ಬ್ರೇಕಿಂಗ್ ನ್ಯೂಸ್
04-06-24 04:27 pm HK News Desk ದೇಶ - ವಿದೇಶ
ಕೊಯಮತ್ತೂರು, ಜೂ.04: ಜನ್ಮದಿನದ ಸಂಭ್ರಮದಲ್ಲಿರುವ ತಮಿಳುನಾಡು ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ ಸೋಲಿನ ಆಘಾತ ಎದುರಾಗಿದೆ. ತಮಿಳುನಾಡಿನ ಕೊಯಮತ್ತೂರು ಲೋಕಸಭೆ ಕ್ಷೇತ್ರದ ಚುನಾವಣೆ ಕುತೂಹಲ ಮೂಡಿಸಿತ್ತು. ಇಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ, ಡಿಎಂಕೆಯ ಗಣಪತಿ ರಾಜ್‌ಕುಮಾರ್ ಪಿ ಮತ್ತು ಎಐಎಡಿಎಂಕೆಯ ಸಿಂಗೈ ಜಿ ರಾಮಚಂದ್ರನ್ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
ಆರಂಭದ ಮತ ಎಣಿಕೆಯಲ್ಲಿ ಅಣ್ಣಾಮಲೈ ಮುನ್ನಡೆ ಪಡೆದಿದ್ದರಿಂದ ಅವರಿಂದ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿತ್ತು. ಆದರೆ ನಂತರದ ಸುತ್ತುಗಳಲ್ಲಿ ಎರಡನೇ ಸ್ಥಾನಕ್ಕೆ ಕುಸಿದ ಅವರು, ಡಿಎಂಕೆ ಅಭ್ಯರ್ಥಿಯನ್ನು ಹಿಂದಿಕ್ಕುವ ಯಾವುದೇ ಸೂಚನೆ ನೀಡಲಿಲ್ಲ. ಅಂತಿಮವಾಗಿ ಅಣ್ಣಾಮಲೈ ಅವರಿಗೆ ಹುಟ್ಟುಹಬ್ಬದಂದೇ ಸೋಲಿನ ಕಹಿ ಎದುರಾಗಿದೆ. ಸುಮಾರು 17 ಸಾವಿರ ಮತಗಳ ಅಂತರದಿಂದ ಅಣ್ಣಾಮಲೈ ಸೋಲು ಅನುಭವಿಸಿದ್ದಾರೆ.
ಆರಂಭದ ಸುತ್ತುಗಳಲ್ಲಿ ಡಿಎಂಕೆ ಅಭ್ಯರ್ಥಿ 12,841 ಮತಗಳನ್ನು ಪಡೆದಿದ್ದು, ಅಣ್ಣಾಮಲೈ ಅವರಿಗಿಂತ 3454 ಮತಗಳಿಂದ ಮುನ್ನಡೆ ಪಡೆದಿದ್ದರು. ಅಣ್ಣಾಮಲೈ ಅವರಿಗೆ 9387 ಮತಗಳು ದೊರಕಿದ್ದವು.
ಅವರು ಹಂತದ ಮತ ಎಣಿಕೆಯಲ್ಲಿ ಕೆ ಅಣ್ಣಾಮಲೈ ಮುನ್ನಡೆ ಸಾಧಿಸಿದ್ದರು. ಆದರೆ ಅಂಚೆ ಮತಗಳ ಎಣಿಕೆ ಮುಗಿದಾಗ ಡಿಎಂಕೆ ಮುನ್ನಡೆ ಸಾಧಿಸಿದೆ. ಡಿಎಂಕೆ 5127 ಮತಗಳು, ಬಿಜೆಪಿ 1852 ಮತಗಳು ಹಾಗೂ ಎಐಎಡಿಎಂಕೆ 1541 ಮತಗಳನ್ನು ಪಡೆದಿದ್ದವು.
ತಮಿಳುನಾಡಿನಲ್ಲಿ ಬಿಜೆಪಿಗೆ ಭದ್ರ ನೆಲೆ ಇಲ್ಲದಿದ್ದರೂ, ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಕೇಸರಿ ಪಕ್ಷ ಉತ್ತಮ ಬೆಂಬಲ ಹೊಂದಿದೆ. ಸಿಪಿಐಎಂ ಪಕ್ಷದ ಭದ್ರ ಕೋಟೆಯಾಗಿರುವ ಈ ಕ್ಷೇತ್ರದಲ್ಲಿ, ಬಿಜೆಪಿ ಕೂಡ ತನ್ನದೇ ಮತ ಬ್ಯಾಂಕ್ ಪಡೆದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸಿಪಿಎಂ ನಾಯಕ ಪಿ. ಆರ್. ನಟರಾಜನ್ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು. ಬಿಜೆಪಿಯ ಸಿ. ಪಿ. ರಾಧಾಕೃಷ್ಣನ್ ಅವರು ಎರಡನೇ ಸ್ಥಾನ ಪಡೆದಿದ್ದರು. ಆದರೆ ಅವರು ಸರಿಸುಮಾರು 4 ಲಕ್ಷ ಮತಗಳನ್ನು ಗಳಿಸುವ ಮೂಲಕ ಭರ್ಜರಿ ಪೈಪೋಟಿಯನ್ನೇ ನೀಡಿದ್ದರು. ಹೀಗಾಗಿ, 2024ರ ಲೋಕಸಭಾ ಚುನಾವಣೆಯಲ್ಲಿ ಕೆ. ಅಣ್ಣಾಮಲೈ ಅವರು ಪ್ರಾಬಲ್ಯ ಸಾಧಿಸಬಹುದು ಎಂಬ ಕುತೂಹಲ ಮೂಡಿತ್ತು.
BJP state president K Annamalai is staring at defeat in Coimbatore as he is trailing behind DMK candidate Ganapathy P Rajkumar by 25,000 votes at the end of round 5 of the counting.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm