ಬ್ರೇಕಿಂಗ್ ನ್ಯೂಸ್
21-05-24 01:33 pm HK News Desk ದೇಶ - ವಿದೇಶ
ಅಹಮದಾಬಾದ್, ಮೇ 21: ಸಿರಿಯಾದ ಐಸಿಸ್ ಸಂಘಟನೆಗೆ ಸೇರಿದ ನಾಲ್ವರು ಶಂಕಿತ ಉಗ್ರರನ್ನು ಗುಜರಾತ್ ಪೊಲೀಸರು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಿದ್ದಾರೆ. ಇವರು ಶ್ರೀಲಂಕಾ ಪ್ರಜೆಗಳಾಗಿದ್ದು ಚೆನ್ನೈ ಮೂಲಕ ಅಹಮದಾಬಾದ್‌ಗೆ ಆಗಮಿಸಿದ್ದರು.
ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿದ್ದಾಗ ಪಾಕಿಸ್ತಾನಿ ಹ್ಯಾಂಡ್ಲರ್‌ಗಳಿಂದ ಸಂದೇಶಕ್ಕಾಗಿ ಕಾಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ನಾಲ್ವರ ಮೊಬೈಲ್ ಫೋನ್‌ಗಳಲ್ಲಿ ನಿಗೂಢ ಭಾಷೆಯಲ್ಲಿರುವ ಕೆಲವು ಚಾಟ್‌ಗಳನ್ನು ಪೊಲೀಸರು ಪತ್ತೆ ಮಾಡಿದ್ದು ಐಸಿಸ್ ನೆಟ್ವರ್ಕ್ ಹೊಂದಿದ್ದಾರೆ ಎಂಬ ಶಂಕೆ ಮೂಡಿತ್ತು. ಪಾಕಿಸ್ತಾನದ ಏಜೆಂಟರು ಇವರಿಗೆ ಆಯುಧಗಳನ್ನು ನೀಡುವ ಭರವಸೆ ನೀಡಿದ್ದರು. ಆದರೆ ಅದಕ್ಕೂ ಮುನ್ನವೇ ಉಗ್ರರನ್ನು ಬಂಧಿಸಲಾಗಿದೆ. ಬಂಧಿತರನ್ನು ಮೊಹಮದ್ ನುಸ್ರತ್, ಮೊಹಮದ್ ನಫ್ರಾನ್, ಮೊಹಮದ್ ಫಾರಿಸ್ ಮತ್ತು ಮೊಹಮದ್ ರಸ್ದೀನ್ ಎಂದು ಗುರುತಿಸಲಾಗಿದೆ ಎಂದು ಗುಜರಾತ್ ಎಟಿಎಸ್ ಘಟಕದ ಪೊಲೀಸರು ತಿಳಿಸಿದ್ದಾರೆ.
ಯಹೂದಿಗಳಿಗೆ ಸೇರಿದ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಹೊಣೆಗಾರಿಕೆಯನ್ನು ಈ ನಾಲ್ವರಿಗೆ ವಹಿಸಲಾಗಿತ್ತು ಎಂದು ಮೂಲಗಳು ಹೇಳಿವೆ. ಇವರು ಕೊಲಂಬೋದಿಂದ ಚೆನ್ನೈಗೆ ಬಂದಿದ್ದರು. ಬಳಿಕ ಭಾನುವಾರ ಅಹಮದಾಬಾದ್ ತಲುಪಿದ್ದರು. ವಿಮಾನ ಅಥವಾ ರೈಲಿನ ಮೂಲಕ ಮೇ 18 ಅಥವಾ 19ರಂದು ನಾಲ್ವರು ಉಗ್ರರು ಅಹಮದಾಬಾದ್ ತಲುಪಲಿದ್ದಾರೆ ಎಂಬ ಮಾಹಿತಿ ಬಂದಿತ್ತು. ಮಾಹಿತಿ ಆಧಾರದಲ್ಲಿ ತಂಡಗಳನ್ನು ರಚಿಸಿ, ಕಾರ್ಯತಂತ್ರ ರೂಪಿಸಲಾಗಿತ್ತು. ದಕ್ಷಿಣದಿಂದ ಬರುವ ಎಲ್ಲ ರೈಲು ಹಾಗೂ ವಿಮಾನಗಳ ಪ್ರಯಾಣಿಕರ ಪಟ್ಟಿ ಪರಿಶೀಲನೆ ನಡೆಸಲಾಗಿತ್ತು. ನಾಲ್ಕೂ ಮಂದಿ ಇಂಡಿಗೋ ವಿಮಾನದಲ್ಲಿ ಒಂದೇ ಪಿಎನ್‌ಆರ್ ಸಂಖ್ಯೆಯಲ್ಲಿ ಚೆನ್ನೈನಿಂದ ಅಹಮದಾಬಾದ್‌ಗೆ ಬಂದಿದ್ದರು ಎಂದು ಡಿಜಿಪಿ ವಿಕಾಸ್ ಸಹಾಯ್ ಹೇಳಿದ್ದಾರೆ.
ಏಪ್ರಿಲ್‌ನಲ್ಲಿ, ಗುಜರಾತ್ ಎಟಿಎಸ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಗುಜರಾತ್ ಕರಾವಳಿಯಲ್ಲಿ 14 ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿತ್ತು. ಅವರಿಂದ ಸುಮಾರು 602 ಕೋಟಿ ರೂ. ಮೌಲ್ಯದ 86 ಕೆಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.
Four suspected terrorists believed to be associated with the Islamic State of Iraq and Syria (ISIS) have been arrested at Sardar Vallabhbhai Patel International Airport in Ahmedabad on May 20. The four suspected terrorists are being interrogated by the Gujarat ATS officials who believe identified the four as Sri Lankan nationals.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm