ಬ್ರೇಕಿಂಗ್ ನ್ಯೂಸ್
29-05-24 03:02 pm HK News Desk ದೇಶ - ವಿದೇಶ
ನವದೆಹಲಿ, ಮೇ 29: ದುಬೈಗೆ ತೆರಳುವ ಪ್ರವಾಸಿಗರಿಗೆ ವೀಸಾ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ದುಬೈಗೆ ಪ್ರವಾಸಿ ವೀಸಾದಲ್ಲಿ ತೆರಳುವ ಮಂದಿ ಕನಿಷ್ಠ ಆರು ತಿಂಗಳ ವ್ಯಾಲಿಡಿಟಿ ಇರುವ ಪಾಸ್ ಪೋರ್ಟ್ ಹೊಂದಿರಬೇಕು. ಹಿಂತಿರುಗಿ ಬರುವ ದಿನಾಂಕದ ವಿಮಾನ ಟಿಕೆಟ್ ಮೊದಲೇ ಬುಕ್ ಮಾಡಿರಬೇಕು ಸೇರಿದಂತೆ ಹೊಸ ನಿಯಮಗಳನ್ನು ಹೇರಲಾಗಿದೆ ಎನ್ನುವ ಮಾಹಿತಿ ಟ್ರಾವೆಲ್ ಏಜನ್ಸಿಗಳಿಂದ ತಿಳಿದುಬಂದಿದೆ.
ದುಬೈನ ತಾಹಿರಾ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಯ ಸಿಇಓ ಮತ್ತು ಸ್ಥಾಪಕ ಫಿರೋಜ್ ಮಲಿಯಾಕ್ಕಲ್ ಹೇಳಿಕೆಯನ್ನು ಉಲ್ಲೇಖಿಸಿ ದುಬೈ ಮಾಧ್ಯಮ ಖಲೀಜ್ ಟೈಮ್ಸ್ ಈ ಬಗ್ಗೆ ವರದಿ ಮಾಡಿದೆ. ದುಬೈ ತೆರಳುವ ಪ್ರವಾಸಿಗರು ಕನಿಷ್ಠ 3 ಸಾವಿರ ದಿರ್ಹಮ್ ನಗದು ಅಥವಾ ಅಷ್ಟೇ ಮೌಲ್ಯದ ಇನ್ನಾವುದೇ ಕರೆನ್ಸಿ ಹೊಂದಿರಬೇಕು, ದುಬೈನಲ್ಲಿ ಉಳಿದುಕೊಳ್ಳುವುದಕ್ಕೆ ಹೊಟೇಲ್ ಬುಕ್ ಅಥವಾ ಇನ್ನಾವುದೇ ವಿಳಾಸವನ್ನು ಮೊದಲೇ ಗೊತ್ತು ಮಾಡಿರಬೇಕು, ಕನಿಷ್ಠ ಆರು ತಿಂಗಳ ಅವಧಿ ಇರುವ ಪಾಸ್ ಪೋರ್ಟ್ ಮತ್ತು ವ್ಯಾಲಿಡ್ ವೀಸಾ ಹೊಂದಿರಬೇಕು. ಹಿಂತಿರುಗಿ ಬರುವುದಕ್ಕೆ ಮಾಡಿರುವ ವಿಮಾನ ಟಿಕೆಟನ್ನೂ ಹೊಂದಿರಬೇಕು. ಇವನ್ನೆಲ್ಲ ದುಬೈಗೆ ತೆರಳುವಾಗಲೇ ವಿಮಾನ ನಿಲ್ದಾಣದಲ್ಲಿ ಚೆಕ್ ಮಾಡಲಾಗುತ್ತದೆ ಎಂದು ಫಿರೋಜ್ ಮಲಿಯಾಕ್ಕಲ್ ತಿಳಿಸಿದ್ದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ.
ದುಬೈಗೆ ಬರುವ ಪ್ರವಾಸಿಗರು ಅಲ್ಲಿ ಖರ್ಚು ಮಾಡುವಷ್ಟು ಹಣ ಇದ್ದವರೇ ಆಗಿರಬೇಕೆಂಬುದನ್ನು ಅಲ್ಲಿನ ಆಡಳಿತ ಬಯಸುತ್ತದೆ. ಕನಿಷ್ಠ ಅಲ್ಲಿನ ಕರೆನ್ಸಿ 3 ಸಾವಿರ ದಿರ್ಹಮ್ ನಷ್ಟು ಬೆಲೆ ಇರುವ ನಗದು ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಇನ್ನಾವುದೇ ರೂಪದಲ್ಲಿ ಕರೆನ್ಸಿ ಹೊಂದಿರಬೇಕು. ಎಲ್ಲಿ ಉಳಿದುಕೊಳ್ಳುತ್ತೇವೆ ಅನ್ನುವುದನ್ನು ಮೊದಲೇ ತಿಳಿಸಬೇಕು. ಅಲ್ಲಿನ ವಿಳಾಸವನ್ನು ಮೊದಲೇ ಉಲ್ಲೇಖ ಮಾಡಬೇಕು. ಗೆಳೆಯನ ಮನೆ, ಸಂಬಂಧಿಕರ ಮನೆ ಅಥವಾ ಹೊಟೇಲ್ ಬುಕ್ ಮಾಡುವುದಿದ್ದರೆ ಅಲ್ಲಿನ ಸ್ಪಷ್ಟ ವಿಳಾಸ ಜೊತೆಗಿರಬೇಕು ಎಂದು ಫಿರೋಜ್ ಮಲಿಯಾಕ್ಕಲ್ ತಿಳಿಸಿದ್ದಾರೆ.
ಯುಎಇ ಸದ್ಯಕ್ಕೆ ಮೂರು ಮಾದರಿಯ ವಿಸಿಟಿಂಗ್ ವೀಸಾಗಳನ್ನು ನೀಡುತ್ತದೆ. 14 ದಿನ, 30 ದಿನ ಮತ್ತು 90 ದಿನಗಳ ಅವಧಿಗೆ ವೀಸಾ ನೀಡುವ ವಾಡಿಕೆ ಇದೆ. 14 ದಿನಗಳ ವೀಸಾದಲ್ಲಿ ವಿಸ್ತರಣೆ ಅವಕಾಶ ಇಲ್ಲ. 30 ದಿನ ಮತ್ತು 90 ದಿನಗಳ ವೀಸಾದಲ್ಲಿ ಎರಡು ಅವಧಿಗೆ ವಿಸ್ತರಣೆ ಮಾಡಲು ಅವಕಾಶ ಇದೆ. ಇದೀಗ ವೀಸಾ ನಿಯಮದಲ್ಲಿ ಬದಲಾವಣೆ ಮಾಡಿರುವುದರಿಂದ ಪಾರದರ್ಶಕತೆಗೆ ಒತ್ತು ಸಿಕ್ಕಂತಾಗುತ್ತದೆ. ಯುಎಇಗೆ ಬರುವ ಪ್ರಯಾಣಿಕರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದಿಲ್ಲ ಎಂದು ದುಬೈನಲ್ಲಿರುವ ಕೆಲವು ಭಾರತೀಯ ನಿವಾಸಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಹೊಸ ವೀಸಾ ನಿಮಯಗಳಿಂದ ದುಬೈನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪಾಸಿಟಿವ್ ಪರಿಣಾಮ ಆಗುವ ಸಾಧ್ಯತೆಯಿದೆ ಎಂದು ಟ್ರಾವೆಲ್ ಏಜನ್ಸಿಗಳು ಹೇಳುತ್ತಿವೆ. ಪ್ರವಾಸಿ ವೀಸಾದಲ್ಲಿ ಬರುವ ಪ್ರವಾಸಿಗರು ಹೆಚ್ಚು ಕಾಲ ಅಕ್ರಮವಾಗಿ ಉಳಿಯುವುದಕ್ಕೆ ಅವಕಾಶ ಇರುವುದಿಲ್ಲ. ಪ್ರವಾಸಿಗರಲ್ಲಿ ಹಣ ಇದೆಯೇ ಎನ್ನುವ ಸ್ಪಷ್ಟನೆ ಬಯಸುವುದರಿಂದ ತೊಂದರೆ ಆಗದಂತೆ ನೋಡಿಕೊಳ್ಳಲು ಎಚ್ಚರ ವಹಿಸಿದಂತಾಗುತ್ತದೆ ಎಂದು ಟ್ರಾವೆಲ್ ಏಜನ್ಸಿಗಳ ಅಭಿಪ್ರಾಯ.
If you're an Indian who has plans to travel to the UAE, securing a permanent resident card (green card) from the US or a residence visa from the United Kingdom or any European Union country enables you to obtain a 14-day entry visa upon arrival in the UAE.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm