ಬ್ರೇಕಿಂಗ್ ನ್ಯೂಸ್
01-06-24 08:18 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 1: ಏಳು ಹಂತದ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದ್ದು, ಬಹುತೇಕ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವೇ ಮೂರನೇ ಬಾರಿಗೆ ಅಧಿಕಾರ ಹಿಡಿಯುವುದಾಗಿ ಭವಿಷ್ಯ ಹೇಳಿವೆ. ಹೆಚ್ಚಿನ ಸಮೀಕ್ಷೆಗಳಲ್ಲಿ ಎನ್ ಡಿಎ ಒಕ್ಕೂಟಕ್ಕೆ 350ಕ್ಕೂ ಹೆಚ್ಚು ಸ್ಥಾನ ನೀಡಲಾಗಿದೆ. ಜನ್ ಕಿ ಬಾತ್ 362-392, ಲೋಕ್ ಪೋಲ್ 325-335, ನ್ಯೂಸ್ ನೇಶನ್ 342-378, ರಿಪಬ್ಲಿಕ್ ಮಾರ್ಕ್ ಪ್ರಕಾರ 359 ಸ್ಥಾನಗಳನ್ನು ಎನ್ಡಿಎ ಗೆಲ್ಲಲಿದೆ. ಕಾಂಗ್ರೆಸ್ ಒಕ್ಕೂಟ 140- 150 ಸ್ಥಾನಗಳಿಗೆ ಸೀಮಿತ ಎಂದು ಇವೆಲ್ಲ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಇಂಡಿಯಾ ಟುಡೇ- ಆಕ್ಸಿಸ್ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಬಿಜೆಪಿ 20-22, ಜೆಡಿಎಸ್ 2-3, ಕಾಂಗ್ರೆಸ್ 3-5, ಸ್ಥಾನಗಳನ್ನು ಗಳಿಸಬಹುದು. ಈ ಸಮೀಕ್ಷೆ ಪ್ರಕಾರ ಮತ ಗಳಿಕೆಯಲ್ಲಿಯೂ ಬಿಜೆಪಿಯೇ ಮುಂದಿದೆ. ಬಿಜೆಪಿ ಶೇ. 48, ಜೆಡಿಎಸ್ ಶೇ 7, ಕಾಂಗ್ರೆಸ್ ಶೇ. 41 ರಷ್ಟು ಮತ ಪಡೆಯಬಹುದು ಎಂದು ಸಮೀಕ್ಷೆ ತಿಳಿಸಿದೆ. ಟಿವಿ9 ಸಮೀಕ್ಷೆ ಪ್ರಕಾರ ಬಿಜೆಪಿಗೆ ಕರ್ನಾಟಕದಲ್ಲಿ 18, ಜೆಡಿಎಸ್ 2 ಮತ್ತು ಆಡಳಿತಾರೂಢ ಕಾಂಗ್ರೆಸ್ ಗೆ 8 ಸ್ಥಾನ ಬರಬಹುದಂತೆ. ರಿಪಬ್ಲಿಕ್ ಟಿವಿ- ಜನ್ ಕಿ ಬಾತ್ ಎಕ್ಸಿಟ್ ಪೋಲ್ ಪ್ರಕಾರ, ಕರ್ನಾಟಕದಲ್ಲಿ ಎನ್‌ಡಿಎ 21- 23 ಸ್ಥಾನ, ಕಾಂಗ್ರೆಸ್ 5ರಿಂದ 7 ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಿದೆ.
ಕೇರಳಕ್ಕೂ ಕಮಲ ಲಗ್ಗೆ ?
ಸಿಎನ್ ಎನ್, ಇಂಡಿಯಾ ಟುಡೇ ಪ್ರಕಾರ, ಕೇರಳದಲ್ಲಿ ಎನ್ ಡಿಎ ಕೂಟಕ್ಕೆ 2-3 ಸ್ಥಾನ ಬರಬಹುದು. ಉಳಿದಂತೆ, ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಕೇರಳದಲ್ಲಿ ಈ ಫಲಿತಾಂಶ ನಿಜವಾದರೆ ಮೊದಲ ಬಾರಿಗೆ ಬಿಜೆಪಿ ಕಮಾಲ್ ಮಾಡಿದಂತೆ ಆಗಲಿದೆ. ತಮಿಳುನಾಡಲ್ಲೂ ಬಿಜೆಪಿ ಕೂಟಕ್ಕೆ 3-4 ಸ್ಥಾನಗಳನ್ನು ಕೆಲವು ಸಮೀಕ್ಷೆಗಳಲ್ಲಿ ಹೇಳಲಾಗಿದೆ.
ಉತ್ತರ ಪ್ರದೇಶದಲ್ಲಿ ಎನ್‌ಡಿಎ 69 ಸ್ಥಾನಗಳನ್ನು ಗೆಲ್ಲಲಿದೆ ಎಂದು ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಭವಿಷ್ಯ ನುಡಿದಿದೆ. ಇಂಡಿಯಾ ಮೈತ್ರಿಕೂಟ 11 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದಿದೆ. ಇದೇ ವೇಳೆ ಆಡಳಿತಾರೂಢ ಎನ್‌ಡಿಎ 50 ಶೇಕಡ ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಈ ಬಾರಿ ಎನ್‌ಡಿಎ 80 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಮೈತ್ರಿಕೂಟದಲ್ಲಿ ಬಿಜೆಪಿಯ 74 ಅಭ್ಯರ್ಥಿಗಳು ಕಣಕ್ಕಿಳಿದರೆ, ಅಪ್ನಾ ದಳ್, ಆರ್‌ಎಲ್‌ಡಿ ಮತ್ತು ಎಸ್‌ಬಿಎಸ್‌ಪಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಅತ್ತ ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ನಿಂದ 17 ಅಭ್ಯರ್ಥಿಗಳು ಮಾತ್ರವೇ ಕಣಕ್ಕಿಳಿದರೆ, ಆಲ್ ಇಂಡಿಯಾ ಟಿಎಂಸಿ ಪಕ್ಷದ ಒಬ್ಬರು ಕಣಕ್ಕಿಳಿದಿದ್ದಾರೆ. ಕಳೆದ ಬಾರಿ 37 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 5 ಸ್ಥಾನಗಳಲ್ಲಿ ಗೆದ್ದಿದ್ದ ಸಮಾಜವಾದಿ ಪಕ್ಷ ಈ ಬಾರಿ 62 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಇಂಡಿಯಾ ಮೈತ್ರಿಕೂಟಕ್ಕೆ ಬಲ ತುಂಬಲು ಸಮಾಜವಾದಿ ಪಕ್ಷವೇ ಪ್ರಮುಖ ಪಾತ್ರ ವಹಿಸುತ್ತಿದೆ. ಮಾಯಾವತಿ ನೇತೃತ್ವದ ಬಿಎಸ್‌ಪಿಯು ಸ್ವತಂತ್ರವಾಗಿ 79 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ.
ಆಂಧ್ರಪ್ರದೇಶಕ್ಕೆ ವೈಎಸ್ಸಾರ್ ಕಿಂಗ್ !
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಪಿಡಿ ನಡುವೆ ತೀವ್ರ ಪೈಪೋಟಿ ಇದ್ದು ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ವೈಎಸ್‌ಆರ್ ಪಕ್ಷ 13 ಸ್ಥಾನ ಗಳಿಸಲಿದೆ. ಟಿಡಿಪಿ 12 ಸ್ಥಾನ ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಉಳಿದ ಪಕ್ಷಗಳು ಯಾವುದೇ ಸ್ಥಾನ ಗಳಿಸಿಲ್ಲ.
ಗುಜರಾತಲ್ಲಿ ಕಮಲದ್ದೇ ಕಮಾಲ್ !
ಚಾಣಕ್ಯ ಸಮೀಕ್ಷೆಯಲ್ಲಿ ಗುಜರಾತ್ ನಲ್ಲಿ 26ರಲ್ಲಿ 26 ಸ್ಥಾನಗಳನ್ನೂ ಎನ್ಡಿಎ ಮೈತ್ರಿಕೂಟ ಗೆಲ್ಲಲಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ.
The seventh and last phase of Lok Sabha election concluded on June 1 after polling took place in Bihar, Uttar Pradesh, Punjab, Odisha, Himachal Pradesh, West Bengal, Jharkhand, and the Chandigarh union territory.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 06:02 pm
Bangalore Correspondent
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm