ಬ್ರೇಕಿಂಗ್ ನ್ಯೂಸ್
04-06-24 01:34 pm HK News Desk ದೇಶ - ವಿದೇಶ
ತಿರುವನಂತಪುರಂ, ಜೂ 04: ಕೊನೆಗೂ ಬಿಜೆಪಿಯ ಕನಸು ನನಸಾಗಿದೆ. ಕೇರಳದಲ್ಲಿ ಮೊದಲ ಬಾರಿಗೆ ಖಾತೆ ತೆರೆದಿದೆ. ತ್ರಿಶ್ಯೂರ್‌ನಲ್ಲಿ ನಟ, ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಜಯ ಗಳಿಸಿದ್ದಾರೆ. ಇವರು ಕಾಂಗ್ರೆಸ್‌ನ ಕೆ. ಮುರಳೀಧರನ್ ಮತ್ತು ಸಿಪಿಐಯ ವಿ.ಎಸ್. ಸುನೀಲ್ ಕುಮಾರ್ ಅವರನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಈ ಹಿಂದಿನ ಲೋಕಸಭೆ ಚುನಾವಣೆ ಯಲ್ಲಿಯೂ ಸುರೇಶ್ ಗೋಪಿ ಉತ್ತಮ ಪ್ರದರ್ಶನ ತೋರಿದ್ದರು. ಶೇ. 28.19ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿದ್ದರು. ಆ ಸಮಯದಲ್ಲಿ ಸಿಪಿಐಯ ರಾಜಾಜಿ ಮ್ಯಾಥ್ಯೂ ಥಾಮಸ್ ಶೇ. 30.85 ಮತ ಪಡೆದಿದ್ದರು. ಕಾಂಗ್ರೆಸ್‌ನ ಟಿ.ಎಸ್.ಪಾರ್ಥಪನ್ ಶೇ. 39.83ರಷ್ಟು ಮತ ಪಡೆದು ಜಯ ಗಳಿಸಿದ್ದರು. ಅವರು 4,15,089 ಮತಗಳನ್ನು ಗಳಿಸಿ 3,21,456 ಮತಗಳನ್ನು ಪಡೆದ ಸಿಪಿಐಯ ರಾಜಾಜಿ ಮ್ಯಾಥ್ಯೂ ಥಾಮಸ್ ಅವರನ್ನು ಸೋಲಿಸಿದ್ದರು.
ಮಾಲಿವುಡ್‌ನ ಜನಪ್ರಿಯ ನಟರಲ್ಲಿ ಸುರೇಶ್ ಗೋಪಿ ಕೂಡ ಒಬ್ಬರು. 65 ವರ್ಷದ ಸೂರೇಶ್ ಗೋಪಿ ಮಲಯಾಳಂ ಜತೆಗೆ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳ ಕೆಲವು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 1988ರಲ್ಲಿ ತೆರೆಕಂಡ ʼನ್ಯೂ ಡೆಲ್ಲಿʼ ಸಿನಿಮಾ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. 1997ರಲ್ಲಿ ತೆರೆಕಂಡ ಮಲಯಾಳಂನ ʼಕಲಿಯಾಟ್ಟಂʼ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಖಡಕ್ ಪೊಲೀಸ್ ಮತ್ತು ಆಯಕ್ಷನ್ ಚಿತ್ರಗಳಿಗೆ ಅವರು ಪ್ರಸಿದ್ಧರಾಗಿದ್ದು, ರಿಯಾಲಿಟಿ ಶೋಗಳನ್ನೂ ನಡೆಸಿಕೊಟ್ಟಿದ್ದಾರೆ. ಕಾಲೇಜು ದಿನಗಳಲ್ಲಿ ಎಡ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು 2016ರಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಅಂದು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು, 2021ರಲ್ಲಿ ಕೇರಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಇದೀಗ ಎರಡನೇ ಪ್ರಯತ್ನದಲ್ಲಿ ಗೆದ್ದು ಬೀಗಿದ್ದಾರೆ. ಸುಮಾರು 30 ಸಾವಿರ ಅಂತರದಿಂದ ಗೆದ್ದಿದ್ದಾರೆ.
The BJP's dream has finally come true. This is the first time it has opened an account in Kerala. Actor-turned-BJP candidate Suresh Gopi has won in Thrissur. He is the Congress's K. Muraleedharan and CPI's V.S. He defeated Sunil Kumar to achieve a historic feat.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm