ಬ್ರೇಕಿಂಗ್ ನ್ಯೂಸ್
11-04-24 10:56 pm HK NEWS ದೇಶ - ವಿದೇಶ
ವಯನಾಡ್, ಎ.11: ವಯನಾಡ್ ಲೋಕಸಭಾ ಕ್ಷೇತ್ರದ ಜನತೆ ತನ್ನನ್ನು ಆಯ್ಕೆ ಮಾಡಿದರೆ, ಟಿಪ್ಪು ನೆನಪಿಸುವ ಸುಲ್ತಾನ್ ಬತ್ತೇರಿ ಹೆಸರನ್ನು ಗಣಪತಿ ವಟ್ಟಾಂ ಎಂಬುದಾಗಿ ಬದಲಾಯಿಸುತ್ತೇನೆ ಎಂದು ಕೇರಳ ಬಿಜೆಪಿ ಅಧ್ಯಕ್ಷ, ವಯನಾಡ್ ಕ್ಷೇತ್ರದ ಅಭ್ಯರ್ಥಿ ಕೆ.ಸುರೇಂದ್ರನ್ ಹೇಳಿದ್ದು ಪರ- ವಿರೋಧ ರಾಜಕೀಯ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿದೆ.
ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಹಾಲಿ ಸಂಸದ ರಾಹುಲ್ ಗಾಂಧಿ ಅಖಾಡಕ್ಕಿಳಿದಿದ್ದು, ಬಿಜೆಪಿಯಿಂದ ಕೆ.ಸುರೇಂದ್ರನ್ ಸ್ಪರ್ಧಿಸಿದ್ದಾರೆ. ಟಿಪ್ಪು ಇತಿಹಾಸವನ್ನು ಪ್ರಸ್ತಾಪಿಸಿದ ಸುರೇಂದ್ರನ್, ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನ್ ಅಂದು ವಯನಾಡ್ ಸೇರಿದಂತೆ ಕೇರಳದಲ್ಲಿ ಲಕ್ಷಾಂತರ ಮಂದಿ ಹಿಂದುಗಳನ್ನು ಮತಾಂತರ ಮಾಡಿದ್ದ. ಟಿಪ್ಪು ಸುಲ್ತಾನ್ ಯಾರು? ಆತ ವಯನಾಡಿಗೆ ಬಂದಿದ್ದು ಯಾವಾಗ, ಆತನಿಗೆ ಯಾಕೆ ಮಹತ್ವ ನೀಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.
ಇದು ಹಿಂದಿನಿಂದಲೂ ಗಣಪತಿ ವಟ್ಟಂ ಎಂದೇ ಜನಪ್ರಿಯವಾದ ಸ್ಥಳವಾಗಿದೆ. ಇಲ್ಲಿನ ಜನರಿಗೆ ಈ ಬಗ್ಗೆ ಅರಿವು ಇದೆ. ಕಾಂಗ್ರೆಸ್ ಮತ್ತು ಎಲ್ ಡಿಎಫ್ ಈಗಲೂ ಟಿಪ್ಪು ಸುಲ್ತಾನ್ ಜತೆಗಿದೆ. ಓಲೈಕೆ ಸರ್ಕಾರಗಳೇ ಇಲ್ಲಿನ ಹೆಸರನ್ನು ಬದಲಾಯಿಸಿ ಸುಲ್ತಾನ್ ಬತ್ತೇರಿ ಎಂದು ಮಾಡಿರುವುದಾಗಿ ಸುರೇಂದ್ರನ್ ಆರೋಪಿಸಿದರು.
ಟಿಪ್ಪು ಸುಲ್ತಾನ್ ಕೇರಳದಲ್ಲಿ ಹಲವಾರು ದೇವಾಲಯಗಳನ್ನು ಧ್ವಂಸಗೊಳಿಸಿದ್ದ ಎಂಬುದಕ್ಕೆ ದಾಖಲೆಗಳಿವೆ. ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಿಸುವುದಕ್ಕೂ ನಮ್ಮ ಪಕ್ಷ ಆಕ್ಷೇಪ ಎತ್ತಿತ್ತು ಎಂದು ಸುರೇಂದ್ರನ್ ಹೇಳಿದ್ದಾರೆ.
Kerala BJP chief K Surendran, who has been fielded from Wayanad, stirred a controversy by saying that his priority would be to change the name of Sulthan Bathery town to Ganapathy Vattam if he was elected from the seat. Sulthan Bathery town is associated with Mysore ruler Tipu Sultan.
02-03-26 09:19 pm
HK News Staffer
ಗಲ್ಫ್ ಯುದ್ಧ; ಬಳ್ಳಾರಿಯಿಂದ ದುಬೈ ಟೂರ್ ತೆರಳಿದ್ದ 5...
01-03-26 09:20 pm
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
ರಾಜ್ಯ ಮುಸ್ಲಿಮರಿಗೆ ಸ್ವರ್ಗ, ಹಿಂದುಗಳಿಗೆ ನರಕವಾಗಿದ...
01-03-26 04:56 pm
02-03-26 09:23 pm
HK News Staffer
ಇರಾನ್ ಸಂಘರ್ಷ ; ಸುಪ್ರೀಂ ಲೀಡರ್ ಆಗಿ ನೇಮಿಸಲ್ಪಟ್ಟ...
02-03-26 06:51 pm
ಖಮೇನಿ ಹತ್ಯೆಗೆ ಕಾಶ್ಮೀರದಲ್ಲಿ ಬೀದಿಗಿಳಿದ ಶಿಯಾಗಳು...
02-03-26 03:10 pm
ಇರಾನ್ ಸಂಘರ್ಷ; ಭಾರತದಲ್ಲಿ ಹಿಂಸಾಚಾರ ಸಾಧ್ಯತೆ, ತುರ...
02-03-26 02:26 pm
ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ; ಸೆನ್ಸೆಕ್ಸ್ 1,000...
02-03-26 01:34 pm
02-03-26 10:06 pm
HK News Staffer
ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆಂದು ಪ್ರಚ...
02-03-26 07:57 pm
'ಬೊಲ್ಪು’ ಯೋಜನೆಯಡಿ 11 ಸ್ಟಾರ್ಟಪ್ಗಳ ಆಯ್ಕೆ ; ಭಾವ...
01-03-26 08:37 pm
PSI Nasir Hussain: ಉಡುಪಿ ; ಮ್ಯಾರಥಾನಲ್ಲಿ ಪಾಲ್ಗ...
01-03-26 04:07 pm
ಹುಲಿಕಲ್ ಘಾಟಿಯಲ್ಲಿ ದುರ್ಗಾಂಬಾ ಬಸ್ ಗೆ ಬೆಂಕಿ ; ಕು...
28-02-26 08:53 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm