ಬ್ರೇಕಿಂಗ್ ನ್ಯೂಸ್
24-12-23 09:07 pm HK News Desk ದೇಶ - ವಿದೇಶ
ನವದೆಹಲಿ, ಡಿ.24: ಮಹತ್ವದ ಬೆಳವಣಿಗೆಯಲ್ಲಿ ಮೊನ್ನೆಯಷ್ಟೇ ಹೊಸದಾಗಿ ಆಯ್ಕೆಯಾದ ಸಂಜಯ್ ಸಿಂಗ್ ನೇತೃತ್ವದ ಭಾರತೀಯ ಕುಸ್ತಿ ಫೆಡರೇಶನ್ ಸಮಿತಿಯನ್ನು ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿ ಆದೇಶ ಮಾಡಿದೆ.
ಕುಸ್ತಿ ಫೆಡರೇಶನ್ ಹೊಸತಾಗಿದ್ದರೂ ಹಳೆಯ ಅಧ್ಯಕ್ಷರದ್ದೇ ಹಿಡಿತದಲ್ಲಿದೆ, ಕುಸ್ತಿ ಪಂದ್ಯಾಟ ನಡೆಸುವ ವಿಚಾರದಲ್ಲಿ ಒಕ್ಕೂಟದ ನಿಯಮವನ್ನು ಉಲ್ಲಂಘಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಅಲ್ಲದೆ, ಅದನ್ನು ಹಿಂದಿನ ಅಧ್ಯಕ್ಷರ ಊರಲ್ಲೇ ತರಾತುರಿಯಲ್ಲಿ ಆಯೋಜಿಸಿರುವುದು ಆಕ್ಷೇಪಾರ್ಹ ಎಂದು ಕ್ರೀಡಾ ಸಚಿವಾಲಯ ನೂತನ ಸಮಿತಿಯನ್ನೇ ಅಮಾನತುಗೊಳಿಸಿದ್ದಾಗಿ ಹೇಳಿಕೊಂಡಿದೆ. ಆದರೆ ಕುಸ್ತಿ ಒಕ್ಕೂಟಕ್ಕೆ ಹೊಸತಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸಂಜಯ್ ಸಿಂಗ್ ಬಗ್ಗೆ ಭಾರೀ ಟೀಕೆ ಎದುರಾಗಿತ್ತು. ಕುಸ್ತಿ ಪಟು ಸಾಕ್ಷಿ ಮಲಿಕ್ ಕ್ರೀಡೆಯನ್ನೇ ತೊರೆಯುವ ಮಾತನ್ನಾಡಿದ್ದರೆ, ಬಜರಂಗ್ ಪುನಿಯಾ, ವೀರೇಂದ್ರ ಸಿಂಗ್ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಎಚ್ಚತ್ತುಕೊಂಡ ಕೇಂದ್ರ ಸರ್ಕಾರ, ಆರೋಪ ಹೊತ್ತ ಬ್ರಿಜ್ ಭೂಷಣ್ ಸಿಂಗ್ ಆಪ್ತರಿದ್ದ ಕುಸ್ತಿ ಒಕ್ಕೂಟದ ಸಮಿತಿಯನ್ನೇ ಅಮಾನತು ಗೊಳಿಸಿದೆ.
ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿ ಸಂಜಯ್ ಕುಮಾರ್ ಸಿಂಗ್ ಆಯ್ಕೆಯಾದ ಬೆನ್ನಲ್ಲೇ 15 ಮತ್ತು 20 ವರ್ಷದ ಒಳಗಿನ ರಾಷ್ಟ್ರೀಯ ಕುಸ್ತಿ ಪಂದ್ಯಾಟವನ್ನು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನಂದಿನಿ ನಗರದಲ್ಲಿ ನಡೆಸುವುದಾಗಿ ಘೋಷಿಸಿದ್ದರು. ರಾಷ್ಟ್ರೀಯ ಕುಸ್ತಿ ಪಟುಗಳಿಗೆ ಸೂಚನೆ ನೀಡದೆ ಮತ್ತು ಒಕ್ಕೂಟದ ಸಂವಿಧಾನದ ನಿಬಂಧನೆಗಳನ್ನು ಅನುಸರಿಸದೆ ಈ ಘೋಷಣೆಯನ್ನು ಮಾಡಲಾಗಿದೆ ಎಂದು ಸಚಿವಾಲಯ ಹೇಳಿಕೊಂಡಿದೆ. ಗೊಂಡಾ ಜಿಲ್ಲೆ ಹಿಂದಿನ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಪ್ರತಿನಿಧಿಸುವ ಕ್ಷೇತ್ರವಾಗಿದ್ದು ಇದಕ್ಕಾಗಿ ತೀವ್ರ ವಿರೋಧ ವ್ಯಕ್ತವಾಗಿತ್ತು.
The Sports Ministry suspended the Wrestling Federation of India (WFI) on Sunday until further notice following an abrupt announcement of the national championships by the newly-elected body.
27-03-25 06:41 pm
HK News Desk
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
BJP Yatnal Out, Vijayapura, BY Vijayendra: ಬಿ...
26-03-25 09:42 pm
27-03-25 04:07 pm
HK News Desk
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
28-03-25 11:52 am
Mangalore Correspondent
Mangalore Jail, Mobile Jammer: ಎತ್ತಿಗೆ ಜ್ವರ ಬ...
27-03-25 08:45 pm
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm