ಬ್ರೇಕಿಂಗ್ ನ್ಯೂಸ್
30-12-23 12:21 pm HK News Desk ದೇಶ - ವಿದೇಶ
ಚೆನ್ನೈ, ಡಿ 30: ಗುರುವಾರ ನಿಧನರಾದ ಖ್ಯಾತ ತಮಿಳು ನಟ, ರಾಜಕಾರಣಿ ವಿಜಯಕಾಂತ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಅಹಿತಕರ ಘಟನೆ ವರದಿಯಾಗಿದೆ. ನಟ ದಳಪತಿ ವಿಜಯ್ ಅವರತ್ತ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದಾನೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ತುಣಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
71 ವರ್ಷದ ವಯಸ್ಸಿನ ವಿಜಯಕಾಂತ್ ಅನಾರೋಗ್ಯದಿಂದ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದರು. ರಾತ್ರಿ 10.30ರ ಸುಮಾರಿಗೆ ದಳಪತಿ ವಿಜಯ್ ಸಹ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ಗೌರವ ಸಲ್ಲಿಸಿದ್ದರು. ದಿವಂಗತ ರಾಜಕಾರಣಿಯ ಪತ್ನಿ ಪ್ರೇಮಲತಾ ವಿಜಯಕಾಂತ್ ಅವರಿಗೆ ಸಾಂತ್ವನ ಹೇಳಿ ಅಲ್ಲಿಂದ ತೆರಳಿದ್ದರು.
ಇದಾದ ಬಳಿಕ ಜನಸಂದಣಿಯ ನಡುವೆ ತಮ್ಮ ಕಾರು ಹತ್ತಲು ಯತ್ನಿಸಿದ ವಿಜಯ್ ಅವರತ್ತ ಅಪರಿಚಿತ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದಾನೆ ಎಂದು ಹೇಳಲಾಗಿದೆ. ಇದರ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಘಟನೆಗೆ ಸಂಬಂಧ ವಿಡಿಯೋ ತುಣುಕು ಕೂಡ ವೈರಲ್ ಆಗಿದೆ. ಇದರಲ್ಲಿ ವಿಜಯ್ ಕಡೆಗೆ ಚಪ್ಪಲಿ ತೂರಿ ಬರುತ್ತಿರುವುದು ಹಾಗೂ ಅದನ್ನು ವ್ಯಕ್ತಿಯೊಬ್ಬರು ತಡೆದಿರುವುದನ್ನು ಕಾಣಬಹುದು. ಮತ್ತೊಂದೆಡೆ, ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ವಿಜಯ್ ಬೆಂಬಲಿಗರು ಮಾತ್ರವಲ್ಲದೆ ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಡಿಎಂಡಿಕೆ ಸಂಸ್ಥಾಪಕರಾದ ವಿಜಯಕಾಂತ್ ಪಾರ್ಥಿವ ಶರೀರವನ್ನು ಸಾಲಿಗ್ರಾಮಮ್ ಮನೆಯಲ್ಲಿ ಕೆಲವು ಗಂಟೆಗಳ ಕಾಲ ಇರಿಸಲಾಗಿತ್ತು. ಬಳಿಕ ಡಿಎಂಡಿಕೆ ಪ್ರಧಾನ ಕಚೇರಿಗೆ ಮೆರವಣಿಗೆಯಲ್ಲಿ ತರಲಾಯಿತು. ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಸಂಸದ ಟಿ.ಆರ್.ಬಾಲು ಸೇರಿ ಹಲವು ರಾಜಕಾರಣಿಗಳು ಅಂತಿಮ ದರ್ಶನ ಪಡೆದರು.
ವಿಜಯ್ ಅವರ ತಂದೆ ಎಸ್ ಎ ಚಂದ್ರಶೇಖರ್ ನಿರ್ದೇಶನ ಮಾಡಿದ್ದ ಹಲವು ಸಿನಿಮಾಗಳಲ್ಲಿ ವಿಜಯಕಾಂತ್ ನಟಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ 'ಸತ್ತಂ ಒರು ಇರುತ್ತರೈ', 'ವಸಂತ ರಾಗಂ', 'ಕುಡುಂಬಂ', 'ವೆಟ್ರಿ'.. ಈ ಎಲ್ಲ ಸಿನಿಮಾಗಳಲ್ಲೂ ವಿಜಯಕಾಂತ್ ಹೀರೋ ಆಗಿದ್ದರೆ, ಬಾಲ ನಟನಾಗಿ 'ದಳಪತಿ' ವಿಜಯ್ ನಟಿಸಿದ್ದರು. ಆನಂತರ ಪುತ್ರ ವಿಜಯ್‌ಗಾಗಿ ಎಸ್ ಎ ಚಂದ್ರಶೇಖರ್ ಅವರು 'ಸೆಂಧೂರಪಂಡಿ' ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಆ ಸಿನಿಮಾದಲ್ಲಿ ವಿಜಯಕಾಂತ್ ಮುಖ್ಯ ಪಾತ್ರ ಮಾಡಿದ್ದರು ಮತ್ತು ನಟನೆಗಾಗಿ ಯಾವುದೇ ಸಂಭಾವನೆಯನ್ನು ವಿಜಯಕಾಂತ್ ಪಡೆದಿರಲಿಲ್ಲ. ವಿಜಯ್ ಕುಟುಂಬದ ಜೊತೆಗೆ ವಿಜಯಕಾಂತ್ ಅವರಿಗೆ ಯಾವ ಮಟ್ಟದ ಪ್ರೀತಿ ಇತ್ತು ಎಂಬುದಕ್ಕೆ ಇದು ಉದಾಹರಣೆ ಆಗಿದೆ.
An unidentified man threw a slipper at actor #ThalapathyVijay , fortunately Vijay manage to escape the hit. Incident happened when actor attended the funeral of Captain Vijaykanth.#Vijay #ThalapathiVijay #Vijayakant #VijayakanthFuneral #Vijaykanth #CaptainVijayakanth pic.twitter.com/1ottwuMLhC
— cine_sdn (@sdn789_) December 29, 2023
Thalapathy Vijay was attacked at Vijaykanth’s funeral in Chennai on Friday. The Tamil actor joined the film fraternity to pay his last respects at the funeral. However, an angry mob of mourners attacked Vijay, with one even hitting him with a slipper. Vijaykanth died on Thursday, December 28.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm