ಬ್ರೇಕಿಂಗ್ ನ್ಯೂಸ್
12-04-24 08:22 pm HK NEWS ದೇಶ - ವಿದೇಶ
ನವದೆಹಲಿ, ಎ.12:ಪಶ್ಚಿಮ ಆಫ್ರಿಕಾದ ಪುಟ್ಟ ರಾಷ್ಟ್ರ ಸಿಯೆರಾ ಲಿಯೋನ್ ಝೋಂಬಿ ಎನ್ನುವ ವಿಚಿತ್ರ ಡ್ರಗ್ಸ್ ಚಟದಿಂದ ನಲುಗಿ ಹೋಗಿದೆ. ಮನುಷ್ಯನ ಎಲುಬಿನಿಂದ ತಯಾರಾಗುವ ಈ ಡ್ರಗ್ಸ್ ಚಟಕ್ಕೆ ಬಿದ್ದವರು ಮಾರಣಾಂತಿಕ ರೋಗಕ್ಕೆ ತುತ್ತಾಗುತ್ತಿದ್ದು, ಅತಿ ಹೆಚ್ಚು ಯುವಜನರೇ ಡ್ರಗ್ಸ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಸಿಯೆರಾ ಲಿಯೋನ್ ದೇಶದಲ್ಲಿ ಝೋಂಬಿ ಡ್ರಗ್ಸ್ ಕಾರಣಕ್ಕೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.
ಸ್ಮಶಾನದಲ್ಲಿ ಸಿಗುವ ಮಾನವನ ಅಸ್ಥಿಪಂಜರ, ಎಲುಬಿನ ತುಂಡುಗಳಿಂದಲೇ ಈ ಡ್ರಗ್ಸ್ ತಯಾರಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಝೋಂಬಿ ಡ್ರಗ್ಸ್ ವ್ಯಸನಕ್ಕೊಳಗಾದವರು ನಡುಬೀದಿಯಲ್ಲೇ ವಿಚಿತ್ರವಾಗಿ ವರ್ತಿಸುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಬಿಸಿ ಈ ಬಗ್ಗೆ ಅಲ್ಲಿನ ಜನರ ಭಯಾನಕ ಸ್ಥಿತಿಯ ಬಗ್ಗೆ ಸುದ್ದಿ ಪ್ರಸಾರ ಮಾಡಿದೆ. ಯುವಕರು ಡ್ರಗ್ಸ್ ವ್ಯಸನಕ್ಕೆ ಸಿಲುಕಿದ್ದಲ್ಲದೆ, ನಡುರಸ್ತೆಯಲ್ಲಿ ನಿಂತ ಸ್ಥಿತಿಯಲ್ಲೇ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ತಲೆಯನ್ನು ಹಿಂಭಾಗಕ್ಕೆ ಅಥವಾ ಮುಂಭಾಗಕ್ಕೆ ನೆಲದ ವರೆಗೂ ಬಗ್ಗಿಸುತ್ತಿದ್ದು, ತಲೆಯೆತ್ತಿ ನಡೆಯಲಾಗದ ಸ್ಥಿತಿಗೆ ತಲುಪಿದ್ದಾರೆ.
ಡ್ರಗ್ಸ್ ವ್ಯಸನಕ್ಕೆ ತುತ್ತಾದವರು ನೇರವಾಗಿ ಅಂಗಾಂಗ ವೈಫಲ್ಯಕ್ಕೆ ತುತ್ತಾಗುತ್ತಿದ್ದು, ಮರಣವನ್ನಪ್ಪುತ್ತಿದ್ದಾರೆ. ಡ್ರಗ್ಸ್ ಹಿಂದೆ ಇರುವವರು ಈಗ ರಾತ್ರಿ ವೇಳೆ ಸ್ಮಶಾನಗಳನ್ನು ಅಗೆಯುತ್ತಿದ್ದು, ಅಲ್ಲಿಂದ ಮನುಷ್ಯನ ಎಲುಬುಗಳನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಸ್ಮಶಾನ ಅಥವಾ ಅಂತ್ಯಸಂಸ್ಕಾರ ನಡೆಯುವ ಸ್ಥಳಗಳಲ್ಲೀಗ ಪೊಲೀಸರನ್ನು ನಿಯೋಜಿಸಲಾಗಿದೆ. ಡ್ರಗ್ಸ್ ದಾಸರಾದವರೇ ಸ್ಮಶಾನದಲ್ಲಿ ದರೋಡೆ ಮಾಡುತ್ತಿದ್ದಾರೆ. ಅಲ್ಲದೆ, ಈ ಡ್ರಗ್ಸ್ ಹಿಂದಿನ ದಲ್ಲಾಳಿಯಾಗಿದ್ದಾರೆ ಎನ್ನಲಾಗುತ್ತಿದೆ. ಒಮ್ಮೆ ಡ್ರಗ್ಸ್ ಪಡೆದರೆ ಏಳೆಂಟು ಗಂಟೆಗಳ ಕಾಲ ಮಾನಸಿಕ ಭ್ರಾಂತಿಗೆ ಒಳಗಾದವರ ರೀತಿ ವರ್ತಿಸುತ್ತಾರೆ.
ಆರು ವರ್ಷಗಳ ಹಿಂದೆ ಮೊದಲ ಬಾರಿಗೆ ಪಶ್ಚಿಮ ಆಫ್ರಿಕಾದಲ್ಲಿ ಈ ಮಾದರಿಯ ಡ್ರಗ್ಸ್ ಅನ್ನು ಜಗತ್ತಿನಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು. ಸಿಯೇರಾ ಲಿಯೋನ್ ದೇಶದಲ್ಲಿ ಝೋಂಬಿ ಡ್ರಗ್ಸ್ ವ್ಯಸನ ವಿಪರೀತಕ್ಕೆ ಹೋಗಿದ್ದು, ಅದನ್ನು ನಿಯಂತ್ರಿಸಲಾಗದೆ ಒದ್ದಾಡುವ ಸ್ಥಿತಿಗೆ ಒಳಗಾಗಿದೆ. ದೇಶದ ಪ್ರತಿ ಜಿಲ್ಲೆಯಲ್ಲೂ ಝೋಂಬಿಯಾ ಡ್ರಗ್ಸ್ ಸೆಂಟರ್ ಇದೆ. ಯಾರಿದರ ಹಿಂದೆ ಇದ್ದಾರೆ ಅನ್ನುವುದನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ. ಹೀಗಾಗಿ ಅನಿವಾರ್ಯ ಕಾರಣಕ್ಕೆ ತುರ್ತು ಸ್ಥಿತಿ ಘೋಷಣೆ ಮಾಡಿದ್ದೇವೆ ಎಂದು ಸಿಯೇರಾ ಲಿಯೋನ್ ದೇಶದ ಅಧ್ಯಕ್ಷ ಜೂಲಿಯಸ್ ಮಾಡಾ ಬಿಯೋ ಹೇಳಿದ್ದಾರೆ.
A psychoactive drug crafted from human bones is leaving addicts in the West African country of Sierra Leone digging up graves in order to get their fix. According to the BBC, this haunting menace has forced Sierra Leone to declare a national emergency.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 06:05 pm
Mangalore Correspondent
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
16-05-25 09:20 pm
HK News Desk
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm