ಬ್ರೇಕಿಂಗ್ ನ್ಯೂಸ್
04-05-24 03:41 pm HK News Desk ದೇಶ - ವಿದೇಶ
ಅಹ್ಮದಾಬಾದ್, ಮೇ 4: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿ ಕೋಟೆಯೊಳಗೆ ನೆಲೆಸಿರುವ ಚಕ್ರವರ್ತಿ. ಆ ಮನುಷ್ಯನಿಗೆ ಜನಸಾಮಾನ್ಯರ ಬವಣೆ, ಕಷ್ಟ ಅರ್ಥವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ, ರಾಹುಲ್ ಗಾಂಧಿಯನ್ನು ಪದೇ ಪದೇ ರಾಜಕುಮಾರ ಎಂದು ಪ್ರಸ್ತಾಪ ಮಾಡುತ್ತಿರುವುದಕ್ಕೆ ಪ್ರತಿಯಾಗಿ ಪ್ರಿಯಾಂಕ ಗಾಂಧಿ ಈ ಮಾತು ಹೇಳಿದ್ದಾರೆ.
ಗುಜರಾತಿನ ಬನಸ್ಕಾಂತದಲ್ಲಿ ನಡೆದ ಕಾಂಗ್ರೆಸ್ ನ್ಯಾಯ್ ಸಂಕಲ್ಪ್ ಸಭಾದಲ್ಲಿ ಮಾತನಾಡಿದ ಪ್ರಿಯಾಂಕ ಗಾಂಧಿ, ಮೋದಿಯವರು ನನ್ನ ಸೋದರನನ್ನು ರಾಜಕುಮಾರ ಎಂದು ಟೀಕಿಸುತ್ತಾರೆ. ಆದರೆ ಇದೇ ರಾಜಕುಮಾರ ಈ ದೇಶವನ್ನು 4 ಸಾವಿರ ಕಿಮೀ ಉದ್ದಕ್ಕೆ ಕಾಲ್ನಡಿಗೆಯಲ್ಲಿ ಸುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಪಾದಯಾತ್ರೆ ನಡೆಸಿ, ಜನರ ಕಷ್ಟಗಳನ್ನು ಅರಿತಿದ್ದಾರೆ. ರೈತರಿಂದ ಸಾಮಾನ್ಯ ಕಾರ್ಮಿಕರ ವರೆಗೂ ನೇರವಾಗಿ ಭೇಟಿಯಾಗಿ ಕಷ್ಟಗಳನ್ನು ಆಲಿಸಿದ್ದಲ್ಲದೆ, ನಿಮಗಾಗಿ ನಾವೇನು ಮಾಡಬಹುದು ಎಂದು ಕೇಳಿದ್ದಾರೆ.
ಇದೇ ವೇಳೆ, ನರೇಂದ್ರ ಮೋದಿ ಕೋಟೆಯೊಳಗಿನ ಚಕ್ರವರ್ತಿಯಾಗಿ ಆಡಳಿತ ನಡೆಸಿದ್ದಾರೆ. ಅವರನ್ನು ನೀವು ಟಿವಿಯಲ್ಲಿ ನೋಡಿದ್ದೀರಾ.. ಅವರ ಮುಖ ಎಂದೂ ಕಳೆಗುಂದಿಲ್ಲ. ಬಿಳಿ ಬಟ್ಟೆಯಲ್ಲಿ ಒಂದಿಷ್ಟೂ ಕೊಳೆಯಾಗಿಲ್ಲ. ಅವರ ಕೂದಲು ನೆಟ್ಟಗಿದೆ. ಜನರ ನಡುವೆ ಬರದವರಿಗೆ ಕಾರ್ಮಿಕರು, ರೈತರ ನೋವು ಅರ್ಥವಾಗೋದು ಹೇಗೆ.. ? ಪೆಟ್ರೋಲ್, ಡೀಸೆಲ್ ಎಷ್ಟು ದುಬಾರಿಯಾಗಿದೆ, ಕೃಷಿ ಮಾಡೋದು ಎಷ್ಟು ವೆಚ್ಚದಾಯಕ ಎಂದು ಅರ್ಥವಾಗುತ್ತದೆಯೇ..? ಪ್ರತಿ ವಸ್ತುವಿಗೂ ಜಿಎಸ್ಟಿ ತೆರಿಗೆ ಹಾಕಿದ್ದಾರೆ. ಎಲ್ಲವೂ ದುಬಾರಿಯಾಗಿದೆ, ಇದ್ಯಾವುದೂ ಮೋದಿಜೀಗೆ ಅರ್ಥ ಆಗಲ್ಲ, ಅವರು ಕೋಟೆಯಲ್ಲಿ ಬಂಧಿಯಾಗಿದ್ದಾರೆ. ಅಧಿಕಾರಿಗಳೆಲ್ಲ ಸುತ್ತಲಿದ್ದಾರೆ, ಆದರೆ ಅವರೆಲ್ಲ ಭಯದಲ್ಲಿದ್ದಾರೆ. ಯಾರು ಕೂಡ ಅವರಿಗೇನೂ ಹೇಳುವುದೂ ಇಲ್ಲ. ಯಾರಾದ್ರೂ ಧ್ವನಿ ಎತ್ತಿದರೆ ಅವರನ್ನಲ್ಲಿಯೇ ಮೌನವಾಗಿಸುತ್ತಾರೆ ಎಂದು ಪ್ರಿಯಾಂಕ ಟಾಂಗ್ ಇಟ್ಟಿದ್ದಾರೆ.
ಕಾಂಗ್ರೆಸ್ ಉಗ್ರರಿಗೆ ಲವ್ ಲೆಟರ್ ಕೊಡ್ತಿತ್ತು
ಪ್ರಧಾನಿ ಮೋದಿ ಜಾರ್ಖಂಡಲ್ಲಿ ನಡೆಸಿದ ರ್ಯಾಲಿಯಲ್ಲಿ ರಾಹುಲ್ ಗಾಂಧಿಯನ್ನು ರಾಜಕುಮಾರ ಎಂದು ಹೇಳಿ ಅಣಕಿಸಿದ್ದರು. ಅಲ್ಲದೆ, ಕಾಂಗ್ರೆಸ್ ಸರಕಾರ ಇದ್ದಾಗ ಉಗ್ರರು ದೇಶಾದ್ಯಂತ ಬಾಂಬ್ ಸ್ಫೋಟ ನಡೆಸುತ್ತಿದ್ದರು. ಪ್ರತಿಯಾಗಿ ಕಾಂಗ್ರೆಸ್ ಸರಕಾರ ಉಗ್ರರಿಗೆ ಲವ್ ಲೆಟರ್ ಕಳಿಸಿಕೊಡುತ್ತಿತ್ತು. ಪಾಕಿಸ್ಥಾನ ಲವ್ ಲೆಟರಿಗಿಂತ ಹೆಚ್ಚು ಉಗ್ರರನ್ನು ಭಾರತಕ್ಕೆ ಕಳಿಸುತ್ತಿತ್ತು. ಆದರೆ ನಿಮ್ಮ ಒಂದೊಂದು ಓಟು ನಮ್ಮ ಕೈಬಲಪಡಿಸಿತ್ತು. ಈಗ ಇರೋದು ನ್ಯೂ ಇಂಡಿಯಾ, ಘರ್ ಮೇ ಘುಸ್ ಕೇ ಮಾರ್ತಾ ಹೈ ಎಂದು ಹೇಳಿದ್ದರು. ಹಿಂದೆಲ್ಲ ಬಾಂಬ್ ಸ್ಫೋಟಗಳಾದಾಗ ಕಾಂಗ್ರೆಸ್ ಸರಕಾರ ಜಗತ್ತಿನ ಮುಂದೆ ನಮ್ಮನ್ನು ಬಚಾವ್ ಮಾಡಿ ಎಂದು ಅಳುತ್ತಿತ್ತು. ಆದರೆ ಈಗ ಪಾಕಿಸ್ತಾನ ಬಚಾವೋ, ಬಚಾವೋ ಎಂದು ಬೊಬ್ಬೆ ಹಾಕುತ್ತಿದೆ. ಕಾಂಗ್ರೆಸಿನ ರಾಜಕುಮಾರನನ್ನು ಪ್ರಧಾನಿ ಮಾಡುವಂತೆ ಪಾಕ್ ನಾಯಕರು ಪ್ರಾರ್ಥಿಸುತ್ತಿದ್ದಾರೆ. ಆದರೆ ಬಲಿಷ್ಠ ಭಾರತ, ಬಲಿಷ್ಠ ಸರಕಾರವನ್ನೇ ಬಯಸುತ್ತದೆ ಎಂದಿದ್ದರು.
Congress general secretary Priyanka Gandhi Vadra launched a scathing attack on Prime Minister Narendra Modi, calling him a "shahenshah" (emperor) who lives in castles and can never understand the plight of the common man. Priyanka Gandhi's use of the term "shahenshah" came in response to the Prime Minister's constant reference to her brother and Congress MP Rahul Gandhi as "shehzaada" (prince).
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm