ಬ್ರೇಕಿಂಗ್ ನ್ಯೂಸ್
04-06-24 08:10 pm HK News Desk ದೇಶ - ವಿದೇಶ
ಉತ್ತರ ಪ್ರದೇಶ, ಜೂ 04: ಗಾಂಧಿ ಕುಟುಂಬದ ಕ್ಷೇತ್ರ ಅಮೇಠಿಯಲ್ಲಿ ಸ್ಮೃತಿ ಇರಾನಿಗೆ ಸೋಲಾಗಿದೆ. ಗಾಂಧಿ ಕುಟುಂಬದ ಬಲಗೈ ಬಂಟ ಕಿಶೋರಿ ಲಾಲ್ ಶರ್ಮಾ ಇಲ್ಲಿ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ಈ ಮೂಲಕ ಕಳೆದ ಬಾರಿ ರಾಹುಲ್ ಗಾಂಧಿಯನ್ನೇ ಸೋಲಿಸಿದ್ದ ಇರಾನಿ, ಇದೀಗ ಅವರ ಬಂಟನ ಕೈಯಲ್ಲಿ ಸೋಲು ಕಾಣುವಂತಾಗಿದೆ.
ಕಿಶೋರಿ ಲಾಲ್ ಶರ್ಮಾ 389286 ಮತ ಗಳಿಸಿದ್ದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ 1,15,128ಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ. ಸ್ಮೃತಿ ಇರಾನಿ ಕೇವಲ 2,74,158 ಮತಗಳನ್ನು ಪಡೆದಿದ್ದು, ಸೋಲು ಅನುಭವಿಸಿದ್ದಾರೆ.
ತನ್ನ ಕೈತಪ್ಪಿದ್ದ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ಎಳೆದು ತರಲು ಕಾಂಗ್ರೆಸ್ ಕಿಶೋರಿ ಲಾಲ್ ಶರ್ಮಾರನ್ನು ಕಣಕ್ಕಿಳಿಸಿತ್ತು. ಶರ್ಮಾ ದೇಶದೆಲ್ಲೆಡೆ ಅಪರಿಚಿತರಾದರೂ, ರಾಯ್‌ಬರೇಲಿ ಹಾಗೂ ಅಮೇಠಿ ಎರಡೂ ಕ್ಷೇತ್ರಗಳಲ್ಲಿ ಚಿರಪರಿಚಿತರಾಗಿದ್ದರು. ಹೀಗಾಗಿ ಇವರಿಗೆ ಈ ಜವಾಬ್ದಾರಿ ನೀಡಿತ್ತು.
ಈ ಎರಡೂ ಕ್ಷೇತ್ರಗಳಿಂದ ಯಾವುದೇ ಗಾಂಧಿಗಳು ಆಯ್ಕೆಯಾದರೂ, ಕ್ಷೇತ್ರದ ಉಸ್ತುವಾರಿಯನ್ನು ಇದೇ ಕಿಶೋರಿ ಲಾಲ್ ಶರ್ಮಾ ನೋಡಿಕೊಳ್ಳುತ್ತಿದ್ದರು. ಇದೀಗ ಅವರೇ ಕ್ಷೇತ್ರವನ್ನೂ ಕಾಂಗ್ರೆಸ್ ತೆಕ್ಕೆಗೆ ಎಳೆದು ತಂದಿದ್ದಾರೆ
ಅಮೇಠಿ ಅಭ್ಯರ್ಥಿಯಾಗಿ ತಮ್ಮ ಹೆಸರನ್ನು ಘೋಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶರ್ಮಾ, ನಾನು ಗಾಂಧಿಗಳ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದಲ್ಲದೆ, "ನಾನೊಬ್ಬ ದುರ್ಬಲ ಅಭ್ಯರ್ಥಿ ಎಂದು ನಾನು ಭಾವಿಸುವುದಿಲ್ಲ. ಸ್ಮೃತಿ ಇರಾನಿಗಿಂತಲೂ ನನಗೆ ಅಮೇಠಿ ಚೆನ್ನಾಗಿ ಗೊತ್ತು," ಎಂದು ಹೇಳಿದ್ದರು.
ಇನ್ನು ಸೋಲಿನ ಬಳಿಕ ಸ್ಮೃತಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಐದು ವರ್ಷಗಳ ಕಾಲ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ ಅಮೇಥಿಯ ಜನರಿಗೆ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧನ್ಯವಾದಗಳು ತಿಳಿಸಿದ್ದಾರೆ.
ಇಂದು ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸುವ ದಿನ, ಗೆದ್ದವರನ್ನು ಅಭಿನಂದಿಸುವ ದಿನ ಎಂದು ನಾನು ಭಾವಿಸುತ್ತೇನೆ. ಸಂಘಟನೆಯ ಸ್ವರೂಪ ವಿಶ್ಲೇಷಣೆ ಮತ್ತು ಸಂಸ್ಥೆ ವಿಶ್ಲೇಷಿಸುತ್ತದೆ. ಸಾರ್ವಜನಿಕ ಪ್ರತಿನಿಧಿಯಾಗಿ ಇದು ನನ್ನ ಅದೃಷ್ಟ. ನಾನು ಸೋಲು-ಗೆಲುವನ್ನು ಲೆಕ್ಕಿಸದೆ ಪ್ರತಿ ಹಳ್ಳಿಗೆ ಹೋಗಿ ಕೆಲಸ ಮಾಡಿದ್ದೇನೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
In a major setback to the BJP in Uttar Pradesh, incumbent Union Minister of Women and Child Development Smriti Irani lost the Amethi constituency to the Congress’s Kishori Lal Sharma by a margin of 1,67,196 votes. Smriti Irani only managed to secure 3,72,032 votes, while Congress' Kishori Lal Sharma secured 5,39,228 votes.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm