಹಾರಾಷ್ಟ್ರದಲ್ಲಿಯೂ ಎನ್​ಡಿಎ ಮೈತ್ರಿಕೂಟದ ಬಲ ಕುಗ್ಗಿದೆ. 48 ಕ್ಷೇತ್ರಗಳ ಪೈಕಿ 2019ರಲ್ಲಿ 41 ಸ್ಥಾನಗಳನ್ನು ಗೆದ್ದಿದ್ದ ಎನ್​​ಡಿಎ ಈ ಬಾರಿ 18 ಸ್ಥಾನಗಳನ್ನಷ್ಟೇ ಪಡೆದಿದೆ. ರಾಜ್ಯದಲ್ಲಿ ಬಿಜೆಪಿ - ಶಿವಸೇನೆ ಮೈತ್ರಿ ಸರ್ಕಾರ ಇದ್ದರೂ 23 ಸ್ಥಾನಗಳನ್ನು ಕಳಕೊಂಡಿದೆ. ಬಿಜೆಪಿ ಪ್ರಾಬಲ್ಯಕ್ಕೆ ದೊಡ್ಡ ಹೊಡೆತ ಕೊಟ್ಟಿರುವುದು ಮಹಾರಾಷ್ಟ್ರ. 28 ಸ್ಥಾನಗಳಲ್ಲಿ ಸ್ಪರ್ಧಿಸಿ 9 ಕಡೆ ಮಾತ್ರ ಗೆಲುವು ಪಡೆದಿದೆ. ಇಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ 17 ಸ್ಥಾನಗಳಲ್ಲಿ 13 ಕಡೆ ಗೆದ್ದಿದೆ. ಕಾಂಗ್ರೆಸಿಗೆ ಡಬಲ್ ಡಿಜಿಟ್ ಸಾಧನೆ ಮಾಡಿರುವುದು ಇಲ್ಲಿ ಮಾತ್ರ. 

ಇತ್ತ ಕರ್ನಾಟಕದಲ್ಲಿ ಈ ಬಾರಿ ಜೆಡಿಎಸ್ ಮೈತ್ರಿಯೊಂದಿಗೆ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದ ಬಿಜೆಪಿ ನಿರಾಸೆ ಅನುಭವಿಸಿದೆ. ಕಳೆದ ಬಾರಿಗಿಂತ 7 ಸ್ಥಾನಗಳನ್ನು ಕಳೆದುಕೊಂಡಿದೆ. ಚಿಕ್ಕೋಡಿ, ಕಲಬುರಗಿ, ಬಳ್ಳಾರಿ, ಬೀದರ್ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸೋಲು ಕಂಡಿದೆ. ದಕ್ಷಿಣ ಭಾರತದ ಮಟ್ಟಿಗೆ ಭದ್ರನೆಲೆ ಹೊಂದಿರುವ ಬಿಜೆಪಿಗೆ ಕರ್ನಾಟಕದಲ್ಲೂ ಬಲ ಕುಗ್ಗಿದಂತಾಗಿದೆ. ಒಟ್ಟಾರೆ, ಅತಿಯಾದ ಆತ್ಮವಿಶ್ವಾಸವೇ ಬಿಜೆಪಿಗೆ ಹಿನ್ನಡೆ ಆಯ್ತಾ ಎಂಬ ಮಾತು ಕೇಳಿಬರ್ತಿದೆ.

Election result 2024, BJP faces huge defeat in major states of India, what was the reason. Indian Prime Minister Narendra Modi’s Bharatiya Janata Party (BJP) lost its national majority after suffering major losses in key states, marking a dramatic shift in a political landscape it has dominated for the past decade.