ಗುಜರಾತ್‌ ; ಗೇಮಿಂಗ್‌ ಝೋನ್‌ನಲ್ಲಿ ಬೆಂಕಿ ಅವಘಡ, 22 ಜನರು ಸಜೀವ ದಹನ

25-05-24 11:01 pm       HK News Desk   ದೇಶ - ವಿದೇಶ

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮಕ್ಕಳು ಸೇರಿ 22 ಜನರು ಸಜೀವವಾಗಿ ದಹನವಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರು ಘಟನೆಗೆ ಸಂತಾಪ ಸೂಚಿಸಿದ್ದಾರೆ.

ಅಹಮದಾಬಾದ್, ಮೇ 25: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮಕ್ಕಳು ಸೇರಿ 22 ಜನರು ಸಜೀವವಾಗಿ ದಹನವಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರು ಘಟನೆಗೆ ಸಂತಾಪ ಸೂಚಿಸಿದ್ದಾರೆ.

ಶನಿವಾರ ಸಂಜೆ ರಾಜ್‌ಕೋಟ್‌ನ ಗೇಮಿಂಗ್‌ ಝೋನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ವೇಗವಾಗಿ ಹಬ್ಬಿದ್ದು, ಘಟನೆಯಲ್ಲಿ 22 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹೆಚ್ಚಿನ ಜನರು ಸಾವನ್ನಪ್ಪಿರುವ ಶಂಕೆ ಇದ್ದು, ನಾಪತ್ತೆಯಾದವರ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ.

Children Among At Least 22 Killed In Massive Fire At A Gaming Zone In Rajkot  - Daily Excelsior

Gujarat Blaze: Children among 25 Killed in Fire at Rajkot Gaming Zone; PM  Condoles Deaths

Rajkot Fire Live Updates: 20 killed including children in massive game zone  fire, four detained

ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ರಕ್ಷಣಾ ಕಾರ್ಯ ಇನ್ನೂ ಸಹ ನಡೆಯುತ್ತಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ರಾಜ್‌ಕೋಟ್‌ ಪೊಲೀಸ್ ಆಯುಕ್ತ ರಾಜು ಭಾರ್ಗವ್‌ ಮಾತನಾಡಿ, "ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಢ ಸಂಭವಿಸಿದೆ. ಈಗಿನ ಮಾಹಿತಿ ಪ್ರಕಾರ ಹಲವಾರು ಜನರು ಮೃತಪಟ್ಟಿದ್ದಾರೆ" ಎಂದು ಮಾಧ್ಯಮಗಳಿಗೆ ತಿಳಿಸಿದರು.

ರಾಜ್‌ಕೋಟ್‌ನ ಬಿಜೆಪಿ ಶಾಸಕಿ ದರ್ಶಿತಾ ಶಾ ಮಾತನಾಡಿ, "ಇದೊಂದು ವಿಷಾದಕರವಾದ ಘಟನೆ. ರಾಜ್‌ಕೋಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗೇಮಿಂಗ್‌ ಝೋನ್‌ನಲ್ಲಿನ ಬೆಂಕಿಗೆ ಮಕ್ಕಳು ಬಲಿಯಾಗಿದ್ದಾರೆ. ರಕ್ಷಣಾ ತಂಡಗಳು ಜನರ ಜೀವ ಉಳಿಸಲು ಪ್ರಯತ್ನ ನಡೆಸಿವೆ. ಸರ್ಕಾರ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳಲಿದೆ. ಸದ್ಯಕ್ಕೆ ನಮ್ಮ ಆದ್ಯತೆ ಆದಷ್ಟು ಜನರ ಜೀವ ಉಳಿಸುವುದು" ಎಂದು ಹೇಳಿದ್ದಾರೆ.

Twenty-two people have died in the massive fire that broke out at a gaming zone in Gujarat's Rajkot on Saturday evening, said officials. A relief and rescue operation is underway.